ETV Bharat / city

ವಿಷ ಕೊಡಿ ಕುಡಿತಿನಿ, ಆಸ್ಪತ್ರೆಗೆ ಮಾತ್ರ ಬರಲ್ಲ: ಕೊರೊನಾ ಸೋಂಕಿತನ ರಾದ್ಧಾಂತಕ್ಕೆ ಅಧಿಕಾರಿಗಳು ಹೈರಾಣ!

author img

By

Published : Jun 15, 2021, 5:35 PM IST

ಸೋಂಕಿತನೋರ್ವನ್ನು ಕೋವಿಡ್ ಕೇರ್ ಸೆಂಟರ್​ಗೆ ಕರೆದುಕೊಂಡು ಹೋಗಲು ಬಾನುವಳ್ಳಿ ಗ್ರಾಮಕ್ಕೆ ಅಧಿಕಾರಿಗಳು ಬಂದಿದ್ದರು. ಈ ಸಂದರ್ಭದಲ್ಲಿ ಸೋಂಕಿತ ವ್ಯಕ್ತಿ, ವಿಷ ಕೊಡಿ ಕುಡಿತೀನಿ.. ಆದ್ರೆ ಕೋವಿಡ್ ಕೇರ್ ಸೆಂಟರ್​ಗೆ ಮಾತ್ರ ಬರೋಲ್ಲ ಎಂದು ಮನೆಗೆ ಹೋಗಿ ವಿಷದ ಬಾಟಲಿ ತಂದು ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾನೆ. ಸೋಂಕಿತನ ರಾದ್ಧಾಂತಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸ ಪಡುವಂತಾಯಿತು.

corona-infected-gave-trouble-to-officials-in-davanagere
ಕೊರೊನಾ ಸೋಂಕಿತನ ರಾದ್ದಾಂತ

ದಾವಣಗೆರೆ: ಸೋಂಕಿತನೋರ್ವ ಕೋವಿಡ್ ಕೇರ್ ಸೆಂಟರ್​ಗೆ ತೆರಳದೆ ಅಧಿಕಾರಿಗಳ ಮುಂದೆ ವಿಷದ ಬಾಟಲಿ ಹಿಡಿದು ರಾದ್ಧಾಂತ ಮಾಡಿದ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಬಾನುವಳ್ಳಿ ಗ್ರಾಮದಲ್ಲಿ ನಡೆದಿದೆ.

ಕೊರೊನಾ ಸೋಂಕಿತನ ರಾದ್ಧಾಂತಕ್ಕೆ ಅಧಿಕಾರಿಗಳು ಸುಸ್ತು

ಜಿಲ್ಲಾಧಿಕಾರಿಗಳ ಆದೇಶದಂತೆ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್​ಗೆ ಕರೆದುಕೊಂಡು ಹೋಗಲು ಬಾನುವಳ್ಳಿ ಗ್ರಾಮಕ್ಕೆ ಅಧಿಕಾರಿಗಳು ಬಂದಿದ್ದರು. ಈ ಸಂದರ್ಭದಲ್ಲಿ ಸೋಂಕಿತ ವ್ಯಕ್ತಿ, ವಿಷ ಕೊಡಿ ಕುಡಿತಿನಿ.. ಆದ್ರೆ ಕೋವಿಡ್ ಕೇರ್ ಸೆಂಟರ್​ಗೆ ಮಾತ್ರ ಬರೋಲ್ಲ ಎಂದು ಪಟ್ಟು ಹಿಡಿದಿದ್ದಾನೆ. ಅಲ್ಲದೆ, ಮನೆಗೆ ಹೋಗಿ ವಿಷದ ಬಾಟಲಿ ತಂದು ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾನೆ. ಸೋಂಕಿತನ ಈ ರಾದ್ಧಾಂತಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಹೈರಾಣಾದರು.

ಕೊನೆಗೂ ಸೋಂಕಿತ ವ್ಯಕ್ತಿ ಕೋವಿಡ್ ಕೇರ್ ಸೆಂಟರ್​ಗೆ ಹೋಗದೆ ಹಠ ಹಿಡಿದು ಮನೆಯಲ್ಲೇ ಕೂತಿದ್ದಾನೆ. ಸೋಂಕಿತನ ಕುಟುಂಬದ ಐದು ಜನ ಸದಸ್ಯರಿಗೂ ಕೋವಿಡ್​​ ತಗುಲಿದೆ ಎನ್ನಲಾಗ್ತಿದೆ. ಆದ್ರೆ ಎಲ್ಲರೂ ಕೊರೊನಾ ಕೇರ್ ಸೆಂಟರ್​ಗೆ ಹೋಗದೆ ಹಠ ಹಿಡಿದು ಮನೆಯಲ್ಲಿಯೇ ಕುಳಿತಿದ್ದಾರೆ. ಹಲವು ಬಾರಿ ಗ್ರಾಮದ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯವರು ಏನೇ ಹೇಳಿದರೂ ಸೋಂಕಿತರು ಮಾತ್ರ ಕ್ಯಾರೇ ಎನ್ನದಿರುವುದು ವಿಪರ್ಯಾಸ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.