ETV Bharat / city

ನನಗೂ ಬೇಡಜಂಗಮ ಜಾತಿ‌ ಸರ್ಟಿಫಿಕೇಟ್ ಪಡೆಯುವ ಅರ್ಹತೆ ಇದೆ: ಎಂ ಪಿ ರೇಣುಕಾಚಾರ್ಯ - Bedajangama Caste Certificate statement of MP Renukacharya

ನನಗೂ ಬೇಡಜಂಗಮ ಜಾತಿ‌ ಸರ್ಟಿಫಿಕೇಟ್ ಪಡೆಯುವ ಅರ್ಹತೆ ಇದೆ, ಆದರೆ ನಾನು ಜಾತ್ಯಾತೀತ ವ್ಯಕ್ತಿ. ಹಾಗಾಗಿ ಆ ಸರ್ಟಿಫಿಕೇಟ್ ಪಡೆದಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ.

bedajangama-caste-certificate-statement-of-mp-renukacharya
ನನಗೂ ಬೇಡಜಂಗಮ ಜಾತಿ‌ ಸರ್ಟಿಫಿಕೇಟ್ ಪಡೆಯುವ ಅರ್ಹತೆ ಇದೆ, ಆದರೆ ನಾನು ಸರ್ಟಿಫಿಕೇಟ್ ಪಡೆದಿಲ್ಲ: ಎಂಪಿ ರೇಣುಕಾಚಾರ್ಯ
author img

By

Published : Mar 27, 2022, 10:50 PM IST

Updated : Mar 27, 2022, 10:57 PM IST

ದಾವಣಗೆರೆ: ನನಗೂ ಬೇಡಜಂಗಮ ಜಾತಿ‌ ಸರ್ಟಿಫಿಕೇಟ್ ಪಡೆಯುವ ಅರ್ಹತೆ ಇದೆ. ಆದ್ರೆ ನಾನು ಜಾತ್ಯಾತೀತ ವ್ಯಕ್ತಿಯಾಗಿರುವುದರಿಂದ ಆ ಸರ್ಟಿಫಿಕೇಟ್ ಪಡೆದಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಹೊಸ ವಿವಾದ ಸೃಷ್ಟಿಸಿದ್ದಾರೆ. ನಗರದಲ್ಲಿ ಭಾನುವಾರ ಮಾತನಾಡಿದ ಅವರು, ಬೇಡ ಜಂಗಮರು ಎಸ್ಸಿ ಜಾತಿ ಪ್ರಮಾಣಪತ್ರ ಪಡೆಯಬಹುದು ಎಂಬ ಅರ್ಥ ಸೂಚಿಸಿದ ರೇಣುಕಾಚಾರ್ಯ, ಬೇಡ ಜಂಗಮ‌ ನಕಲಿ ಸರ್ಟಿಫಿಕೇಟ್ ಪಡೆದಿಲ್ಲ. ಅದರಿಂದ ಯಾವುದೇ ಲಾಭ ಪಡೆದಿಲ್ಲ. ಯಾವುದೇ ತಪ್ಪನ್ನು ಮಾಡಿಲ್ಲ, 2012ರಲ್ಲಿ ನನ್ನ ಮಗಳು‌ ಬೇಡ ಜಂಗಮ ಸರ್ಟಿಫಿಕೇಟ್ ಪಡೆದಿದ್ದಾಳೆ, ಅದನ್ನು ವಾಪಸ್​ ಮಾಡಲು ಹೇಳಿದ್ದೆ, ನನ್ನ ಸಹೋದರನ ಒತ್ತಡದಿಂದ ಹೀಗಾಗಿದೆ ಎಂದು ಸಹೋದರನ ಕಡೆ ಬೆರಳು ಮಾಡಿದ್ದಾರೆ.

ಇದರಲ್ಲಿ ನನ್ನದೇನೂ ತಪ್ಪಿಲ್ಲ, ಕೆಪಿಸಿಸಿ ವಕ್ತಾರರ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸುತ್ತೇನೆ. ನಾನು ಬೂಟಾಟಿಕೆಗೆ ಹೇಳುತ್ತಿಲ್ಲ, ಸದನದಲ್ಲೂ ಈ ಬಗ್ಗೆ ಚರ್ಚೆಯಾಗಿದೆ. ನಾನಾಗಲಿ, ನನ್ನ ಕುಟುಂಬದವರಾಗಲಿ ಯಾವುದೇ ಲಾಭ ಪಡೆದಿಲ್ಲ. ಬೇಡ ಜಂಗಮ ಜಾತಿಯ ಚೇತನಾ ಹಿರೇಮಠ್ ಎಂಬುವವರಿಗೆ 40 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗಿದೆ. ಅದು ಸಿದ್ದರಾಮಯ್ಯ ಅವಧಿಯಲ್ಲಿ ಆಗಿದೆ, ನನ್ನ ಮಗಳು ಚೇತನಾ ಯಾವುದೇ ಸೌಲಭ್ಯ ಪಡೆದಿಲ್ಲ ಎಂದು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಎಂ. ಪಿ ರೇಣುಕಾಚಾರ್ಯ

ಅಂಬೇಡ್ಕರ್ ಸೋಲಿಸಿದ್ದು ಅವರು: ಸಂವಿಧಾನ ಶಿಲ್ಪಿ ಡಾ. ಬಿ ಆರ್​ ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್​ನವರು. ಅವರು ಮೃತಪಟ್ಟಾಗ ಜಾಗ ಕೊಡದಿದ್ದವರು ಕಾಂಗ್ರೆಸ್ ನವರು ನಾವಲ್ಲ. ವೋಟಿಗೋಸ್ಕರ ರಾಜಕಾರಣ ಮಾಡುತ್ತಿದ್ದೀರಿ,‌ ನಾವು ಪರಿಶಿಷ್ಟ ವರ್ಗದವರ ಅಭಿವೃದ್ಧಿಗೆ ಶ್ರಮಿಸಿದ್ದೇವೆ, ಅವರ ಅಭಿವೃದ್ಧಿಗೆ ಸಾಕಷ್ಟು ಯೋಜನೆ ರೂಪಿಸಿದ್ದೇವೆ. ಸಿದ್ದರಾಮಯ್ಯ ಮೊದಲಿನಿಂದಲೂ ಕಾಂಗ್ರೆಸ್ ವಿರೋಧಿ ಹಾಗೂ ಗಾಂಧಿ ಕುಟುಂಬದ ವಿರೋಧಿಗಳಾಗಿದ್ದರು. ಆದ್ದರಿಂದ ಈ ರೀತಿಯಾಗಿ ಸಿದ್ದರಾಮಯ್ಯ ಪಕ್ಷದ ವರ್ಚಸ್ಸು ಕಡಿಮೆ ಮಾಡಲು ಹೇಳಿಕೆ ನೀಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ಮುಳುಗಿದ ಹಡಗು : ಕಾಂಗ್ರೆಸ್‌ನವರು ವೀರಶೈವ ಲಿಂಗಾಯತ ಧರ್ಮ‌ ಒಡೆಯುವ ಪ್ರಯತ್ನ ಮಾಡಿದ್ರು, ಇದೀಗ ಹಿಜಾಬ್ ವಿಚಾರವಾಗಿ ಸರ್ಕಾರ ಸಮವಸ್ತ್ರ ನೀತಿ ಅಂಗೀಕರಿಸಿದೆ. ಆದರೆ ಸಿದ್ದರಾಮಯ್ಯ ಮಠಾಧೀಶರನ್ನು ವಿನಾಕರಣ ಎಳೆ ತಂದರು. ಡಿಕೆಶಿ, ಸಿದ್ದರಾಮಯ್ಯ ಪರಸ್ಪರ ಕಾಲೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಸರ್ವನಾಶಕ್ಕೆ ಸಿದ್ದರಾಮಯ್ಯ ಕಾರಣವಾಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಓದಿ : ಮಂಡ್ಯ ತಹಶೀಲ್ದಾರ್ ಅಮಾನತು : ಸಿಹಿ ಹಂಚಿ ಸಂಭ್ರಮಿಸಿದ ಗ್ರಾಮಸ್ಥರು

Last Updated : Mar 27, 2022, 10:57 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.