ETV Bharat / city

ಡಿಎಆರ್ ಎಪಿಸಿ ಪೊಲೀಸ್ ಕಾನ್ಸ್‌ಟೇಬಲ್ ಸಾವು ಪ್ರಕರಣ‌: ಓರ್ವ ಸಿಬ್ಬಂದಿ ವಿರುದ್ಧ FIR

author img

By

Published : Aug 25, 2021, 6:18 AM IST

ಸಿಬ್ಬಂದಿಯ ನಿರ್ಲಕ್ಷ್ಯದಿಂದ ಬಂದೂಕಿನಿಂದ ಹಾರಿದ ಗುಂಡು ತಗುಲಿ ಡಿಎಆರ್ ಎಪಿಸಿ ಪೊಲೀಸ್ ಕಾನ್ಸ್​ಟೇಬಲ್ ಮೃತಪಟ್ಟ ಪ್ರಕರಣ ಸಂಬಂಧ ಓರ್ವ ಸಿಬ್ಬಂದಿ ವಿರುದ್ಧ ದೂರು ದಾಖಲಾಗಿದೆ.

ಪೊಲೀಸ್ ಕಾನ್ಸ್‌ಟೇಬಲ್ ಸಾವು ಪ್ರಕರಣ‌
ಪೊಲೀಸ್ ಕಾನ್ಸ್‌ಟೇಬಲ್ ಸಾವು ಪ್ರಕರಣ‌

ದಾವಣಗೆರೆ: ಮಿಸ್ ಫೈಯರ್​​ನಿಂದ ಡಿಎಆರ್ ಎಪಿಸಿ ಪೊಲೀಸ್ ಕಾನ್ಸ್‌ಟೇಬಲ್ ಸಾವು ಪ್ರಕರಣ‌ಕ್ಕೆ ಸಂಬಂಧಿಸಿದಂತೆ ಒಬ್ಬ ಡಿಎಆರ್ ಶಸ್ತ್ರಾಸ್ತ್ರಗಾರ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಡಿಎಆರ್ ಸಿಬ್ಬಂದಿ ಶ್ರೀನಿವಾಸ್ ಪೂಜಾರಿ ನಿರ್ಲಕ್ಷ್ಯದಿಂದ ಅವಘಡ‌ ನಡೆದು ಹೋಗಿದೆ ಎನ್ನಲಾಗುತ್ತಿದೆ.

ಶ್ರೀನಿವಾಸ್ ಪೂಜಾರಿ ಅವರು ಬಂದೂಕು ಸ್ವಚ್ಛಗೊಳಿಸುವಾಗ ಬಂದೂಕಿನಿಂದ‌ ಹಾರಿದ ಗುಂಡು ಎಪಿಸಿ ಚೇತನ್ (29) ಗೆ ತಗುಲಿ ತೀವ್ರ ರಕ್ತಸ್ತ್ರಾವದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಶ್ರೀನಿವಾಸ್ ಪೂಜಾರಿ ಎಂಬುವರ ವಿರುದ್ಧ ಕಾಲಂ 304 ಐಪಿಸಿ ಸೆಕ್ಷನ್ ಅಡಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಂಗಳವಾರ ಚೇತನ್ ಅವರ ಅಂತ್ಯಸಂಸ್ಕಾರ ಸರ್ಕಾರಿ ಗೌರವಗಳೊಂದಿಗೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಲಹಾಳ್ ಗ್ರಾಮದಲ್ಲಿ ನಡೆಸಲಾಯಿತು. ಚೇತನ್​​ನನ್ನು ಕಳೆದುಕೊಂಡ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನು ಇದೇ ವೇಳೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಸಂಬಂಧಿಕರಿಗೆ ಐಜಿಪಿ ಎಸ್ ರವಿ, ಎಸ್​ಪಿ​ ಸಿಬಿ ರಿಷ್ಯಂತ್ ಸಾಂತ್ವನ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.