ETV Bharat / city

ಯಾವುದೇ ವಿಚಾರದಲ್ಲೂ ಕೋಮುಗಲಭೆಗೆ ಅವಕಾಶ ನೀಡುವುದಿಲ್ಲ: ಸಚಿವ ಆರ್.ಅಶೋಕ್ - Muslim traders in Hindu fairs

ದರ್ಗಾದ ಆಮಂತ್ರಣದ ಮೇರೆಗೆ ದರ್ಗಾ ಮುಂದೆ ಕರಗ ಹೋಗುತ್ತದೆ. ಇದಕ್ಕೆ ಯಾವುದೇ ಸಮಸ್ಯೆ ಆಗಬಾರದು. ಇದು ಸರ್ಕಾರದ ಸ್ಪಷ್ಟ ನಿಲುವು. ಈಗಾಗಲೇ ನಾನು ಗೃಹ ಇಲಾಖೆ ಜೊತೆ ಮಾತಾಡಿದ್ದೇನೆ. ಕರಗ ನಡೆಯುವ ಸಮಯದಲ್ಲಿ ಯಾವುದೇ ಗೊಂದಲ ಉಂಟಾಗಬಾರದು ಎಂದು ಸಚಿವ ಆರ್​.ಅಶೋಕ್​ ತಿಳಿಸಿದ್ದಾರೆ.

Minister R.Ashok talked to Press
ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಆರ್​.ಅಶೋಕ್​
author img

By

Published : Apr 8, 2022, 4:00 PM IST

ಬೆಂಗಳೂರು: ಈ ಹಿಂದೆ ಹೇಗೆ ವ್ಯಾಪಾರ ನಡೆಯುತಿತ್ತೋ ಹಾಗೆಯೇ ವ್ಯಾಪಾರ ನಡೆಯಬೇಕು. ಯಾವುದೇ ವಿಚಾರದಲ್ಲಿ ಕೋಮು ಗಲಭೆ ಮಾಡುವುದಕ್ಕೆ ನಾವು ಬೀಡುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಕರಗ ಉತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಮುಸ್ಲಿಂ ಮಾವು ವ್ಯಾಪಾರಿಗಳಿಗೆ ನಿರ್ಬಂಧ ಸಂಬಂಧ ಪ್ರತಿಕ್ರಿಯಿಸಿ, ಇದು ಒಳ್ಳೆಯ ಬೆಳವಣಿಗೆ ಅಲ್ಲ. ರೈತರ ಹಣ್ಣುಗಳನ್ನು ಯಾರು ಬೇಕಾದರೂ ಖರೀದಿ ಮಾಡಬಹುದು. ಇದರಲ್ಲಿ ಯಾವುದೇ ಗೊಂದಲ್ಲ ಇಲ್ಲ ಎಂದರು.

ಬೆಂಗಳೂರು ಕರಗಕ್ಕೆ ಕೆಂಪೇಗೌಡರ ಕೊಡುಗೆ ಕೂಡ ಇದೆ. ಅವರು ಬೆಂಗಳೂರು ಕಟ್ಟಿದಾಗ ಇಲ್ಲಿರುವ ಎಲ್ಲಾ ಸಮುದಾಯಗಳಿಗೆ ವ್ಯಾಪಾರ ಮಾಡುವ ವ್ಯವಸ್ಥೆ ಮಾಡಿಕೊಟ್ಟಿದ್ದರು. ಬೆಂಗಳೂರು ಕರಗಕ್ಕೆ ನೂರಾರು ವರ್ಷದ ಇತಿಹಾಸ ಇದೆ. ಹಿಂದೆ ಕರಗ ಹೇಗೆ ನಡೆಯುತ್ತಿತ್ತು ಹಾಗೇ ನಡೆಯಬೇಕು. ಹಿಂದಿನ ಪರಂಪರೆಯನ್ನು ನಾವು ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಸಿಎಂ ಬೊಮ್ಮಾಯಿ ಮಾತನಾಡುವ ಬಸವಣ್ಣನಲ್ಲ, ಕೆಲಸ ಮಾಡುವ ಬಸವಣ್ಣ.. ಪ್ರತಾಪ್ ಸಿಂಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.