ದಾವಣಗೆರೆ: ಲಾಕ್ಡೌನ್ ಉಲ್ಲಂಘಿಸಿದನೆಂದು ಕ್ಷೌರಿಕನೊಬ್ಬರ ಬೆರಳು ತುಂಡಾಗುವಂತೆ ಪೊಲೀಸರು ಲಾಠಿ ಬೀಸಿದ್ದಾರೆ. ಈ ಘಟನೆ ನಗರದ ರಿಂಗ್ ರಸ್ತೆಯಲ್ಲಿ ನಡೆದಿದೆ.
ಕ್ಷೌರಿಕ ಲಕ್ಷ್ಮಣ್ ಬೆರಳು ತುಂಡರಿಸಿದೆ. ಇಲ್ಲಿನ ಯಲ್ಲಮ್ಮ ನಗರದ ಬಳಿ ನಡೆದುಕೊಂಡು ಕ್ಷೌರಿಕ ಲಕ್ಷ್ಮಣ್ ಹೋಗುತ್ತಿದ್ದಾಗ ಪೊಲೀಸರು ಹೊಡೆದಿದ್ದಾರೆ. ಲಾಠಿಯಿಂದ ಬಲವಾಗಿ ಹೊಡೆದ ಪರಿಣಾಮ ಲಕ್ಷ್ಮಣ್ ಅವರ ಬೆರಳು ತುಂಡಾಗಿದೆ.
ಬೆರಳು ಕಟ್ ಆಗುವಂತೆ ಹೊಡೆದಿದ್ದಲ್ಲದೆ, ಮೈಮೇಲೆ ಬಾಸುಂಡೆ ಬರುವಂತೆ ಪೊಲೀಸರು ಥಳಿಸಿದ್ದಾರೆ ಎಂದು ಲಕ್ಷ್ಮಣ್ ಆರೋಪಿಸಿದ್ದಾರೆ. ಗಾಯಗೊಂಡ ಲಕ್ಷ್ಮಣ್ನನ್ನು ಹೆಚ್ಚಿನ ಚಿಕಿತ್ಸೆಗೆ ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.