ದಾವಣಗೆರೆ: ದೇಶದಲ್ಲಿ ಲೋಕಸಭೆ ಚುನಾವಣೆ ರಂಗೇರಿದೆ. ಈ ಹಿನ್ನೆಲೆ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸಿವೆ. ಮತದಾನ ಬಹುಮುಖ್ಯ. ಹೀಗಾಗಿ ದಾವಣಗೆರೆ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ನಗರದ ಡಯಟ್ ಸಭಾಂಗಣದಲ್ಲಿ ಚಿತ್ರಕಲಾ ಪ್ರದರ್ಶನ ನಡೆಸಿ ಮತ ಜಾಗೃತಿ ನಡೆಸಿತು.
ಚಿತ್ರಗಳ ಮೂಲಕ ಮತ ಜಾಗೃತಿ...
ಡಯಟ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಚಿತ್ರಕಲಾ ಪ್ರದರ್ಶನದಲ್ಲಿ ಮತ ಜಾಗೃತಿಗೆ ಸಂಬಂಧಿಸಿದ ಚಿತ್ರಗಳಿಗೆ ಮೆಚ್ಚುಗೆ ವ್ಯಕ್ತವಾಯಿತು. ನನ್ನ ಅಮೂಲ್ಯ ಮತಕ್ಕೆ ನಿಮ್ಮಿಂದ ಬೆಲೆ ಕಟ್ಟಲಾಗದು. ಯಾವುದೇ ಆಮಿಷಕ್ಕೆ ಬಲಿಯಾಗದೆ ಮತ ಚಲಾಯಿಸಿ ಎಂಬ ಚಿತ್ರಗಳು ಗಮನ ಸೆಳೆದವು. ಇನ್ನು ಮತದಾನ ನಮ್ಮೆಲ್ಲರ ಹಕ್ಕು. ಸದೃಢ ಭಾರತಕ್ಕಾಗಿ ಮತದಾನ, ಹಣಕ್ಕಲ್ಲ ನಿಮ್ಮ ಮತ ಗುಣಕ್ಕಾಗಿ, ತಪ್ಪದೆ ಮತದಾನ ಮಾಡಿ ಈ ರೀತಿಯಲ್ಲಿ ಚಿತ್ರಕಲೆ ಕಂಡು ಬಂದವು.
ಚಿತ್ರಕಲಾ ಸಂಘದಿಂದ ಉತ್ತಮ ಕೆಲಸ
ಇನ್ನು ಈ ಬಗ್ಗೆ ಶಿಕ್ಷಣ ಇಲಾಖೆಯ ನಿವೃತ್ತ ಸಹ ನಿರ್ದೇಶಕ ಡಿ.ಕೆ.ಶಿವಕುಮಾರ್ ಮಾತನಾಡಿ, ಚಿತ್ರಕಲಾ ಸಂಘವು 2012ರಿಂದೀಚೆಗೆ ಚೆನ್ನಾಗಿ ಕೆಲಸ ಮಾಡುತ್ತಿದೆ. ಈ ರೀತಿಯ ಚಿತ್ರಕಲಾ ಪ್ರದರ್ಶನಗಳನ್ನು ಏರ್ಪಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರ ತೆಗೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.