ETV Bharat / city

ಬೆಂಗಳೂರು : ಪ್ರೇಯಸಿಯ ಮಾಜಿ ಲವರ್​ನಿಂದ ಹಾಲಿ ಪ್ರೇಮಿಯ ಹತ್ಯೆ! - ಪ್ರೇಯಸಿಯ ಮಾಜಿ ಲವರ್​ನಿಂದ ಹಾಲಿ ಪ್ರೇಮಿಯ ಹತ್ಯೆ

ಸಮರ್ಥ್ ಪರಿಚಯವಾಗುವ ಮುನ್ನ ಯುವತಿ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಕಿರಣ್(ಆರೋಪಿ)ನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಆದರೆ, ಹಲವಾರು ವಿಚಾರಕ್ಕೆ ಕಿರಣ್ ಜೊತೆಗೆ ಯುವತಿ ಬ್ರೇಕಪ್ ಮಾಡಿಕೊಂಡು, ಬಳಿಕ ಸಮರ್ಥ್​ ಜೊತೆಯಲ್ಲಿ ಪ್ರೀತಿಯಲ್ಲಿ ಬಿದ್ದಿದ್ದಳಂತೆ. ಈ ವಿಚಾರಕ್ಕೆ ಕಿರಣ್ ಹಾಗೂ ಸಮರ್ಥ್ ನಡುವೆ ಗಲಾಟೆಯಾಗಿತ್ತು‌..

Youth killed by ex-boyfriend of her lover in Bengaluru
ಸಮರ್ಥ್ ನಾಯರ್ ಕೊಲೆಯಾದ ದುರ್ದೈವಿ
author img

By

Published : May 10, 2022, 2:08 PM IST

ಬೆಂಗಳೂರು : ಯುವತಿಯ ಮಾಜಿ ಪ್ರಿಯತಮ​​​​, ಹಾಲಿ ಪ್ರೇಮಿಯನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶಿವಮೊಗ್ಗದ ಮೂಲದ ಸಮರ್ಥ್ ನಾಯರ್ ಕೊಲೆಯಾದ ದುರ್ದೈವಿ. ಕೊಲೆ ಮಾಡಿದ ಆರೋಪದಡಿ ಮೂವರು ಆರೋಪಿಗಳನ್ನು ಬೊಮ್ಮನಹಳ್ಳಿ‌ ಪೊಲೀಸರು ಬಂಧಿಸಿದ್ದಾರೆ. ಕಿರಣ್, ಅರುಣ್ ಹಾಗೂ ರಾಕೇಶ್ ಬಂಧಿತ ಆರೋಪಿಗಳು.

ಹಲವು ವರ್ಷಗಳಿಂದ ನಗರದಲ್ಲಿ ನೆಲೆಯೂರಿದ್ದ ಸಮರ್ಥ್, ಗಾರ್ಮೆಂಟ್ಸ್ ಕಂಪನಿಯೊಂದರಲ್ಲಿ ಕ್ವಾಲಿಟಿ ಚೆಕ್ ಲೀಡರ್ ಆಗಿ ಕೆಲಸ ಮಾಡುತ್ತಿದ್ದ. ಈ ಮಧ್ಯೆ ಕೆಲಸದ ಸಲುವಾಗಿ ಎರಡು ತಿಂಗಳು ದೆಹಲಿಯಲ್ಲಿ ಕೆಲಸ ಮಾಡಿ ಕಳೆದ ಏಪ್ರಿಲ್ 26ರಂದು ಮತ್ತೆ ಬೆಂಗಳೂರಿಗೆ ಬಂದಿದ್ದ. ಈತ ಭದ್ರಾವತಿ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದ‌ನಂತೆ.

ಸಮರ್ಥ್ ಪರಿಚಯವಾಗುವ ಮುನ್ನ ಯುವತಿ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಕಿರಣ್(ಆರೋಪಿ)ನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಆದರೆ, ಹಲವಾರು ವಿಚಾರಕ್ಕೆ ಕಿರಣ್ ಜೊತೆಗೆ ಯುವತಿ ಬ್ರೇಕಪ್ ಮಾಡಿಕೊಂಡು, ಬಳಿಕ ಸಮರ್ಥ್​ ಜೊತೆಯಲ್ಲಿ ಪ್ರೀತಿಯಲ್ಲಿ ಬಿದ್ದಿದ್ದಳಂತೆ. ಈ ವಿಚಾರಕ್ಕೆ ಕಿರಣ್ ಹಾಗೂ ಸಮರ್ಥ್ ನಡುವೆ ಗಲಾಟೆಯಾಗಿತ್ತು‌.

ಕಳೆದ‌‌ ಶನಿವಾರ ಯುವತಿ ಜತೆಗಿದ್ದಾಗ ಕಿರಣ್ ಮತ್ತು ಆತನ ಗೆಳೆಯರು ಎಂಟ್ರಿ‌ ಕೊಟ್ಟಿದ್ದಾರೆ. ಏಕಾಏಕಿ ಸಮರ್ಥ್ ತಲೆಗೆ ಕಾಲಿನಿಂದ ಒದ್ದು ಗೋಡೆಗೆ ತಲೆ ಹಿಡಿದು ಚಚ್ಚಿ ಪರಾರಿಯಾಗಿದ್ದರು. ಹಲ್ಲೆಗೊಳಗಾಗಿದ್ದ ಸಮರ್ಥ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಬೊಮ್ಮನಹಳ್ಳಿ‌‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮದುವೆ ಕಾರ್ಡ್​ ಹಂಚಲು ತೆರಳಿದ್ದ ವಧು ಕಿಡ್ನ್ಯಾಪ್​, ಸಾಮೂಹಿಕ ಅತ್ಯಾಚಾರ.. 20 ದಿನದ ಬಳಿಕ ಪೋಷಕರ ಮಡಿಲು ಸೇರಿದ ಸಂತ್ರಸ್ತೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.