ETV Bharat / city

'ಬಿಕಿನಿ ಬಗ್ಗೆ ಶಾಸಕರೋರ್ವರು ಹೇಳಿಕೆ ಕೊಡ್ತಾರೆ, ಅವರ ಕುಟುಂಬದವರೇ ತುಂಡುಬಟ್ಟೆ ಧರಿಸ್ತಾರೆ' - ಬಿಜೆಪಿ ವಿರುದ್ಧ ಶಾಂತನಗೌಡ ಆಕ್ರೋಶ

ಹೆಣ್ಣು ಮಕ್ಕಳು ತುಂಡು ಬಟ್ಟೆ ಧರಿಸುವ ಬಗ್ಗೆ ಶಾಸಕರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಆದ್ರೆ, ಅವರ ಕುಟುಂಬದವರೇ ತುಂಡು ಬಟ್ಟೆ ಧರಸಿದ ಬಗ್ಗೆ ಮೊಬೈಲ್​ನಲ್ಲಿ ಫೋಟೋಗಳು ಹರಿದಾಡುತ್ತಿವೆ. ತಮ್ಮ ಕುಟುಂಬದವರ ಬಗ್ಗೆ ವಿಚಾರ ಮಾಡದೇ ಬೇರೆಯವರ ಬಗ್ಗೆ ಹೇಳುವುದು ಸರಿಯಲ್ಲ..

former Congress MLA Shantanagouda
ಮಾಜಿ ಕಾಂಗ್ರೆಸ್ ಶಾಸಕ ಶಾಂತನಗೌಡ
author img

By

Published : Feb 13, 2022, 6:47 PM IST

ದಾವಣಗೆರೆ : ಬಿಕಿನಿ ಧರಿಸಿದ ಯುವತಿಯರನ್ನು ನೋಡಿದ್ರೆ ಉದ್ರೇಕ ಬರುತ್ತೆ ಅನ್ನೋ ಶಾಸಕ ರೇಣುಕಾಚಾರ್ಯ ಅವರ ಹೇಳಿಕೆಗೆ ಹೊನ್ನಾಳಿ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ಶಾಂತನಗೌಡ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಮಾತನಾಡಿದ ಅವರು, ಅವರ ತಟ್ಟೆಯಲ್ಲಿಯೇ ಹೆಗ್ಗಣ ಬಿದ್ದಿದೆ. ಆದ್ರೆ, ಅವರು ಮಾತ್ರ ಮತ್ತೊಬ್ಬರ ತಟ್ಟೆ ಬಗ್ಗೆ ಮಾತಾಡುತ್ತಾರೆ ಎಂದು ಬಿಜೆಪಿ ಶಾಸಕ ಎಂ ಪಿ ರೇಣುಕಾಚಾರ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಶಾಸಕ ರೇಣುಕಾಚಾರ್ಯ ವಿರುದ್ಧ ಮಾಜಿ ಕಾಂಗ್ರೆಸ್ ಶಾಸಕ ಶಾಂತನಗೌಡ ಆಕ್ರೋಶ ವ್ಯಕ್ತಪಡಿಸಿರುವುದು..

ಹೆಣ್ಣು ಮಕ್ಕಳು ತುಂಡು ಬಟ್ಟೆ ಧರಿಸುವ ಬಗ್ಗೆ ಶಾಸಕರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಆದ್ರೆ, ಅವರ ಕುಟುಂಬದವರೇ ತುಂಡು ಬಟ್ಟೆ ಧರಸಿದ ಬಗ್ಗೆ ಮೊಬೈಲ್​ನಲ್ಲಿ ಫೋಟೋಗಳು ಹರಿದಾಡುತ್ತಿವೆ. ತಮ್ಮ ಕುಟುಂಬದವರ ಬಗ್ಗೆ ವಿಚಾರ ಮಾಡದೇ ಬೇರೆಯವರ ಬಗ್ಗೆ ಹೇಳುವುದು ಸರಿಯಲ್ಲ.

ಅವರ ಕುಟುಂಬ ಸದಸ್ಯರು ಧರಿಸುವ ಬಟ್ಟೆ ಎಂಥಹದ್ದು ಎಂಬುದು ಎಲ್ಲರಿಗೂ ಗೊತ್ತಾಗಿದೆ ಎಂದು ರೇಣುಕಾಚಾರ್ಯ ವಿರುದ್ಧ ನೇರ ವಾಗ್ದಾಳಿ‌ ನಡೆಸಿದರು.

ಇದನ್ನೂ ಓದಿ: ನಾಳೆಯಿಂದ ಶಾಲೆಗಳು ಪುನಾರಂಭ : ಕಲಬುರಗಿಯಲ್ಲಿ ಪೊಲೀಸ್​​​ ಕಟ್ಟೆಚ್ಚರ

ಇನ್ನು ಸಾಮಾಜಿಕ ಜಾಲತಾಣದಲ್ಲಿ ಶಾಸಕ ರೇಣುಕಾಚಾರ್ಯ ಅವರ ಮಗಳು ತುಂಡು ಬಟ್ಟೆ ಧರಿಸಿರುವ ಫೋಟೋ ಹಾಕಿ ಕೆಲವರು 'ನಮ್ ಅಣ್ಣನ ಮಗಳ ಬಟ್ಟೆ ನೋಡಿ ಯಾರು ಉದ್ರೇಕಕ್ಕೆ ಒಳಗಾಗಬಾರದು' ಎಂದು ಬರೆದು ಫೋಟೋ ಶೇರ್​ ಮಾಡಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.