ದಾವಣಗೆರೆ: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತಮ್ಮ ಸ್ಥಾನದಿಂದ ಇಳಿದ ಬಳಿಕ ಇದೀಗ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರು ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ತಂದೆಯ ಪರ್ಯಾಯವಾಗಿ ರಾಜಕೀಯದಲ್ಲಿ ನೆಲೆಕಾಣಲು ಹೋರಾಡುತ್ತಿದ್ದಾರೆ. ಇಂದು ದಾವಣಗೆರೆಗೆ ಭೇಟಿ ನೀಡಿದ್ದ ವೇಳೆ ಅವರ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು 'ಮುಂದಿನ ಸಿಎಂ ವಿಜಯೇಂದ್ರ' ಎಂದು ಘೋಷಣೆ ಕೂಗಿದ್ದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ದಾವಣಗೆರೆ ಜಿಲ್ಲೆಯ ಹರಿಹರ ಕ್ಷೇತ್ರದ ಮಾಜಿ ಶಾಸಕ ಬಿ.ಪಿ. ಹರೀಶ್ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ರೋಡ್ ಶೋನಲ್ಲಿ ಭಾಗಿಯಾದ ವಿಜಯೇಂದ್ರ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಬಳಿಕ ಪಿಬಿ ರಸ್ತೆಯಲ್ಲಿ ಭರ್ಜರಿ ರೋಡ್ ಶೋ ಮಾಡುವ ವೇಳೆ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಮುಂದಿನ ಸಿಎಂ ವಿಜಯೇಂದ್ರ ಅಣ್ಣನವರು ಎಂದು ಘೋಷಣೆ ಮೊಳಗಿಸಿದ್ದಾರೆ.
ಮುಂದಿನ ಸಿಎಂ ವಿಜಯೇಂದ್ರ ಅವರಿಗೆ ಜೈ ಎಂದು ಜೈಕಾರ ಹಾಕಿದ್ದಾರೆ. ಇದಲ್ಲದಏ ಹರಿಹರಕ್ಕೆ ಬರುವ ಮುನ್ನ ದಾವಣಗೆರೆಗೆ ಭೇಟಿ ನೀಡಿದ ವಿಜಯೇಂದ್ರವರಿಗೆ ಅಪೂರ್ವ ರೆಸಾರ್ಟ್ ಬಳಿ ಬಿಜೆಪಿ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿ ಅಲ್ಲಿಯೂ ಮುಂದಿನ ಸಿಎಂ ವಿಜಯೇಂದ್ರಣ್ಣ ಎಂದು ಕೂಗಿದ್ದಾರೆ.