ETV Bharat / city

'ನೀನು ಕುರೂಪಿ..' ಹೀಯಾಳಿಸುತ್ತಿದ್ದ ಪತಿ: ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾದ ಪತ್ನಿ

ನೀನು ನೋಡಲು ಸುಂದರವಾಗಿಲ್ಲ, ಕುರೂಪಿಯಾಗಿದ್ದೀಯಾ ಎಂದೆಲ್ಲಾ ಮನಬಂದಂತೆ ಗಂಡ ಹೀಯಾಳಿಸಿದ್ದರಿಂದ ಮನನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

wife suicide
wife suicide
author img

By

Published : Feb 22, 2022, 10:09 AM IST

Updated : Feb 22, 2022, 11:38 AM IST

ಬೆಂಗಳೂರು: ಗಂಡನ ಮನೆಯವರ ಮಾನಸಿಕ, ದೈಹಿಕ ಕಿರುಕುಳ ತಾಳಲಾರದೆ ಸೀಮೆಎಣ್ಣೆ ಸುರಿದುಕೊಂಡು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ‌ ದೇವರಜೀವನಹಳ್ಳಿ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಡಿ.ಜೆ.ಹಳ್ಳಿಯ ಈದ್ಗಾ ಮೊಹಲ್ಲಾದಲ್ಲಿ ವಾಸವಾಗಿದ್ದ ಅನಿಶಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದಾರೆ. ಕಳೆದ‌ ಮೂರು ವರ್ಷಗಳ ಹಿಂದೆ ಅನಿಶಾ ಜೊತೆ ನಿಜಾಮುದ್ದೀನ್ ಎರಡನೇ ಮದುವೆಯಾಗಿದ್ದರು. ಆರಂಭದಲ್ಲಿ ದಂಪತಿ ಅನ್ಯೋನ್ಯತೆಯಿಂದ ಇದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಹೀಗಿದ್ದರೂ ನಿಜಾಮುದ್ದೀನ್ ಆಗಾಗ ಹೆಂಡ್ತಿಗೆ ನೀನು ಕುರೂಪಿ, ಸುಂದರವಾಗಿಲ್ಲ. ಬೇಗನೆ ಸತ್ತರೆ ಮತ್ತೊಂದು ಮದುವೆಯಾಗುತ್ತೇನೆ ಎಂದು ಕಿರುಕುಳ ನೀಡುತ್ತಿದ್ದನಂತೆ.‌ ಇದಕ್ಕೆ ತಾಯಿ ಖಲೀಂ ಉನ್ನಿಸಾ ಸಾಥ್ ನೀಡಿದ್ದಳು ಎಂಬ ಆರೋಪ ಕೇಳಿಬಂದಿದೆ.‌‌

ಕೇಸ್ ಪ್ರತಿ
ಕೇಸ್ ಪ್ರತಿ

ಮದುವೆಯಾದಾಗಿನಿಂದ ಗಂಡ ಹಾಗೂ ಅತ್ತೆ ಕಿರುಕುಳ ನೀಡುತ್ತಿದ್ದರಂತೆ. ಇದೇ ತಿಂಗಳು 17ರಂದು ಗಂಡನ ಮನೆಯವರು ಇನ್ನೂ ಸತ್ತಿಲ್ವಾ ಎಂದು ಹೀಯಾಳಿಸಿದ್ದರಂತೆ. ಇದರಿಂದ ಮನನೊಂದು ಅನಿಶಾ ಮಾರನೇ ದಿನ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ಆದ್ರೆ ತಕ್ಷಣವೇ ಮನೆಯವರು ಬೆಂಕಿ ಆರಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಅನಿಶಾ ಮೃತಪಟ್ಟಿದ್ದಾರೆ.‌

ಘಟನೆ ಸಂಬಂಧ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಿಸಿಕೊಂಡು, ನಿಜಾಮುದ್ದೀನ್ ನನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಕೊಲಂಬಿಯಾದಲ್ಲಿ 24 ವಾರಗಳವರೆಗೆ ಗರ್ಭಪಾತ ಅಪರಾಧವಲ್ಲ: ಕೋರ್ಟ್ ಐತಿಹಾಸಿಕ ತೀರ್ಪು

Last Updated : Feb 22, 2022, 11:38 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.