ETV Bharat / city

ಕೇಂದ್ರ ಬಜೆಟ್ 2022 : ರಾಜ್ಯದ ರೈತರ ನಿರೀಕ್ಷೆಗಳೇನು? - Union budget 2022

ಆರ್ಥಿಕತೆಯ ಚೇತರಿಕೆ ಹಾದಿಯಲ್ಲಿ ಸಾಗುತ್ತಿರುವ ಭಾರತದ ಎದುರು ಈಗ 2022-23ರ ಬಜೆಟ್ ಅನ್ನು ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಸದ್ಯಕ್ಕೆ ಕೃಷಿ, ತೋಟಗಾರಿಕೆ, ನೀರಾವರಿ ಯೋಜನೆಗಳ ಮೇಲೆ ಕರ್ನಾಟಕ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಅವು ಯಾವುವು ಎಂದು ಇಲ್ಲಿದೆ ನೋಡಿ..

ಕೇಂದ್ರ ಬಜೆಟ್
ಕೇಂದ್ರ ಬಜೆಟ್
author img

By

Published : Jan 31, 2022, 12:11 PM IST

ಬೆಂಗಳೂರು : ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಬಹಳಷ್ಟು ನಿರೀಕ್ಷೆಗಳನ್ನು ರಾಜ್ಯ ಸರ್ಕಾರ ಇಟ್ಟುಕೊಂಡಿದೆ. ಅದೇ ರೀತಿ ಕೃಷಿ, ತೋಟಗಾರಿಕೆಯನ್ನು ಉತ್ತೇಜಿಸಲು ಕೇಂದ್ರದ ಬಜೆಟ್​ನಲ್ಲಿ ಹಲವು ನಿರೀಕ್ಷೆ ಹೊಂದಲಾಗಿದೆ.

ಕೊರೊನಾ ಸೋಂಕಿನ ಕರಿನೆರಳು ಕೃಷಿ ವಲಯದ ಮೇಲೆ ಅಷ್ಟೇನೂ ಬೀರದಿದ್ದರೂ ಕೂಡ ಕೋವಿಡ್ ನಿರ್ಬಂಧಗಳಿಂದ ಸಾಗಾಟಕ್ಕೆ ಸಮಸ್ಯೆಯಾಗಿದ್ದು, ಗೊತ್ತಿರುವ ಸಂಗತಿ. ಇದರ ಮಧ್ಯೆಯೂ ರೈತರ ಆದಾಯವನ್ನು ದುಪ್ಪಟ್ಟುಗೊಳಿಸಬೇಕೆಂಬುದು ಕೇಂದ್ರ ಸರ್ಕಾರದ ಗುರಿ.

ಅದಕ್ಕಾಗಿ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ವರ್ಷದಿಂದ ವರ್ಷಕ್ಕೆ ಕೇಂದ್ರ ಬಜೆಟ್​ನಲ್ಲಿ ಕೃಷಿ ವಲಯಕ್ಕೆ ಹೆಚ್ಚಿನ ಹಣ ಮೀಸಲು ಹೀಗೆ ಹಲವು ಹೆಜ್ಜೆಗಳನ್ನು ಇಡುತ್ತಿದೆ.

ಇಷ್ಟಾದರೂ ರೈತರ ಸ್ಥಿತಿ ಸುಧಾರಿಸಿದೆಯಾ? ಎಂಬ ಪ್ರಶ್ನೆಗೆ ಸಕಾರಾತ್ಮಕವಾದ ಉತ್ತರ ಸಿಗುವುದಿಲ್ಲ. ಆರ್ಥಿಕತೆಯ ಚೇತರಿಕೆ ಹಾದಿಯಲ್ಲಿ ಸಾಗುತ್ತಿರುವ ಭಾರತದ ಎದುರು ಈಗ 2022-23ರ ಬಜೆಟ್ ಅನ್ನು ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ.

ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಕೃಷಿ ಸಾಲದ ಗುರಿಯನ್ನು ಸುಮಾರು 18 ಲಕ್ಷ ಕೋಟಿ ರೂ.ಗೆ ಹೆಚ್ಚಿಸುವ ಸಾಧ್ಯತೆಯಿದೆ. ಸದ್ಯ ಕೃಷಿ, ತೋಟಗಾರಿಕೆ, ನೀರಾವರಿ ಯೋಜನೆಗಳ ಮೇಲೆ ಕರ್ನಾಟಕ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.

ಓದಿ: ಕೇಂದ್ರ ಬಜೆಟ್ : ಐಟಿ, ಕೈಗಾರಿಕೆ, ಉದ್ಯಮಗಳ ನಿರೀಕ್ಷೆ ಅಪಾರ

ನೀರಾವರಿ ಯೋಜನೆ ನಿರೀಕ್ಷೆ : ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಬಹಳಷ್ಟು ನಿರೀಕ್ಷೆಗಳನ್ನು ರಾಜ್ಯ ಸರ್ಕಾರ ಇಟ್ಟುಕೊಂಡಿದೆ. ಮುಖ್ಯವಾಗಿ ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳನ್ನಾಗಿ ಘೋಷಣೆ ಮಾಡುವ ನೀರೀಕ್ಷೆಯಲ್ಲಿ ರಾಜ್ಯ ಇದೆ.

ಇದರಿಂದ ಎರಡೂ ಯೋಜನೆಗಳಿಗೂ ಒಟ್ಟು ಯೋಜನಾ ವೆಚ್ಚದ ಶೇ.60ರಷ್ಟು ಹಣಕಾಸಿನ ನೆರವು ಕೇಂದ್ರ ಸರ್ಕಾರದಿಂದ ಸಿಗಲಿದೆ. ಇದರ ಜೊತೆಗೆ ಮೇಕೆದಾಟು ಹಾಗೂ ಮಹಾದಾಯಿ ಯೋಜನೆಗಳಿಗೆ ಕೇಂದ್ರ ಪರಿಸರ ಇಲಾಖೆಯ ಅನುಮತಿ ನೀಡುವ ಬಗ್ಗೆ ಬಜೆಟ್‌ನಲ್ಲಿ ಭರವಸೆ ನೀಡಬಹುದೆಂಬ ನಿರೀಕ್ಷೆಯೂ ಹೊಂದಲಾಗಿದೆ.

ಕೃಷ್ಣಾ ಮೇಲ್ದಂಡೆ ಯೋಜನೆ 3ಕ್ಕೆ 51,148 ಕೋಟಿ ರೂ. ವೆಚ್ಚವಾಗಲಿದ್ದು, ಉತ್ತರ ಕರ್ನಾಟಕದ ಏಳು ಜಿಲ್ಲೆಗಳ 5.94 ಲಕ್ಷ ಹೆಕ್ಟೇರ್ ನೀರಾವರಿಯೇತರ ಭೂಮಿಗೆ ನೀರು ಒದಗಿಸಲಿದೆ. ಈ ಯೋಜನೆಯಿಂದ ಸುಮಾರು 1,21,90,982 ಜನರಿಗೆ ಅನುಕೂಲವಾಗಲಿದೆ. ಅದೇ ರೀತಿ ಎತ್ತಿನಹೊಳೆ ಯೋಜನೆಗೆ 12,912 ಕೋಟಿ ರೂ. ವೆಚ್ಚವಾಗಲಿದೆ.

ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲಿದೆ. ಈ ಎರಡೂ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳಾಗಿ ಘೋಷಿಸಲು ಈಗಾಗಲೇ ಕೇಂದ್ರಕ್ಕೆ ಬೇಡಿಕೆ‌ ಇಡಲಾಗಿದೆ. ಕೇಂದ್ರ ಬಜೆಟ್​​ನಲ್ಲಿ ಘೋಷಣೆ ಮಾಡುವ ವಿಶ್ವಾಸದಲ್ಲಿ ರಾಜ್ಯ ಸರ್ಕಾರ ಇದೆ.

ಓದಿ: ಇಂದಿನಿಂದ ಕೇಂದ್ರ ಬಜೆಟ್​ ಅಧಿವೇಶನ.. ಸಂಸತ್​ನಲ್ಲಿ ಪೆಗಾಸಸ್​ ರಿಂಗಣ ಸಾಧ್ಯತೆ!

ಹೆಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ ನೀರಾವರಿ ಯೋಜನೆಗಳಿಗೆ ವಿಶೇಷ ನೆರವು ನೀಡುವ ಕಾರ್ಯಕ್ರಮ ಜಾರಿ ಮಾಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಇದು ನಿಂತು ಹೋಗಿದೆ. ರಾಜ್ಯದಲ್ಲಿ ನೀರಾವರಿ ಯೋಜನೆಗಳನ್ನು ಮುಗಿಸಲು 2.50 ಲಕ್ಷ ಕೋಟಿ ರೂ. ಅಗತ್ಯವಿದೆ.

ಕೃಷಿ, ತೋಟಗಾರಿಕೆ ನಿರೀಕ್ಷೆಗಳು : ಬ್ಯಾಂಕಿಂಗ್ ವಲಯಕ್ಕೆ ಬೆಳೆ ಸಾಲ ಗುರಿ ಸೇರಿದಂತೆ ವಾರ್ಷಿಕ ಕೃಷಿ ಸಾಲವನ್ನು ಸರ್ಕಾರ ನಿಗದಿಪಡಿಸುತ್ತದೆ. ಕೃಷಿ ಸಾಲದ ಹರಿವು ಕಳೆದ ಕೆಲ ವರ್ಷಗಳಲ್ಲಿ ಸ್ಥಿರವಾಗಿ ಹೆಚ್ಚುತ್ತಿದೆ. ಪ್ರತಿ ಹಣಕಾಸು ವರ್ಷಕ್ಕೆ ನಿಗದಿಪಡಿಸಿದ ಗುರಿಯನ್ನು ಮೀರಿದೆ.

ಸಾಮಾನ್ಯವಾಗಿ ಕೃಷಿ ಸಾಲಗಳು ಒಂಬತ್ತು ಪರ್ಸೆಂಟ್‌ ಬಡ್ಡಿದರವನ್ನು ಆಕರ್ಷಿಸುತ್ತವೆ. ಅಲ್ಪಾವಧಿಯ ಬೆಳೆ ಸಾಲವನ್ನು ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡಲು ಮತ್ತು ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡಲು ಸರ್ಕಾರವು ಬಡ್ಡಿ ರಿಯಾಯಿತಿಯನ್ನು ಒದಗಿಸುತ್ತಿದೆ.

ರೈತರಿಗೆ 3 ಲಕ್ಷ ರೂ.ವರೆಗೆ ಅಲ್ಪಾವಧಿಯ ಕೃಷಿ ಸಾಲವನ್ನು ವಾರ್ಷಿಕ ಶೇ.7ರ ಪರಿಣಾಮಕಾರಿ ದರದಲ್ಲಿ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎರಡು ಶೇಕಡಾ ಬಡ್ಡಿ ಸಬ್ಸಿಡಿಯನ್ನು ನೀಡುತ್ತಿದೆ.

ನಿಗದಿತ ದಿನಾಂಕದೊಳಗೆ ಸಾಲವನ್ನು ತ್ವರಿತವಾಗಿ ಮರುಪಾವತಿಸುವ ರೈತರಿಗೆ ಮೂರು ಪರ್ಸೆಂಟ್‌ ದರದಲ್ಲಿ ಹೆಚ್ಚುವರಿ ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ಇದು ಪರಿಣಾಮಕಾರಿ ಬಡ್ಡಿ ದರವನ್ನು ಶೇ.4ಕ್ಕೆ ಇಳಿಕೆ ಮಾಡುತ್ತದೆ. ಔಪಚಾರಿಕ ಸಾಲದ ವ್ಯವಸ್ಥೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರ ವ್ಯಾಪ್ತಿಯನ್ನು ಹೆಚ್ಚಿಸಲು ಆರ್‌ಬಿಐ ಮೇಲೆ ಆಧಾರರಹಿತ ಕೃಷಿ ಸಾಲದ ಮಿತಿಯನ್ನು 1 ಲಕ್ಷ ರೂ.ನಿಂದ 1.6 ಲಕ್ಷ ರೂ.ಗೆ ಏರಿಸಲು ನಿರ್ಧರಿಸಿದೆ.

ಓದಿ: ಇಂದಿನಿಂದ ಬಜೆಟ್​ ಅಧಿವೇಶನ ಆರಂಭ: ಎಲ್ಲರಿಗೂ ಸ್ವಾಗತ ಕೋರಿದ ಪಿಎಂ ಮೋದಿ

ಸಾರ್ವಜನಿಕ ವಲಯದ ಬ್ಯಾಂಕುಗಳು, ಖಾಸಗಿ ಸಾಲದಾತರು, ಸಹಕಾರಿ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ತಮ್ಮ ಸ್ವಂತ ನಿಧಿಯ ಬಳಕೆಗೆ ಮತ್ತು ಸಹಕಾರಿ ಬ್ಯಾಂಕುಗಳಿಗೆ ಮರು ಹಣಕಾಸು ಮಾಡಲು ನಬಾರ್ಡ್‌ಗೆ ಬಡ್ಡಿ ರಿಯಾಯಿತಿಯನ್ನು ನೀಡಲಾಗುತ್ತದೆ. ನಬಾರ್ಡ್ ಮೂಲಕ ರಾಜ್ಯದ ಡಿಸಿಸಿ ಬ್ಯಾಂಕ್‌ಗಳಿಗೆ ಹಣವನ್ನು ರೈತರಿಗೆ ಕೃಷಿ ಸಾಲ ನೀಡಲು ನೀಡಲಾಗುತ್ತದೆ.

ಕರ್ನಾಟಕದಲ್ಲಿ ಡಿಸಿಸಿ ಬ್ಯಾಂಕ್​ಗಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ 3 ಲಕ್ಷ ರೂ.ವರೆಗಿನ ಬೆಳೆ ಸಾಲಕ್ಕೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿವೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಸಾಲಕ್ಕೆ ಬಡ್ಡಿ ಕಟ್ಟಿ ಹೈರಾಣಾಗುವ ಪ್ರಮೇಯವೇ ಇಲ್ಲ. 3 ಲಕ್ಷ ರೂ.ವರೆಗಿನ ಬೆಳೆ ಸಾಲವನ್ನು ಬಳಸಿಕೊಂಡು ಬಿತ್ತನೆ ಬೀಜ, ಗೊಬ್ಬರ, ಉಳುಮೆ, ಕೂಲಿಯಾಳುಗಳ ಖರ್ಚುವೆಚ್ಚವನ್ನು ನಿಭಾಯಿಸಬಹುದು.

ಕರ್ನಾಟಕದ ಬಹಳಷ್ಟು ಪ್ರಗತಿಪರ ರೈತರು ಬೆಳೆ ಸಾಲ ಪಡೆದು ಕೃಷಿ ವೆಚ್ಚ ನಿಭಾಯಿಸುತ್ತಿದ್ದಾರೆ. ಕರ್ನಾಟಕ ಸರ್ಕಾರದ ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರೂ.ವರೆಗಿನ ಬೆಳೆ ಸಾಲ ಯೋಜನೆಯು ರೈತರಿಗೆ ಸಾಕಷ್ಟು ಅನುಕೂಲಕರವಾಗಿದೆ. ಕರ್ನಾಟಕದಲ್ಲಿ 2019-20ರಲ್ಲಿ 22.58 ಲಕ್ಷ ರೈತರಿಗೆ 13,577 ಕೋಟಿ ರೂ. ಬೆಳೆ ಸಾಲ ವಿತರಣೆ ಮಾಡಲಾಗಿತ್ತು. 2020-21ರಲ್ಲಿ 24.5 ಲಕ್ಷ ರೈತರಿಗೆ 14,500 ಕೋಟಿ ರೂ. ಕೃಷಿ ಸಾಲ ನೀಡುವ ಗುರಿ ಹೊಂದಲಾಗಿತ್ತು.

2021-22ರಲ್ಲಿ 20 ಸಾವಿರ ಕೋಟಿ ರೂ. ಕೃಷಿ ಸಾಲ ನೀಡುವ ಗುರಿಯನ್ನು ಸಹಕಾರ ಇಲಾಖೆ ಹಾಕಿಕೊಂಡಿತ್ತು. ಈಗ 2022-23ರಲ್ಲಿ ಕರ್ನಾಟಕದಲ್ಲೂ ಕೃಷಿ ಸಾಲ, ಬೆಳೆ ಸಾಲ ನೀಡುವ ಗುರಿಯನ್ನು ಸಹಜವಾಗಿಯೇ ಹೆಚ್ಚಿಸಲಾಗುತ್ತದೆ. ಈ ಬಾರಿ 2022ರ ಮಾರ್ಚ್​ನಿಂದ ಪ್ರಾರಂಭವಾಗುವ 2022-23ರ ಹಣಕಾಸು ವರ್ಷದಲ್ಲಿ 25 ಸಾವಿರ ಕೋಟಿ ರೂ. ಕೃಷಿ ಸಾಲ, ಬೆಳೆ ಸಾಲ ನೀಡುವ ಗುರಿಯನ್ನು ಸಹಕಾರ ಇಲಾಖೆ ಹಾಕಿಕೊಳ್ಳುವ ನಿರೀಕ್ಷೆ ಇದೆ.

ಓದಿ: ಕೇಂದ್ರ ಬಜೆಟ್ ನಿರೀಕ್ಷೆ: ಸಾರಿಗೆ ವಲಯದ ಬಗ್ಗೆ ಪರಿಣಿತರು ಹೇಳುವುದೇನು?

ರಾಜ್ಯದಲ್ಲಿ ರೈತರಿಗೆ ಡಿಸಿಸಿ ಬ್ಯಾಂಕ್‌ಗಳು 10 ಲಕ್ಷ ರೂ.ವರೆಗೂ ಮಧ್ಯಮಾವಧಿ, ದೀರ್ಘಾವಧಿ ಸಾಲ ನೀಡುತ್ತವೆ. ಹಸು ಸಾಕಣೆ, ಕೋಳಿ ಸಾಕಣೆ, ಕುರಿ ಸಾಕಣೆ, ಕೃಷಿ ಭೂಮಿ ಅಭಿವೃದ್ದಿ ಸೇರಿದಂತೆ ನಾನಾ ಉದ್ದೇಶಗಳಿಗೆ ಭೂಮಿಯನ್ನು ಅಡಮಾನ ಇಟ್ಟುಕೊಂಡು ಮಧ್ಯಮಾವಧಿ, ದೀರ್ಘಾವಧಿ ಸಾಲ ನೀಡಲಾಗುತ್ತದೆ. ಈ ಸಾಲಕ್ಕೆ ಶೇ.4ರಷ್ಟು ಬಡ್ಡಿ ವಿಧಿಸಲಾಗುತ್ತದೆ.

ಈ ಸಾಲ ಪಡೆಯಲು ಕೃಷಿ ಭೂಮಿಯ ಅಸಲು ಪತ್ರಗಳು, ಪ್ರಾಜೆಕ್ಟ್ ವರದಿ, ಪಹಣಿ, ಭೂ ಕಂದಾಯ ರಸೀದಿ, ಮ್ಯುಟೇಷನ್, ಸಬ್ ರಿಜಿಸ್ಟಾರ್ ಕಚೇರಿಯ ಇಸಿ ಸೇರಿದಂತೆ ಎಲ್ಲ ಅಗತ್ಯ ದಾಖಲೆಗಳನ್ನು ಡಿಸಿಸಿ ಬ್ಯಾಂಕ್​ಗೆ ಸಲ್ಲಿಸಬೇಕು. ಈ ದಾಖಲೆಗಳನ್ನು ಸಾಲ ವಾಪಸ್ ತೀರಿಸುವವರೆಗೂ ಬ್ಯಾಂಕ್ ಇಟ್ಟುಕೊಂಡಿರುತ್ತದೆ.

ಕೃಷಿ ಭೂಮಿ, ನೀರಿನ ಸೌಲಭ್ಯ ಇದ್ದು, ಹಸು ಸಾಕಣೆ, ಕೋಳಿ ಸಾಕಣೆ, ಕುರಿ ಸಾಕಣೆ ಸೇರಿದಂತೆ ವಿವಿಧ ಉದ್ಯೋಗಗಳನ್ನು ಉದ್ಯಮ ಸ್ವರೂಪದಲ್ಲಿ ಮಾಡ ಬಯಸುವ ನಿರುದ್ಯೋಗಿ ಯುವಜನತೆಗೆ, ರೈತರಿಗೆ ಈ ಯೋಜನೆಯೂ ವರದಾನವಾಗಿದೆ. ರೈತರಿಗೆ ಅನುಕೂಲ ಕಲ್ಪಿಸಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಫ‌ಸಲ್‌ ಭಿಮಾ ಯೋಜನೆ ಜಾರಿಗೊಳಿಸಿದೆ.

ಈ ಯೋಜನೆಗೆ ರಾಜ್ಯದ ರೈತರು ಕಳೆದ ವರ್ಷ 26 ಸಾವಿರ ಕೋಟಿ ರೂ. ತಮ್ಮ ಪಾಲಿನ ವಂತಿಗೆ ಕಟ್ಟಿದ್ದಾರೆ. ಆದರೆ, ವಿಮಾ ಕಂಪನಿಯಿಂದ ರೈತರಿಗೆ ಕೇವಲ 4000 ಕೋಟಿ ಮಾತ್ರ ನೀಡಲಾಗಿದೆ. ಇದರಿಂದ ರೈತರಿಗೆ ಅನುಕೂಲಕ್ಕಿಂತ ನಷ್ಟವೇ ಆಗಿದೆ. ಹೀಗಾಗಿ, ಈ ಯೋಜನೆ ಮೂಲಕ ರೈತರಿಗೆ ವಿಮಾ ಹಣ ದೊರಕಿಸಿಕೊಡುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಘೋಷಣೆಯಾಗುತ್ತದೆ ಎಂಬ ನಿರೀಕ್ಷೆ ರಾಜ್ಯ ಹೊಂದಿದೆ.

ಕೃಷಿ ವಲಯದ ನಿರೀಕ್ಷೆ : ರೈತರ ಎಲ್ಲ ಕೃಷಿ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ಶಾಸನಬದ್ಧ ಖಾತ್ರಿ ಬೆಲೆ ಆಗಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ. ಕೋವಿಡ್​ನಿಂದ ರೈತರು ಸಂಕಷ್ಟದಲ್ಲಿದ್ದು, ಸಾಲ ನೀತಿ ಬದಲಾಗಬೇಕಿದೆ. ಪ್ರಸ್ತುತ ಸಹಕಾರ ಸಂಘ ಹಾಗೂ ಬ್ಯಾಂಕುಗಳಲ್ಲಿ ಶೇ.45ರಷ್ಟು ರೈತರಿಗೆ ಮಾತ್ರವೇ ಸಾಲ ಸೌಲಭ್ಯ ಸಿಗುತ್ತಿದೆ.

ಹೀಗಾಗಿ, ಎಲ್ಲಾ ರೈತರಿಗೂ ಸಾಲ ಸೌಲಭ್ಯ ಸಿಗುವಂತಾಗಬೇಕು. ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ಸಿಗುವಂತಾಗಬೇಕು. ಬೆಲೆ ಕಡಿಮೆಯಾದ ವೇಳೆ ಸರ್ಕಾರಗಳೇ ಬೆಳೆಯನ್ನು ಖರೀದಿಸಿ ರೈತರಿಗೆ ನೆರವಾಗುವ ಯೋಜನೆ ಜಾರಿಗೊಳಿಸಬೇಕು. ಎಲ್ಲಾ ಬೆಳೆಗಳಿಗೂ ಬೆಳೆ ವಿಮೆ ಜಾರಿಯಾಗಬೇಕು. ರೈತರ ಪ್ರಕೃತಿ ವಿಕೋಪ ಬೆಳೆ ನಷ್ಟಕ್ಕೆ ವಿಮೆ ಪರಿಹಾರ ಸಿಗುವಂತಾಗಬೇಕು ಎಂದು ಹೇಳಿದ್ದಾರೆ.

ಓದಿ: ಬಜೆಟ್ ಮೇಲೆ ಹತ್ತಾರು ನಿರೀಕ್ಷೆ: ಆರ್ಥಿಕವಾಗಿ ಸೊರಗಿರುವ ರಾಜ್ಯ ಸರ್ಕಾರ ಕೇಂದ್ರ ಆಯವ್ಯಯದ ಮೇಲಿಟ್ಟಿರುವ ನಿರೀಕ್ಷೆಗಳೇನು?

ಕೃಷಿ ಸಾಲ ನೀತಿ ಬದಲಾಗಬೇಕು, ಕೊರೊನಾ ಸಂಕಷ್ಟದಲ್ಲಿ ರೈತರು ನಷ್ಟ ಅನುಭವಿಸಿರುವ ಕಾರಣ ಕೃಷಿ ಜಮೀನುವುಳ್ಳ ಎಲ್ಲ ರೈತರಿಗೂ ಪಹಣಿ ಪತ್ರ ಆಧರಿಸಿ ಕನಿಷ್ಠ 3 ಲಕ್ಷ ರೂ. ಆಧಾರರಹಿತ ಬಡ್ಡಿರಹಿತ ಸಾಲ ಸಿಗುವಂತಾಗಬೇಕು. ಕಬ್ಬಿನ ಎಫ್‌ಆರ್‌ಪಿ ರೈತನ ಹೊಲದಲ್ಲಿನ ದರ ಎಂದು ಬದಲಾಗಬೇಕು.

ಸಕ್ಕರೆ ಇಳುವರಿ ಮಾನದಂಡ ಬದಲಾಗಬೇಕು. ಬೆಂಕಿ ಅನಾಹುತಕ್ಕೆ ಕಬ್ಬು ಸುಟ್ಟು ಹೋದರೆ ಕಬ್ಬಿಗೆ ಕಾರ್ಖಾನೆಗಳು ಕಬ್ಬಿನ ಹಣದಲ್ಲಿ ಶೇ.25ರಷ್ಟು ಕಟಾವು ಮಾಡುವುದನ್ನು ತಪ್ಪಿಸಬೇಕು. ಕೃಷಿ ಉತ್ಪನ್ನಗಳಿಗೆ ಎಪಿಎಂಸಿಯಲ್ಲಿ ಅಡಮಾನ ಸಾಲ ಯೋಜನೆ ಸದೃಢಗೊಳಿಸಬೇಕು. ಕೇವಲ ಆದೇಶವಾಗಿ ಉಳಿಯಬಾರದು, ರೈತರಿಗೆ ಅನುಕೂಲವಾಗುವ ಯೋಜನೆ ಜಾರಿಯಾಗಬೇಕು.

ಕೃಷಿಗೆ ಬಳಸುವ ಕೀಟನಾಶಕ, ರಸಗೊಬ್ಬರ, ಹನಿ ನೀರಾವರಿ, ಉಪಕರಣಗಳು, ಟ್ರ್ಯಾಕ್ಟರ್ ಬಿಡಿಭಾಗಗಳ ಜಿಎಸ್​ಟಿ​ ತೆರಿಗೆ ರದ್ದುಗೊಳಿಸಬೇಕು. ಕಾಡಂಚಿನ ಪ್ರಾಣಿಗಳ ಹಾವಳಿಯಿಂದ ರೈತರ ಬೆಳೆಗಳು ರೈತರ ಜೀವನ ನಾಶವಾಗುತ್ತಿರುವುದನ್ನು ತಪ್ಪಿಸಲು ಐವತ್ತು ವರ್ಷಗಳ ಹಿಂದೆ ರಚಿತವಾಗಿರುವ ವನ್ಯಜೀವಿ ಸಂರಕ್ಷಣೆ ಕಾಯ್ದೆ ತಿದ್ದುಪಡಿ ಮಾಡಲು ಕ್ರಮಕೈಗೊಳ್ಳಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಬಜೆಟ್ ಮಂಡನೆಯಲ್ಲಿ ಕ್ರಮಕೈಗೊಳ್ಳಬೇಕೆಂದು ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.