ETV Bharat / city

ನಕಲಿ ಬಿಲ್​​ಗಳ ಹಾವಳಿ: ನೀರಾವರಿ ನಿಗಮಗಳಲ್ಲಿ ವಿಶೇಷ ಆಡಿಟ್ ಮಾಡಲು ಜಲಸಂಪನ್ಮೂಲ ಇಲಾಖೆ ಆದೇಶ

author img

By

Published : Jan 4, 2022, 8:31 AM IST

ನೀರಾವರಿ ನಿಗಮದಲ್ಲಿ ನಡೆದ ನಕಲಿ ಬಿಲ್ ಹಗರಣದಿಂದ ಎಚ್ಚೆತ್ತುಕೊಂಡ ಜಲಸಂಪನ್ಮೂಲ ಇಲಾಖೆ ಇದೀಗ ಎಲ್ಲ ನೀರಾವರಿ ನಿಗಮಗಳಲ್ಲಿ ವಿಶೇಷ ಆಡಿಟ್ ಮಾಡಲು ಆದೇಶ ನೀಡಿದೆ. ಈ ಸಂಬಂಧ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ನಿರ್ದೇಶನ ನೀಡಿದ್ದು, ಎಲ್ಲ ನಿಗಮಗಳಲ್ಲಿ ವಿಶೇಷ ಆಡಿಟ್ ಮಾಡಿಸಲಾಗುತ್ತಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನೀರಾವರಿ ನಿಗಮಗಳಲ್ಲಿ ನಕಲಿ ಬಿಲ್ ಸೃಷ್ಟಿಸಿ ಹಣ ದುರುಪಯೋಗ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಲಸಂಪನ್ಮೂಲ ಇಲಾಖೆ ನೀರವಾರಿ ನಿಗಮಗಳಲ್ಲಿನ ಹಣಕಾಸು ವಹಿವಾಟುಗಳನ್ನು ವಿಶೇಷ ಆಡಿಟ್​​ಗೊಳಪಡಿಸಲು ನಿರ್ಧರಿಸಿದೆ.

ಜಲಸಂಪನ್ಮೂಲ ಇಲಾಖೆಗೆ ಪ್ರತಿ ಬಜೆಟ್​​​ನಲ್ಲಿ ಸಾವಿರಾರು ಕೋಟಿ ರೂ. ಅನುದಾನ ಬಿಡುಗಡೆಯಾಗುತ್ತದೆ. ವಿವಿಧ ನೀರಾವರಿ ನಿಗಮಗಳ ಮೂಲಕ ಸಾವಿರಾರು ಕಾಮಗಾರಿಗಳು ನಡೆಯುತ್ತಿರುತ್ತವೆ. ಇಲಾಖೆ ವ್ಯಾಪ್ತಿಯಲ್ಲಿ ಕೃಷ್ಣಾ ಭಾಗ್ಯ ಜಲನಿಗಮ, ಕರ್ನಾಟಕ ನೀರಾವರಿ ನಿಗಮ, ಕಾವೇರಿ ನೀರಾವರಿ ನಿಗಮ ಮತ್ತು ವಿಶ್ವೇಶ್ವರಯ್ಯ ಜಲ ನಿಗಮಗಳು ಕಾರ್ಯ ನಿರ್ವಹಿಸುತ್ತಿವೆ.

ಈ ನೀರಾವರಿ ನಿಗಮಗಳಿಗೆ ಸಾವಿರಾರು ಕೋಟಿ ರೂ.ಪ್ರತಿ ವರ್ಷ ಅನುದಾನ ಹಂಚಿಕೆಯಾಗುತ್ತದೆ. ಪ್ರಮುಖ ನಾಲೆ, ಕಾಲುವೆ, ನೀರಾವರಿ ಕಾಮಗಾರಿಗಳನ್ನು ಈ ನಿಗಮದ ಮೂಲಕವೇ ಅನುಷ್ಠಾನಗೊಳಿಸಲಾಗುತ್ತದೆ. ಸರ್ಕಾರವೇ ನಿಗಮಗಳಿಗೆ ಸಾವಿರಾರು ಕೋಟಿ ಸಾಲ ಮಾಡಿ ಕೊಡುತ್ತದೆ.

ಹಣ ದುರುಪಯೋಗದ ಆರೋಪ:

ಬೃಹತ್ ಪ್ರಮಾಣದ ಅನುದಾನ ಜಲಸಂಪನ್ಮೂಲ ಇಲಾಖೆಗೆ ಹಂಚಿಕೆಯಾಗುತ್ತಿದೆ. ಇದರ ಜತೆಗೆ ಈ ನೀರಾವರಿ ನಿಗಮಗಳಲ್ಲಿ ಸಾವಿರಾರು ಕೋಟಿ ಹಣ ದುರುಪಯೋಗದ ಆರೋಪ ಕೇಳಿ ಬರುತ್ತಿದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಶಾಮೀಲಾಗಿ ಹಣ ದುರುಪಯೋಗ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದೆ.

ಕರ್ನಾಟಕ ನೀರಾವರಿ ನಿಗಮದ ನಕಲಿ ಬಿಲ್ ಹಗರಣ:

ಇತ್ತೀಚೆಗೆ ಕರ್ನಾಟಕ ನೀರಾವರಿ ನಿಗಮದಲ್ಲಿ ನಕಲಿ ಬಿಲ್ ಹಗರಣ ಬೆಳಕಿಗೆ ಬಂದಿತ್ತು. ನಿಗಮದ ವ್ಯಾಪ್ತಿಯ ಹಿಪ್ಪರಗಿ ಬ್ಯಾರೇಜ್ ಯೋಜನಾ ವಿಭಾಗ (ಬೆಳಗಾವಿ ವಲಯ), ನೀರಾವರಿ ಯೋಜನಾ ವಿಭಾಗ ನಂ.1 (ಕಲಬರುಗಿ ವಲಯ) ಮತ್ತು ತುಂಗಭದ್ರಾ ಎಡದಂಡೆ ಕಾಲುವೆ ವಿಭಾಗ ನಂ.4, ಸಿರವಾರ (ಮುನಿರಾಬಾದ್ ವಲಯ) ಕಚೇರಿಗಳಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡಿರುವುದು ಬೆಳಕಿಗೆ ಬಂದಿತ್ತು. ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸರ್ಕಾರ ಆದೇಶಿಸಿತ್ತು.

23 ಅಧಿಕಾರಿಗಳ ಅಮಾನತು:

ಅಥಣಿಯ ಹಿಪ್ಪರಗಿ ಬ್ಯಾರೇಜ್ ಯೋಜನಾ ವಿಭಾಗದಲ್ಲಿ 8 ನಕಲಿ ಬಿಲ್​​​ಗಳನ್ನು ಸೃಷ್ಟಿಸಿ 16.62 ಕೋಟಿ ರೂ. ದುರ್ಬಳಕೆ ಮಾಡಲಾಗಿತ್ತು. ಅದರ ಬೆನ್ನಲ್ಲೇ ನಿಗಮದ ಕಲಬುರ್ಗಿ ಹಾಗೂ ಮುನಿರಾಬಾದ್ ವಲಯ ಕಚೇರಿಗಳಲ್ಲಿ 20 ನಕಲಿ ಬಿಲ್ ಸೃಷ್ಟಿಸಿ 11.73 ಕೋಟಿ ರೂ. ದುರುಪಯೋಗ ಮಾಡಿರುವುದು ಪತ್ತೆಯಾಗಿದೆ. ಈ ಸಂಬಂಧ ಒಟ್ಟು 23 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಈ ಪ್ರಕರಣದ ಮುಂದುವರೆದ ತನಿಖೆಯನ್ನು ಕೈಗೊಂಡಿದ್ದಾಗ ಲೆಕ್ಕಾಧೀಕ್ಷಕರಾದ ದೀಪಕ ಮೂಡಲಗಿ, ಕೇಂದ್ರ ಕಚೇರಿಯಲ್ಲಿ ಸೇವೆ ಸಲ್ಲಿಸಿದ 2013-14 ರ ಅವಧಿಯಲ್ಲಿ ನಕಲಿ ಬಿಲ್​​ಗಳನ್ನು ಸೃಷ್ಟಿಸಿ ಹಣ ದುರುಪಯೋಗ ಮಾಡಿಕೊಂಡಿರುವುದು ಬಯಲಾಗಿದೆ.

ವೈಯಕ್ತಿಕ ಖಾತೆಗೆ ಅಕ್ರಮವಾಗಿ 11.73 ಕೋಟಿ ರೂ. ಹಣ ಜಮೆ:

ಅದರಂತೆ ಸಿರವಾರ ವಿಭಾಗದಲ್ಲಿ 5.11 ಕೋಟಿ ರೂ., ಇಇ ಕಲಬುರ್ಗಿ ವಿಭಾಗದಲ್ಲಿ 2.82 ಕೋಟಿ ರೂ., ಇಇಹೆಚ್​​​ಬಿಸಿ ಅಥಣಿ ವಿಭಾಗದಲ್ಲಿ 17.17 ಕೋಟಿ ರೂ., ಇಇ ಅಥಣಿ ವಿಭಾಗದಲ್ಲಿ 3.24 ಕೋಟಿ ರೂ. ಸೇರಿ ಒಟ್ಟು 28.35 ಕೋಟಿ ರೂ. ಹಣ ದುರ್ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ. ಅಧಿಕಾರಿಗಳು ಸರ್ಕಾರದ ಹಣವನ್ನು ಚೆಕ್ ಮುಖಾಂತರ ಗುತ್ತಿಗೆದಾರರ ವೈಯಕ್ತಿಕ ಖಾತೆಗೆ ಅಕ್ರಮವಾಗಿ ಒಟ್ಟು 11.73 ಕೋಟಿ ರೂ. ಹಣ ಜಮೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ.

ವಿಶೇಷ ಆಡಿಟ್​​​ ಮಾಡಲು ಇಲಾಖೆ ಸೂಚನೆ:

ನೀರಾವರಿ ನಿಗಮದಲ್ಲಿ ನಡೆದ ಇಷ್ಟು ದೊಡ್ಡ ಪ್ರಮಾಣದ ನಕಲಿ ಬಿಲ್ ಹಗರಣದಿಂದ ಎಚ್ಚೆತ್ತುಕೊಂಡ ಜಲಸಂಪನ್ಮೂಲ ಇಲಾಖೆ ಇದೀಗ ಎಲ್ಲ ನೀರಾವರಿ ನಿಗಮಗಳಲ್ಲಿ ವಿಶೇಷ ಆಡಿಟ್ ಮಾಡಲು ಆದೇಶ ನೀಡಿದೆ.

ಈ ಸಂಬಂಧ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ನಿರ್ದೇಶನ ನೀಡಿದ್ದು, ಎಲ್ಲ ನಿಗಮಗಳಲ್ಲಿ ವಿಶೇಷ ಆಡಿಟ್ ಮಾಡಿಸಲಾಗುತ್ತಿದೆ. ವಿಶೇಷ ಆಡಿಟ್ ಮೂಲಕ ಇಂತಹ ನಕಲಿ ಬಿಲ್ ಹಗರಣ ನಡೆದಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

ವಿಶೇಷ ಆಡಿಟ್ ಮೂಲಕ ವಿಭಾಗ ಕಚೇರಿಯಲ್ಲಿ ಲಭ್ಯವಿರುವ ದಾಖಲೆಗಳು, ಕೇಂದ್ರ ಕಚೇರಿಯಿಂದ ಪಾವತಿಯಾಗಿರುವ ಮೂಲ ವೋಚರ್‌ಗಳು, ಡಾಟಾ ಎಂಟ್ರಿಯ ಟ್ಯಾಲಿ ಶೀಟ್ ಮತ್ತು ಬ್ಯಾಂಕ್ ಪಾಸ್ ಶೀಟ್ ದಾಖಲೆಗಳನ್ನು ಹಾಗೂ ಕಾಮಗಾರಿ ಬಿಲ್​​ಗಳ ವೋಚರ್‌ಗಳನ್ನು ಪರಿಶೀಲನೆ ಮಾಡಿ ವಿಭಾಗ ಮತ್ತು ಕೇಂದ್ರ ಕಚೇರಿಯ ದಾಖಲೆಗಳೊಂದಿಗೆ ತಾಳೆ ಮಾಡಲಾಗುತ್ತಿದೆ. ಆ ಮೂಲಕ ಹಣ ದುರುಪಯೋಗ ಪ್ರಕರಣಗಳನ್ನು ಪತ್ತೆ ಹಚ್ಚಲಾಗುತ್ತಿದೆ.

ಕರ್ನಾಟಕ ನೀರಾವರಿ ನಿಗಮದಲ್ಲಿನ ಅವ್ಯವಹಾರ ಬಯಲಿಗೆ ಬಂದ ಹಿನ್ನೆಲೆ ಎಲ್ಲ ನಿಗಮಗಳಲ್ಲಿ ವಿಶೇಷ ಆಡಿಟ್ ಮಾಡಲು ಸೂಚನೆ ನೀಡಿದ್ದೇನೆ. ವಿಶೇಷ ಆಡಿಟ್ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಇದನ್ನೂ ಓದಿ: ಶಾಸಕ ಸೋಮಶೇಖರ ರೆಡ್ಡಿಗೆ ಸಂಕಷ್ಟ: ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣ ರದ್ದತಿಗೆ ನಿರಾಕರಿಸಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.