ದಾವಣಗೆರೆ: ಸಿದ್ದರಾಮಯ್ಯ ಹಿಂದೂ ವಿರೋಧಿ, ಈಗ ಅವರು ದೇವಾಲಯಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಮಾಜಿ ಸಿಎಂ ಸಿದ್ದರಾಮಯ್ಯಗೆ ಕುಟುಕಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಈ ಮೊದಲು ಕಾಂಗ್ರೆಸಿಗರು ಮಸೀದಿಗಳ ಬಗ್ಗೆ ಮಾತನಾಡುತ್ತಿದ್ದರು. ಈಗ ಸಿದ್ದರಾಮಯ್ಯ ದೇವಾಲಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ದೇವಾಲಯಗಳ ಬಗ್ಗೆ ಮಾತನಾಡುವುದನ್ನು ಅವರು ಯಾವಾಗ ಕಲಿತರು ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ದೇವಸ್ಥಾನ ನಿರ್ಮಿಸುತ್ತದೆ. ದೇವಸ್ಥಾನ ಉಳಿಸುವ ಕೆಲಸ ಮಾಡುತ್ತಿದೆ. ಸಿದ್ದರಾಮಯ್ಯ ಹಿಂದೂ ವಿರೋಧಿ, ದೇವಸ್ಥಾನಗಳನ್ನು ಉಳಿಸುವ ಬಗ್ಗೆ ಈಗ ಮಾತಾಡುತ್ತಿದ್ದಾರೆ. ಅವರು ಮಸೀದಿಗಳ ಬಗ್ಗೆಯೇ ಹೆಚ್ಚು ಮಾತನಾಡುತ್ತಿದ್ದರು ಎಂದು ಅರುಣ್ ಸಿಂಗ್ ವ್ಯಂಗ್ಯವಾಡಿದ್ದಾರೆ.
ಬಿಎಸ್ವೈ ಪ್ರವಾಸದಿಂದ ಲಾಭ..
ಬಿಎಸ್ವೈ ಪ್ರವಾಸ ಮಾಡಿದರೆ ಬಿಜೆಪಿಗೆ ಲಾಭವಾಗಲಿದೆ. ಪಕ್ಷ ಮತ್ತಷ್ಟು ಭದ್ರವಾಗಲಿದೆ. ಯಡಿಯೂರಪ್ಪ ಎಲ್ಲಾ ಪಕ್ಷಗಳ ನಾಯಕರಿಗಿಂತ ದೊಡ್ಡ ಲೀಡರ್, ಅವರು ರಾಜ್ಯ ಪ್ರವಾಸ ಆರಂಭಿಸಲು ಗ್ರೀನ್ ಸಿಗ್ನಲ್ ನೀಡುವ ಪ್ರಶ್ನೆಯೇ ಇಲ್ಲ, ಯಡಿಯೂರಪ್ಪ ಹಿರಿಯ ನಾಯಕ ಅವರು ಪ್ರವಾಸ ಮಾಡಬಹುದು ಎಂದು ಅರುಣ್ ಸಿಂಗ್ ಇದೇ ವೇಳೆ ಗ್ರೀನ್ ಸಿಗ್ನಲ್ ಕೊಟ್ಟರು.
ಈಗಾಗಲೇ ಬಗ್ಗೆ ಹಲವಾರ ಸಲ ಹೇಳಿದ್ದೇನೆ. ರಾಜ್ಯದಲ್ಲಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಒಳ್ಳೆಯ ಕೆಲಸ ನಡೆಯುತ್ತಿದೆ. ಸಮಾಜದ ಎಲ್ಲ ಜನರ ಬಗ್ಗೆ ಸಿಎಂ ಗಮನ ಹರಿಸುತ್ತಿದ್ದಾರೆ. ಎರಡು ದಿನಗಳ ಕಾಲ ದಾವಣಗೆರೆಯಲ್ಲಿ ಪಕ್ಷದ ವಿಚಾರ ಚಿಂತನಾ ಸಭೆ ನಡೆಯಲಿದೆ ಎಂದು ಅರುಣ್ ಸಿಂಗ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಸಾರಿಗೆ ನೌಕರರ ಮುಷ್ಕರದ ಸದ್ದು: ಸೋಮವಾರ ಸಂಚರಿಸುತ್ತಾ ಬಸ್?