ದಾವಣಗೆರೆ : ನಕಲಿ ಜಾತಿ ಪ್ರಮಾಣ ಪತ್ರ ಆರೋಪ ಹಿನ್ನೆಲೆಯಲ್ಲಿ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಪುತ್ರಿ ಚೇತನಾ ವಿರುದ್ಧ ದೂರು ಸಲ್ಲಿಸಲಾಗಿದೆ. ಬೆಂಗಳೂರು ಜಿಲ್ಲಾಧಿಕಾರಿ ಬಳಿ ಕಾಲಂ 4 ಎಸ್ಸಿ-ಎಸ್ಟಿ,ಒಬಿಸಿ ಕಾಯ್ದೆ 1990ಅಡಿ ದೂರು ನೀಡಲಾಗಿದೆ. ವಕೀಲ ಎ ಹರಿರಾಂ ಅರ್ಜಿದಾರರಾಗಿದ್ದು, ವಕೀಲರಾದ ಜಗನ್ನಾಥ್, ದಾವಣಗೆರೆಯ ಅನೀಸ್ ಪಾಷ ರಿವಿಜನ್ ಅರ್ಜಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: 650 ಕಿ.ಮೀ ಕಾಲ್ನಡಿಗೆ.. ನೆಚ್ಚಿನ ನಟ ಸುದೀಪ್ ಭೇಟಿಯಾಗಿ ಅಭಿಮಾನಿಗಳ ಸಂತಸ
ಲಿಂಗಾಯತ ಸಮುದಾಯಕ್ಕೆ ಸೇರಿದ ರೇಣುಕಾಚಾರ್ಯ ರಾಜಕೀಯ ಪ್ರಭಾವ ಬಳಸಿ ಎಸ್ಸಿ ಸರ್ಟಿಫಿಕೇಟ್ ಪಡೆದಿದ್ದಾರೆ. ಹೊನ್ನಾಳಿಯಲ್ಲಿ ವಾಸವಿದ್ದರೂ ಬೆಂಗಳೂರು ಜಿಲ್ಲೆಯ, ಬೆಂಗಳೂರು ಉತ್ತರ ತಾಲೂಕಿನಲ್ಲಿ ನಕಲಿ ಪ್ರಮಾಣ ಪತ್ರ ಪಡೆದಿದ್ದಾರೆ.
ನಕಲಿ ಎಸ್ಸಿ ಸರ್ಟಿಫಿಕೇಟ್ ಜೆರಾಕ್ಸ್ ಪ್ರತಿ ಲಭ್ಯವಾಗಿದ್ದು, ಶಾಸಕ ಎಂಪಿ ರೇಣುಕಾಚಾರ್ಯ ಹಾಗೂ ಪುತ್ರಿ ಎಂಆರ್ ಚೇತನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ. ಈಗಾಗಲೇ ನಕಲಿ ಜಾತಿ ಪ್ರಮಾಣ ಪತ್ರ ಸಾಕಷ್ಟು ತಿರುವು ಪಡೆದುಕೊಳ್ಳುತ್ತಿದೆ. ದಲಿತ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.