ETV Bharat / city

ಮುಂದಿನ ಸಾರ್ವತ್ರಿಕ ಚುನಾವಣೆ ದಿಕ್ಸೂಚಿಯಾಗಲಿದೆಯೇ ಮೇಲ್ಮನೆ ಉಪಚುನಾವಣೆ..? - ಬೆಂಗಳೂರು ಸುದ್ದಿ

ಎರಡು ವಿಧಾನಸಭೆ ಉಪಚುನಾವಣೆ ಹಾಗೂ ವಿಧಾನಪರಿಷತ್​ನ ನಾಲ್ಕು ಕ್ಷೇತ್ರಗಳ ಚುನಾವಣೆ ರಾಜ್ಯದ ಮುಂದಿನ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಾಗಲಿವೆ ಎಂಬ ಅಭಿಪ್ರಾಯವನ್ನು ರಾಜಕೀಯ ವಿಶ್ಲೇಷಕರು ವ್ಯಕ್ತಪಡಿಸಿದ್ದಾರೆ.

Will the next general election be a compass by-election
ಮುಂದಿನ ಸಾರ್ವತ್ರಿಕ ಚುನಾವಣೆ ದಿಕ್ಸೂಚಿಯಾಗಲಿದೆಯೇ ಮೇಲ್ಮನೆ ಉಪಚುನಾವಣೆ..?
author img

By

Published : Oct 3, 2020, 1:52 PM IST

ಬೆಂಗಳೂರು: ರಾಜಕೀಯ ವಿಶ್ಲೇಷಕರ ಪ್ರಕಾರ ಎರಡು ವಿಧಾನಸಭೆ ಉಪಚುನಾವಣೆ ಹಾಗೂ ವಿಧಾನಪರಿಷತ್​ನ ನಾಲ್ಕು ಕ್ಷೇತ್ರಗಳ ಚುನಾವಣೆ ರಾಜ್ಯದ ಮುಂದಿನ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಾಗಲಿವೆ.

ರಾಜ್ಯ ರಾಜಕಾರಣದಲ್ಲಿ ಕಳೆದ ಎರಡು ವರ್ಷಗಳಲ್ಲಿ ಹಲವಾರು ಬದಲಾವಣೆಗಳಾಗಿವೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಯಾರಿಗೂ ಬಹುಮತ ಸಿಗದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಯಿತು. ಬಿಜೆಪಿ ಅತಿ ಹೆಚ್ಚು ಸೀಟುಗಳನ್ನು ಗಳಸಿದ್ದರೂ, ಸರ್ಕಾರ ರಚನೆ ಮಾಡುವಲ್ಲಿ ವಿಫಲವಾಗಿತ್ತು. ಹದಿನಾಲ್ಕು ತಿಂಗಳ ನಂತರ ರಾಜಕಾರಣದ ಒಳ ಏಟಿಗೆ ಮೈತ್ರಿ ಸರ್ಕಾರ ಪತವಾಗಿತ್ತು. ನಂತರ ಪಕ್ಷಾಂತರ ಪರ್ವ, ರಾಜಕೀಯ ಹೈಡ್ರಾಮ ಎಲ್ಲವೂ ನಡೆದು ಕೊನೆಗೆ ಮತ್ತೆ ಬಿಜೆಪಿ ಅಧಿಕಾರದ ಗದ್ದುಗೆಗೇರಿದ್ದು ತಿಳಿದ ವಿಷಯವೇ. ಬಿಜೆಪಿಯಲ್ಲಿ ಅಸಮಾಧಾನ ಇದ್ದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅದೆಲ್ಲವನ್ನೂ ನಿಭಾಯಿಸಿಕೊಂಡು ಸರ್ಕಾರ ಮುನ್ನಡೆಸುತ್ತಿದ್ದಾರೆ. ಸಮನ್ವಯದ ಕೊರತೆಯಿಂದ ಹಿನ್ನಡೆಯಾಗಿದ್ದ ಕಾಂಗ್ರೆಸ್ ಇದೀಗ ಚುರುಕಾಗುತ್ತಿದೆ. ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಡಿ.ಕೆ.ಶಿವಕುಮಾರ್ ಬಂದ ಮೇಲಂತೂ ಪಕ್ಷ ಚುರುಕಾಗಿದೆ. ಈ ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ಪ್ರಾದೇಶಿಕ ಪಕ್ಷ ಜೆಡಿಎಸ್ ಸೊರುಗುತ್ತಿದೆಯೇ ಎಂಬ ಭಾವನೆ ಆ ಪಕ್ಷದ ಕಾರ್ಯಕರ್ತರಲ್ಲಿ ಮೂಡಿದೆ. ಇದಕ್ಕೆ ಹಲವು ಕಾರಣ ಇರಬಹುದು. ಇನ್ನೂ ರಾಜ್ಯದಲ್ಲಿ ಮಹಾಮಾರಿ ಕೊರೊನಾ ಸಹ ರಾಜಕೀಯ ಚಟುವಟಿಗಳಿಗೆ ಅಡ್ಡಿಯಾಗಿದೆ ಎಂದೇ ಹೇಳಬಹುದು.

ಮೂರು ಪಕ್ಷಗಳಿಗೂ ಒಳ ಏಟಿನ ಭೀತಿ: ಮುಂದಿನ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ಎರಡು ವಿಧಾನಸಭಾ ಕ್ಷೇತ್ರ ಹಾಗೂ ವಿಧಾನಪರಿಷತ್​ನ ನಾಲ್ಕು ಕ್ಷೇತ್ರಗಳ ಚುನಾವಣೆಯಲ್ಲಿ ಪ್ರಮುಖ ಮೂರು ರಾಜಕೀಯ ಪಕ್ಷಗಳಿಗೂ ಒಳ ಏಟಿನ ಭೀತಿ ಎದುರಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಆಕಾಂಕ್ಷಿಗಳ ಪಟ್ಟಿ ದಿನೇದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಂಡಾಯವನ್ನು ಹತ್ತಿಕ್ಕುವುದೇ ಮೂರೂ ಪಕ್ಷಗಳಿಗೆ ಸವಾಲಾಗಿ ಪರಿಣಮಿಸಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್​ಗೆ ಬಂಡಾಯ ಅಭ್ಯರ್ಥಿಗಳ ಮನವೊಲಿಸುವುದೇ ಸವಾಲಾಗಿದೆ. ಮೂರು ಪಕ್ಷಗಳಿಗೂ ಒಳಹೊಡೆತದ ಭೀತಿ ಕಾಡುತ್ತಿದ್ದು, ಅಧಿಕೃತ ಅಭ್ಯರ್ಥಿಗೆ ಬಂಡಾಯ ಏಳುವವರು ಒಳ ಏಟು ಕೊಡಲಿದ್ದಾರೆಯೇ ಎಂಬ ಆತಂಕ ಎದುರಾಗಿದೆ. ರಾಜರಾಜೇಶ್ವರಿನಗರದಲ್ಲಿ ಬಿಜೆಪಿಯಿಂದ ಮುನಿರತ್ನ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಕಳೆದ ಬಾರಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ತುಳಸಿ ಮುನಿರಾಜುಗೌಡ ಈಗ ಉಪಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ತುಳಸಿ ಮುನಿರಾಜುಗೌಡ ಅವರನ್ನೇ ಅಭ್ಯರ್ಥಿ ಮಾಡಲು ಪ್ರಭಾವಿ ನಾಯಕರೊಬ್ಬರು ತೆರೆಮರೆ ಕಸರತ್ತು ನಡೆಸುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊಟ್ಟ ಮಾತಿನಂತೆ ಮುನಿರತ್ನ ಅವರಿಗೆ ಟಿಕೆಟ್ ಕೊಡಲೇಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ಆದರೆ ತುಳಸಿ ಮುನಿರಾಜುಗೌಡ ಅವರಿಗೆ ಪ್ರಭಾವಿ ನಾಯಕರ ಕೃಪಾಕಟಾಕ್ಷ ಇರುವುದರಿಂದ ಬಿಜೆಪಿಗೆ ಪ್ರಾರಂಭದಲ್ಲಿ ಬಂಡಾಯ ಎದುರಾಗಿದೆ.

ಇನ್ನು ಜೆಡಿಎಸ್​ನಲ್ಲಿ ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್, ಬೆಟ್ಟಸ್ವಾಮಿಗೌಡ ಹಾಗೂ ಕೃಷ್ಣಮೂರ್ತಿ ಅವರನ್ನು ಆಯ್ಕೆ ಮಾಡಿದ್ದು, ವರಿಷ್ಠರು ಒಬ್ಬರನ್ನು ಅಂತಿಮಗೊಳಿಸುತ್ತಾರೆ. ಅಲ್ಲೂ ಬಂಡಾಯದ ಹೊಗೆಯಾಡುತ್ತಿದೆ. ಇರುವುದರಲ್ಲೇ ಕಾಂಗ್ರೆಸ್ ನಿರಾಳವಾಗಿದೆಯಾದರೂ ದಿ.ಐಎಎಸ್ ಅಧಿಕಾರಿ ಡಿ.ಕೆ.ರವಿ ಪತ್ನಿ ಕುಸುಮಾ ಅವರಿಗೆ ಟಿಕೆಟ್ ನೀಡಿದರೆ ಪಕ್ಷದೊಳಗೆ ಅಸಮಾಧಾನವಾಗುವುದನ್ನು ತಳ್ಳಿ ಹಾಕುವಂತಿಲ್ಲ. ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲೂ ಬಿಜೆಪಿ ಮತ್ತು ಜೆಡಿಎಸ್ ಬಂಡಾಯದ ಭೀತಿ ಎದುರಿಸುತ್ತಿವೆ. ಕುಂಚಟಿಗ ಸಮುದಾಯಕ್ಕೆ ಮಣೆ ಹಾಕಬೇಕೆಂಬ ಕಾರಣಕ್ಕಾಗಿ ಮಾಜಿ ಸಂಸದ ಮೂಡಲಗಿರಿಯಪ್ಪ ಪುತ್ರನಿಗೆ ಟಿಕೆಟ್ ನೀಡಲು ಬಿಜೆಪಿ ಮುಂದಾಗಿದೆ. ಆದರೆ ಕ್ಷೇತ್ರದಲ್ಲಿ ಗೊಲ್ಲ ಸಮುದಾಯದ ಮತಗಳು ನಿರ್ಣಾಯಕವಾಗಿರುವುದರಿಂದ ತಮ್ಮ ಪತಿಗೆ ಟಿಕೆಟ್ ನೀಡಬೇಕೆಂದು ಶಾಸಕಿ ಪೂರ್ಣಿಮಾ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಬಿಜೆಪಿ ಕುಂಚಟಿಗ ಸಮುದಾಯಕ್ಕೆ ಮಣೆ ಹಾಕಿದರೆ ಇಲ್ಲೂ ಕೂಡ ಬಂಡಾಯ ತಳ್ಳಿ ಹಾಕುವಂತಿಲ್ಲ. ಜೊತೆಗೆ ಬೇರೆ ಸಮುದಾಯದ ಮುಖಂಡರು ಟಕ್ಕರ್ ಕೊಡಬಹುದೆಂಬ ಆತಂಕದಲ್ಲಿ ಬಿಜೆಪಿ ಇದೆ.

ಇನ್ನು ಜೆಡಿಎಸ್ ಕೂಡ ಸಂದಿಗ್ಧ ಸ್ಥಿತಿಗೆ ಸಿಲುಕಿದೆ. ದಿವಂಗತ ಮಾಜಿ ಸಚಿವ ಸತ್ಯನಾರಾಯಣ ಅವರ ಕುಟುಂಬದವರಿಗೆ ಟಿಕೆಟ್ ನೀಡಬೇಕೆಂಬ ಕೂಗು ಕೇಳಿಬಂದಿದೆ. ಆದರೆ, ಅವರ ಕುಟುಂಬದವರಿಗೆ ಟಿಕೆಟ್ ನೀಡಿದರೆ ಗೆಲ್ಲುವ ಸಾಧ್ಯತೆಗಳ ಬಗ್ಗೆ ಯಾವ ಭರವಸೆಯೂ ಇಲ್ಲ. ಅಲ್ಲದೆ, ಸತ್ಯನಾರಾಯಣ ಅವರ ಕುಟುಂಬದವರನ್ನೇ ಬಿಜೆಪಿ ಆಪರೇಷನ್ ಕಮಲ ನಡೆಸಲು ಮುಂದಾಗಿದೆ. ಸತ್ಯನಾರಾಯಣ ಪತ್ನಿ ಅಮಾಜಮ್ಮ ಹಾಗೂ ಪುತ್ರ ಸತ್ಯಪ್ರಕಾಶ್ ಇಬ್ಬರಲ್ಲಿ ಯಾರೇ ಬಂದರೂ ಚುನಾವಣಾ ಖರ್ಚುವೆಚ್ಚ ಸೇರಿದಂತೆ ಎಲ್ಲವನ್ನೂ ನೋಡಿಕೊಳ್ಳುವ ಆಶ್ವಾಸನೆ ನೀಡಲಾಗಿದೆ. ಹೀಗಾಗಿ ಶಿರಾದಲ್ಲಿ ಜೆಡಿಎಸ್‍ಗೆ ಒಳ ಹೊಡೆತದ ಭೀತಿ ಕಾಡುತ್ತಿದೆ. ಉಳಿದಂತೆ ಕಾಂಗ್ರೆಸ್ ಚುನಾವಣೆಗೂ ಮುನ್ನವೇ ಅಭ್ಯರ್ಥಿಯನ್ನು ಘೋಷಿಸಿರುವುದರಿಂದ ನಿರಾಳವಾಗಿದೆ.

ವಿಧಾನಪರಿಷತ್ ಚುನಾವಣೆಯಲ್ಲೂ ಭಿನ್ನವಾಗಿಲ್ಲ: ಎರಡು ಶಿಕ್ಷಕರು ಹಾಗೂ ಎರಡು ಪದವೀಧರ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲೂ ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಬಂಡಾಯ ಜೋರಾಗಿದೆ. ಬೆಂಗಳೂರಿನ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪುಟ್ಟಣ್ಣ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಪಕ್ಷದ ವಲಯದಲ್ಲಿ ಅಸಮಾಧಾನವಿದೆ. ಜೆಡಿಎಸ್‍ನಿಂದ ಬಂದವರಿಗೆ ಟಿಕೆಟ್ ಘೋಷಣೆ ಮಾಡಿರುವುದಕ್ಕೆ ತೆರೆಮರೆಯಲ್ಲಿ ಭಿನ್ನಮತ ಆರಂಭವಾಗಿದೆ. ಇದನ್ನು ಪುಟ್ಟಣ್ಣ ಎಷ್ಟರ ಮಟ್ಟಿಗೆ ಹತ್ತಿಕ್ಕುತ್ತಾರೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ಇಲ್ಲಿ ಹೇಳಿಕೊಳ್ಳುವಂತಹ ಭಿನ್ನಮತವಿಲ್ಲ. ಆಗ್ನೇಯ ಪದವೀಧರ ಕ್ಷೇತ್ರದಲ್ಲೂ ಬಿಜೆಪಿಗೆ ಬಂಡಾಯ ಬಿಸಿ ಜೋರಾಗಿದೆ. ಚಿದಾನಂದಗೌಡ ಅವರನ್ನು ಸಂಭವನೀಯ ಅಭ್ಯರ್ಥಿ ಎಂದು ಘೊಷಣೆ ಘೋಷಣೆ ಮಾಡಿರುವುದರಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಮೊದಲು ಈ ಕ್ಷೇತ್ರದಿಂದ ಪಕ್ಷದ ವಕ್ತಾರ ಎ.ಎಚ್.ಆನಂದ್ ಅವರಿಗೆ ಟಿಕೆಟ್ ನೀಡುವ ಆಶ್ವಾಸನೆ ನೀಡಲಾಗಿತ್ತು. ಹೀಗಾಗಿ ಅವರು ಕ್ಷೇತ್ರದಾದ್ಯಂತ ಪಕ್ಷದ ಸದಸ್ಯತ್ವ ನೋಂದಣಿ ಹಾಗೂ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿದ್ದರು. ಆದರೆ ಕೊನೆಕ್ಷಣದಲ್ಲಿ ಚಿದಾನಂದಗೌಡರಿಗೆ ಟಿಕೆಟ್ ಘೋಷಣೆ ಮಾಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನಲ್ಲೂ ಇದಕ್ಕೆ ಭಿನ್ನವಾಗಿಲ್ಲ. ಅಲ್ಲೂ ಅಸಮಾಧಾನದ ಹೊಗೆಯಾಡುತ್ತಿದೆ. ಈ ಕ್ಷೇತ್ರದಲ್ಲೂ ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ಅಂತಹ ಬಂಡಾಯವೇನಿಲ್ಲ. ಉಳಿದಂತೆ ನೈರುತ್ಯ ಮತ್ತು ಈಶಾನ್ಯ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿ ಘೋಷಣೆ ಮಾಡಿದೆ. ಹಾಗಾಗಿ, ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಾಗೂ ನಾಲ್ಕು ವಿಧಾನಪರಿಷತ್ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಮೂರು ಪಕ್ಷಗಳಲ್ಲಿ ಭಿನ್ನಮತವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಕಾದುನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.