ETV Bharat / city

ನಾಯಕನ ಉತ್ತಮ ಆಡಳಿತದ ಬಗ್ಗೆ ಜನರಿಗೆ ತಿಳಿಸಲು ಅಮೃತ ಮಹೋತ್ಸವ: ಹೆಚ್ ಸಿ ಮಹಾದೇವಪ್ಪ‌ - ಈಟಿವಿ ಭಾರತ್​ ಕನ್ನಡ

ಅಮೃತ ಮಹೋತ್ಸವ ಕಾರ್ಯಕ್ರಮ ಪಕ್ಷದಲ್ಲಿರುವ ಸಿದ್ದರಾಮಯ್ಯ ಅವರ ಅಭಿಮಾನಿಗಳು ಮಾಡುವುದು. ಇದು ಪಕ್ಷದ ಕಾರ್ಯಕ್ರಮ ಅಲ್ಲ, ಹಾಗೇ ಇದು ವ್ಯಕ್ತಿ ಪೂಜೆಯೂ ಅಲ್ಲ ಎಂದು ಹೆಚ್ ಸಿ ಮಹಾದೇವಪ್ಪ‌ ಸ್ಪಷ್ಟಪಡಿಸಿದ್ದಾರೆ.

H c Mahadevappa
ಹೆಚ್ ಸಿ ಮಹಾದೇವಪ್ಪ‌
author img

By

Published : Jul 27, 2022, 9:53 PM IST

ದಾವಣಗೆರೆ : ಕೋಮುವಾದ ನಿರ್ನಾಮವಾಗಿ ಒಳ್ಳೆಯ ಅಡಳಿತ ನಡೆಸಲು ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಆಚರಣೆ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಹೆಚ್ ಸಿ ಮಹಾದೇವಪ್ಪ‌ ಹೇಳಿದ್ದಾರೆ.

ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ ನಂತರ ಸುದ್ದಿಗೋಷ್ಠಿ‌ನಡೆಸಿ ಮಾತನಾಡಿದರು. ಆ.3 ರಂದು ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮದ ಬಗ್ಗೆ ಜನರ ಉತ್ಸಾಹ ನೋಡಿದರೆ 8-10 ಲಕ್ಷ ಜನ ಸೇರುವ ಸಾಧ್ಯತೆ ಇದೆ. 50 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ವೇದಿಕೆ ನಿರ್ಮಾಣ ಇನ್ನು ಮೂರು ದಿನಗಳಲ್ಲಿ ಮುಕ್ತಾಯವಾಗಲಿದೆ. ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಸಿದ್ದತೆ ಮಾಡಿಕೊಳ್ಳುತ್ತೇವೆ ಎಂದರು.

ಉತ್ತಮ ನಾಯಕನ ಆಡಳಿತದ ಬಗ್ಗೆ ಜನರಿಗೆ ತಿಳಿಸಲು ಅಮೃತ ಮಹೋತ್ಸವ ಕಾರ್ಯಕ್ರಮ

ಶ್ರೀರಾಮ ನವಮಿಯಲ್ಲಿ ಕೊಡುವ ಮಜ್ಜಿಗೆ ಮೇಲೆ ಸರ್ಕಾರ ಶೇ 5ರಷ್ಟು ಜಿಎಸ್​ಟಿ ಹಾಕಿದ್ದಾರೆ, ಅಂತಹ ಆಡಳಿತವನ್ನು ಕೊನೆಗೊಳಿಸಲು ಈ ಅಮೃತ ಮಹೋತ್ಸವ ಕಾರ್ಯಕ್ರಮ. ಈ ಕಾರ್ಯಕ್ರಮ ವ್ಯಕ್ತಿ ಪೂಜೆ ಅಲ್ಲ, ಒಬ್ಬ ಮಹಾನ್ ನಾಯಕನ 40 ವರ್ಷದ ಸಾರ್ವಜನಿಕ ಜೀವನದ ಬಗ್ಗೆ ಜನರಿಗೆ ತಿಳಿಸುವ ಕಾರ್ಯ. ಇದು ಪಕ್ಷದ ಕಾರ್ಯಕ್ರಮ ಅಲ್ಲ, ಪಕ್ಷದಲ್ಲಿನ ಜನರು ಸೇರಿ ಮಾಡುತ್ತಿರುವ ಕಾರ್ಯಕ್ರಮ ಎಂದರು.

ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ, ರಣದೀಪ್ ಸುರ್ಜೆವಾಲಾ, ಮಲ್ಲಿಕಾರ್ಜುನ ಖರ್ಗೆ, ಮಾಜಿ ಕೇಂದ್ರ ಸಚಿವ ಮುನಿಯಪ್ಪ ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ. ಹೀಗಾಗಿ ಬೇರೆ ಪಕ್ಷದ ಮುಖಂಡರನ್ನು ಆಹ್ವಾನ ಮಾಡಿಲ್ಲ ಎಂದರು.

ಇದನ್ನೂ ಓದಿ : ಸಾವಿನ ಮನೆಯಲ್ಲಿ ಸಂಭ್ರಮ ಯಾಕೆ? ಹರ್ಷಾಚರಣೆ ಮಾಡಲು ರಾಜ್ಯದಲ್ಲಿ ಶಾಂತಿ ನೆಲೆಸಿರಬೇಕಲ್ಲವೇ? : ಹೆಚ್​ಡಿಕೆ ಕಿಡಿ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.