ದಾವಣಗೆರೆ: ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿ ಮೇಲೆ ಕಾಮುಕನೋರ್ವ ಅತ್ಯಾಚಾರಕ್ಕೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ 2ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ ನ್ಯಾಯಾಲಯ ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ, 20 ಸಾವಿರ ರೂ. ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
2019ರಲ್ಲಿ ಮನೆ ಮುಂಭಾಗ ಆಟವಾಡುತ್ತಿದ್ದ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಯತ್ನ ನಡೆದಿತ್ತು. ಈ ಸಂಬಂಧ ದಾವಣಗೆರೆ 2ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ ನ್ಯಾಯಾಲಯ ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ, 20 ಸಾವಿರ ದಂಡ ವಿಧಿಸಿ ತೀರ್ಪು ನೀಡಿರುವುದು ಸಂತ್ರಸ್ತೆಗೆ ನ್ಯಾಯ ದೊರಕಿದಂತಾಗಿದೆ. ನ್ಯಾಯಾಧೀಶರಾದ ಶ್ರೀಪಾದ್ ಎಸ್ ಅವರಿಂದ ತೀರ್ಪು ಹೊರಬಿದ್ದಿದೆ.
ಪ್ರಕರಣ:
2019ರ ಏಪ್ರಿಲ್ 15ರಂದು ಎಸ್ಜೆಎಂ ನಗರದಲ್ಲಿ ಈ ಘಟನೆ ನಡೆದಿತ್ತು. ಮನೆ ಮುಂದೆ ಆಟವಾಡುತ್ತಿದ್ದ 6 ವರ್ಷದ ಬಾಲಕಿ ಮೇಲೆ ಎದುರಿನ ಮನೆಯಾತ ಅತ್ಯಾಚಾರಕ್ಕೆ ಯತ್ನಿಸಿ ಬಾಲಕಿಯ ಕುಟುಂಬದವರ ಕೈಗೆ ತಗಲಾಕಿಕೊಂಡಿದ್ದ. ಅತ್ಯಾಚಾರ ಯತ್ನ ಮಾಡಿರುವುದು ತನಿಖೆ ಹಾಗು ಪೊಲೀಸರ ವಿಚಾರಣೆಯಿಂದ ಸಾಬೀತಾಗಿದ್ದು, ಆತನಿಗೆ ಶಿಕ್ಷೆ ಸಿಕ್ಕಿದೆ. ಸರ್ಕಾರಿ ಅಭಿಯೋಜಕ ಕೆಜಿ ಜಯಪ್ಪ ವಾದ ಮಂಡಿಸಿದ್ದರು.
ಇದನ್ನೂ ಓದಿ: ಹಿಂದೂ ಮಹಾಸಭಾ ಮುಗಿಸುವ ಕಾರ್ಯವನ್ನ ಬಿಜೆಪಿ ಮಾಡಿದೆ: ರಾಜೇಶ್ ಪವಿತ್ರನ್