ETV Bharat / city

ಯುವಕರ ಗೂಂಡಾಗಿರಿ.. ಪೊಲೀಸರ ಮೇಲೆ ಹಲ್ಲೆ.. ವಿಡಿಯೋದಲ್ಲಿ ಕೃತ್ಯ ಸೆರೆ - police and youth fight at yalahanka

ಸೋಮವಾರ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರ ಮೇಲೆ ಯಲಹಂಕದ ಚಿಕ್ಕಬೆಟ್ಟಹಳ್ಳಿ ಬಳಿ ಯುವಕರು ಹಲ್ಲೆ ನಡೆಸಿದ್ದಾರೆ..

ಪೊಲೀಸರ ಮೇಲೆ ಹಲ್ಲೆ,youth assault on police in bengaluru
ಪೊಲೀಸರ ಮೇಲೆ ಪುಂಡರ ಗೂಂಡಾಗಿರಿ
author img

By

Published : Dec 7, 2021, 3:14 PM IST

Updated : Dec 7, 2021, 4:15 PM IST

ಬೆಂಗಳೂರು : ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ಸ್ಥಳೀಯ ಯುವಕರು ಹಲ್ಲೆ ನಡೆಸಿರುವ ಘಟನೆ ಸೋಮವಾರ ಸಂಜೆ ಚಿಕ್ಕಬೆಟ್ಟಹಳ್ಳಿ ಬಳಿ ನಡೆದಿದೆ.

ಗುಂಡಿ ಕಿತ್ತಿದ್ದರಿಂದ ಒಂದು ಮಾರ್ಗದ ರಸ್ತೆ ಬಂದ್ ಆಗಿತ್ತು. ಪರ್ಯಾಯ ರಸ್ತೆ ಇಲ್ಲದ ಹಿನ್ನೆಲೆಯಲ್ಲಿ ರಾತ್ರಿ ಪಾಳಿಯ ಪೊಲೀಸರು ಒನ್​ ವೇಯಲ್ಲಿ ಬಂದಿದ್ದರು. ಈ ವೇಳೆ ಯುವಕರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದು, ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸರ ಮೇಲೆ ಹಲ್ಲೆ

ನಾವು ಪೊಲೀಸರು, ಕರ್ತವ್ಯದಲ್ಲಿದ್ದೇವೆ ಎಂದು ತಿಳಿಸಿದರೂ ಯುವಕರು ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸ್‌ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಲಾಗಿದೆ. ಹಲ್ಲೆಗೊಳಗಾದ ಸಬ್ ಇನ್ಸ್​ಪೆಕ್ಟರ್ ಶ್ರೀಶೈಲ ದೂರು ನೀಡಿದ್ದಾರೆ.

ಇದನ್ನೂ ಓದಿ: ನವಜಾತ ಶಿಶು ಹತ್ಯೆ ಮಾಡಿ, ಟಾಯ್ಲೆಟ್ ಫ್ಲಶ್​ನಲ್ಲಿ ಶವ ಎಸೆದ ಪಾಪಿ ತಾಯಿ

ಯುವಕರ ಪುಂಡಾಟವನ್ನು ಸ್ಥಳೀಯರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದ್ದಾರೆ. ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Last Updated : Dec 7, 2021, 4:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.