ETV Bharat / city

ವಿಧಾನ ಪರಿಷತ್ ಚುನಾವಣೆ: ಹರಿದು ಹಂಚಿ ಹೋದ ದಾವಣಗೆರೆ - J.H. Patel

ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ (Legislative Council Election) ಕಾವು ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದೆ. ಈ ಬೆನ್ನಲ್ಲೇ ಇದೀಗ ದಾವಣಗೆರೆಯನ್ನು ವಿಧಾನ ಪರಿಷತ್ ಕ್ಷೇತ್ರವನ್ನಾಗಿ ಮಾಡಿ ಎನ್ನುವ ಕೂಗು ಕೇಳಿ ಬಂದಿದೆ.

ದಾವಣಗೆರೆ ವಿಧಾನ ಪರಿಷತ್ ಕ್ಷೇತ್ರವೆಂದು ಘೋಷಿಸುವಂತೆ ಸ್ಥಳೀಯರು ಮನವಿ
Davangere legislative council election
author img

By

Published : Nov 17, 2021, 12:27 PM IST

ದಾವಣಗೆರೆ: ದಾವಣಗೆರೆ ಜಿಲ್ಲೆ ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದುವರೆದಿದ್ದರೂ ರಾಜಕೀಯವಾಗಿ ಮಾತ್ರ ಹಿಂದುಳಿದಿದೆ ಎನ್ನಲಾಗಿದೆ. 7 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದರೂ ಪರಿಷತ್ ಚುನಾವಣೆಯಲ್ಲಿ ಮಾತ್ರ ಮಲತಾಯಿ ಧೋರಣೆ ಅನುಭವಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಈಗಾಗಲೇ ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ (Council Election) ಕಾವು ಹೆಚ್ಚಾಗತೊಡಗಿದ್ದು, ಚುನಾವಣಾ ಆಯೋಗ ದಿನಾಂಕ‌ ಕೂಡ ನಿಗದಿ ಮಾಡಿದೆ. 25 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳೇ ಗೆಲುವು ಸಾಧಿಸಬೇಕು ಎಂದು ಮೂರು ಪಕ್ಷಗಳು ಕಸರತ್ತು ಪ್ರಾರಂಭಿಸಿವೆ. ಈ ಬೆನ್ನಲ್ಲೇ ಇದೀಗ ದಾವಣಗೆರೆಯನ್ನು ವಿಧಾನ ಪರಿಷತ್ ಕ್ಷೇತ್ರವನ್ನಾಗಿ ಮಾಡಿ ಎನ್ನುವ ಕೂಗು ಕೇಳಿ ಬರುತ್ತಿದೆ.

ದಾವಣಗೆರೆ ವಿಧಾನ ಪರಿಷತ್ ಕ್ಷೇತ್ರವೆಂದು ಘೋಷಿಸುವಂತೆ ಸ್ಥಳೀಯರು ಮನವಿ

ಭೌಗೋಳಿಕವಾಗಿ ವಿಸ್ತಾರ ಹೊಂದಿರುವ ದಾವಣಗೆರೆಯಲ್ಲಿ ಏಳು ವಿಧಾನಸಭಾ ಕ್ಷೇತ್ರ, ಒಂದು ಲೋಕಸಭಾ ಕ್ಷೇತ್ರವಿದ್ದು, ಈಗ ವಿಧಾನ ಪರಿಷತ್ ಕ್ಷೇತ್ರವನ್ನಾಗಿ ಮಾಡಿ ಎಂದು ಎಲ್ಲ ಪಕ್ಷದ ನಾಯಕರು ಮನವಿ ಮಾಡುತ್ತಿದ್ದಾರೆ. ಪ್ರತಿ ಬಾರಿ ವಿಧಾನ ಪರಿಷತ್ ಚುನಾವಣೆ ಬಂದಾಗ ಜಿಲ್ಲೆಯನ್ನು ‌ಇಬ್ಭಾಗ ಮಾಡಲಾಗುತ್ತದೆ.

ಚಿತ್ರದುರ್ಗ ಕ್ಷೇತ್ರಕ್ಕೆ ದಾವಣಗೆರೆ ತಾಲೂಕು, ಹರಿಹರ, ಜಗಳೂರು ಸೇರಿದರೆ, ಇತ್ತ ಶಿವಮೊಗ್ಗಕ್ಕೆ ಚನ್ನಗಿರಿ, ಹೊನ್ನಾಳಿ, ನ್ಯಾಮತಿ ತಾಲೂಕುಗಳನ್ನು ಸೇರಿಸಲಾಗುತ್ತದೆ. ಆದ್ದರಿಂದ ಮುಂದಿನ ಚುನಾವಣೆಯೊಳಗೆ ದಾವಣಗೆರೆಯನ್ನು ವಿಧಾನ ಪರಿಷತ್ ಕ್ಷೇತ್ರವನ್ನಾಗಿ ಮಾಡಿ ಎಂದು ಜಿಲ್ಲಾ ಮುಖಂಡರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ರಾಮನಗರದಲ್ಲಿ ಧಾರಾಕಾರ ಮಳೆ: ಕಣ್ವ ಜಲಾಶಯದಲ್ಲಿ ತೇಲಿಬಂದವು ಮೃತದೇಹಗಳು

ದಾವಣಗೆರೆ ಇತಿಹಾಸ:

ದಾವಣಗೆರೆ ಜಿಲ್ಲೆಯನ್ನು 1997 ರಲ್ಲಿ ಅಂದಿನ ಸಿಎಂ ಜೆ.ಹೆಚ್. ಪಟೇಲ್ ( J.H. Patel) ಅವರು ಚಿತ್ರದುರ್ಗ ದಿಂದ ಬೇರ್ಪಡಿಸಿ ಹೊಸ ಜಿಲ್ಲೆಯನ್ನಾಗಿ ಮಾಡಿದ್ದರು. ಆಗ ಚಿತ್ರದುರ್ಗದಿಂದ ಜಗಳೂರು, ದಾವಣಗೆರೆ, ಹರಿಹರ ಹಾಗೂ ಬಳ್ಳಾರಿಯಿಂದ ಹರಪ್ಪನಹಳ್ಳಿ, ಶಿವಮೊಗ್ಗದಿಂದ ಚನ್ನಗಿರಿ, ಹೊನ್ನಾಳಿಯನ್ನು ಸೇರಿಸಿ ದಾವಣಗೆರೆ ಜಿಲ್ಲೆಯನ್ನಾಗಿ ಮಾಡಿದ್ದರು.

ಆದರೆ, ವಿಧಾನ ಪರಿಷತ್ ಚುನಾವಣೆಯನ್ನು ಮಾತ್ರ ಮೊದಲು ಇದ್ದ ಕ್ಷೇತ್ರಗಳಂತೆಯೇ ಮಾಡಿ, ಈಗಲೂ ಹಾಗೆಯೇ ಚುನಾವಣೆ ನಡೆಸುತ್ತಿದ್ದಾರೆ. ಇದರಿಂದ ದಾವಣಗೆರೆ ಇಬ್ಭಾಗವಾಗಿದ್ದು, ಜಿಲ್ಲೆಗೆ ಒಬ್ಬ ವಿಧಾನ ಪರಿಷತ್ ಸದಸ್ಯ ಇಲ್ಲದಂತಾಗಿದೆ. ಗೆದ್ದ ಅಭ್ಯರ್ಥಿಗಳು ಚಿತ್ರದುರ್ಗ, ಶಿವಮೊಗ್ಗ ನೋಡಿಕೊಂಡು‌ ಸುಮ್ಮನಾದರೆ ಅನಾಥವಾಗುವುದು ದಾವಣಗೆರೆ ಮಾತ್ರ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.