ದಾವಣಗೆರೆ : ವಿಧಾನ ಪರಿಷತ್ ಚುನಾವಣೆಯ ಮತದಾನ ಹಿನ್ನೆಲೆ ಜಿಲ್ಲೆಯ ಜನಪ್ರತಿನಿದಿಗಳು ತಮ್ಮ ಹಕ್ಕು ಚಲಾಯಿಸಿದ್ರು. ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರು ಟ್ರ್ಯಾಕ್ಟರ್‌ನಲ್ಲಿ ಮತಗಟ್ಟೆಗೆ ಬಂದರು. ಹೊನ್ನಾಳಿ ನಗರದ ಪುರಸಭೆಯಲ್ಲಿರುವ ಮತಘಟ್ಟೆಯಲ್ಲಿ ಪುರಸಭೆಯ 14 ಜನ ಸದಸ್ಯರೊಂದಿಗೆ ಹಕ್ಕು ಚಲಾಯಿಸಿದರು.
ದಾವಣಗೆರೆ ಮಹಾನಗರ ಪಾಲಿಕೆಗೆ ಆಗಮಿಸಿದ ಸಂಸದ ಜಿ ಎಂ ಸಿದ್ದೇಶ್ವರ್ ಪಾಲಿಕೆಯ ಸದಸ್ಯರೊಂದಿಗೆ ಆಗಮಿಸಿ ಮತದಾನ ಮಾಡಿದರು. ಇದಲ್ಲದೆ ಹಾಲಿ ಪರಿಷತ್ ಸದಸ್ಯರಾದ ತೇಜಸ್ವಿನಿ ಗೌಡ ಹಾಗೂ ಆರ್.ಶಂಕರ್ ಕೂಡ ದಾವಣಗೆರೆ ಮಹಾನಗರ ಪಾಲಿಕೆಯ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಕೂಡ ತಮ್ಮ ಕಾಂಗ್ರೆಸ್ ಪಾಲಿಕೆ ಸದಸ್ಯರೊಂದಿಗೆ ಮಹಾನಗರ ಪಾಲಿಕೆ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.