ETV Bharat / city

ಜೂನ್​​ನಲ್ಲಿ 'ಜಲಸಂಗ್ರಹಾರ ಕೆರೆ' ಕಾಮಗಾರಿ ಪೂರ್ಣ: ಸಚಿವ ಬಿ.ಎ.ಬಸವರಾಜ್ - Water collector lake Works latest upadte

ರಾಜ್ಯದ ಒಳಚರಂಡಿರಹಿತ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಲತ್ಯಾಜ್ಯ ನೀರು ಕೆರೆ ನದಿ ಮೂಲಗಳಿಗೆ ಸೇರಿ ಮಾಲಿನ್ಯವಾಗುವುದನ್ನು ತಡೆಯಲು ಯುಜಿಡಿ ವ್ಯವಸ್ಥೆ ಆಗುವವರೆಗೂ ಮಧ್ಯಂತರ ಪರಿಹಾರವಾಗಿ ಎಫ್‍ಎಸ್‍ಎಸ್‍ಎಂ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್ ವಿಧಾನಸಭೆಯಲ್ಲಿ ತಿಳಿಸಿದರು.

Minister BA Basavaraj
ಸಚಿವ ಬಿ.ಎ.ಬಸವರಾಜ್
author img

By

Published : Mar 25, 2022, 5:15 PM IST

ಬೆಂಗಳೂರು: ಮಲಪ್ರಭಾ ಬಲದಂಡೆ ಕಾಲುವೆ ಮೂಲದಿಂದ ಗಜೇಂದ್ರಘಡ, ನರೇಗಲ್, ರೋಣ ಪಟ್ಟಣ ಸೇರಿದಂತೆ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ 'ಜಲಸಂಗ್ರಹಾರ ಕೆರೆ' ಕಾಮಗಾರಿಯು ಶೇ.75ರಷ್ಟು ಪೂರ್ಣಗೊಂಡಿದ್ದು, ಜೂನ್‍ನಲ್ಲಿ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಇಂದು ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಕಳಕಪ್ಪ ಬಂಡಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 7050 ದಶಲಕ್ಷ ಲೀಟರ್ ಸಾಮರ್ಥ್ಯದ ಜಲಸಂಗ್ರಹಾರವನ್ನು ನಿರ್ಮಿಸಲಾಗುತ್ತಿದೆ. 2018ರ ಅಕ್ಟೋಬರ್‌ನಿಂದ 2021ರ ಜೂನ್‍ವರೆಗೂ ಕಾಮಗಾರಿ ಸ್ಥಗಿತವಾಗಿತ್ತು. ಈಗ ಪ್ರಗತಿಯಲ್ಲಿದೆ ಎಂದು ವಿವರಿಸಿದರು.

ಅಗತ್ಯಕ್ಕಿಂತ ಹೆಚ್ಚು ಬಿಲ್ ನೀಡಲಾಗಿದೆ ಎಂಬ ಆರೋಪದ ಬಗ್ಗೆ ಗುತ್ತಿಗೆದಾರರ ವಿರುದ್ಧ ವಿಚಾರಣೆ ಆರಂಭವಾಗಿದ್ದು, ಈ ತಿಂಗಳಲ್ಲಿ ವರದಿ ಬರಲಿದೆ. ವರದಿ ಬಂದ ನಂತರ ಯಾವುದೇ ಮುಲಾಜಿಲ್ಲದೇ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ದೇವನಹಳ್ಳಿ ತಾಲೂಕಿನ ವಿಜಯಪುರ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿಗಳಿಗೆ 2 ಕೋಟಿ ರೂ. ತಾಂತ್ರಿಕ ಅನುಮೋದನೆ ನೀಡಿ ಕಾಮಗಾರಿಯನ್ನು 1999ರ ಏಪ್ರಿಲ್‍ನಲ್ಲಿ ವಿಜಯಪುರ ಪುರಸಭೆಗೆ ಹಸ್ತಾಂತರಿಸಲಾಗಿದೆ ಎಂದು ಜೆಡಿಎಸ್ ಸದಸ್ಯ ನಿಸರ್ಗ ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪುರಸಭೆ ವತಿಯಿಂದ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಸರ್ಕಾರಕ್ಕೆ ಕೋರಿಕೆ ಬಂದ ನಂತರ ಪರಿಶೀಲಿಸಿ ಕ್ರಮ ಜರುಗಿಸುವುದಾಗಿ ಹೇಳಿದರು.

ಇನ್ನು ರಾಜ್ಯದ ಒಳಚರಂಡಿ ರಹಿತ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಲತ್ಯಾಜ್ಯ ನೀರು ಕೆರೆ ನದಿ ಮೂಲಗಳಿಗೆ ಸೇರಿ ಮಾಲಿನ್ಯವಾಗುವುದನ್ನು ತಡೆಯಲು ಯುಜಿಡಿ ವ್ಯವಸ್ಥೆ ಆಗುವವರೆಗೂ ಮಧ್ಯಂತರ ಪರಿಹಾರವಾಗಿ ಎಫ್‍ಎಸ್‍ಎಸ್‍ಎಂ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ದೇವನಹಳ್ಳಿ ಪುರಸಭೆಯಲ್ಲಿ 6 ಕೆಎಲ್‍ಡಿ ಸಾಮರ್ಥ್ಯ ಘಟಕ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.

ನೇರ ವೇತನ ನೀಡಲು ಅವಕಾಶವಿಲ್ಲ: ಪುರಸಭೆ, ಪಟ್ಟಣ ಪಂಚಾಯತಿ ಹಾಗೂ ನಗರಸಭೆಗಳಲ್ಲಿ ಹೊರಗುತ್ತಿಗೆ ಮೂಲಕ ನೇಮಕ ಮಾಡಿಕೊಂಡ ನೌಕರರಿಗೆ ನೇರ ವೇತನ ನೀಡಲು ಅವಕಾಶವಿಲ್ಲ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಅವರು, ಕಾಂಗ್ರೆಸ್ ಸದಸ್ಯ ಅಜಯ್ ಧರ್ಮಸಿಂಗ್ ಅವರ ಪ್ರಶ್ನೆಗೆ ಉತ್ತರಿಸಿದರು. ಹೊರಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ಳುವ ಅಧಿಕಾರವನ್ನು ಜಿಲ್ಲಾಕಾರಿಗಳಿಗೆ ನೀಡಲಾಗಿದೆ. ವೇತನವನ್ನು ತೆರಿಗೆ ಹಣದಲ್ಲಿ ಹಾಗೂ ಎಸ್‍ಎಫ್‍ಸಿಎಫ್ ಅನುದಾನದಲ್ಲಿ ನೀಡಬಹುದಾಗಿದೆ. ಮಂಜೂರಾದ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾದ ಹೊರಗುತ್ತಿಗೆ ನೌಕರರಿಗೆ ನೇರ ವೇತನ ಪಾವತಿ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಕಲ್ಯಾಣ ಕರ್ನಾಟಕದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಖಾಲಿ ಇರುವ 89 ನೀರು ಸರಬರಾಜು ಆಪರೇಟರ್, 163 ಸಹಾಯಕ ನೀರು ಸರಬರಾಜು ಆಪರೇಟರ್ ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗದಿಂದ ಭರ್ತಿ ಮಾಡಲು ಕ್ರಮ ವಹಿಸಲಾಗುವುದು ಎಂದು ಸಚಿವರು ಹೇಳಿದರು.

ಸಣ್ಣ ಕೈಗಾರಿಕೆಗೆ ಶೇ.35ರಷ್ಟು ವೆಚ್ಚ ಸಹಾಯಧನ: ಒಂದು ಕೋಟಿ ರೂ. ಬಂಡವಾಳ ಹೂಡಿಕೆ ಮಾಡುವ ಸಣ್ಣ ಕೈಗಾರಿಕೆಗೆ ಶೇ.35ರಷ್ಟು ವೆಚ್ಚದ ಸಹಾಯಧನ ಸಿಗಲಿದೆ ಎಂದು ಪ್ರತಿಪಕ್ಷ ಉಪನಾಯಕ ಯು.ಟಿ.ಖಾದರ್ ಅವರ ಪ್ರಶ್ನೆಗೆ ಸಣ್ಣ ಕೈಗಾರಿಕಾ ಸಚಿವ ನಾಗರಾಜ್ ಉತ್ತರಿಸಿದರು. ಕೈಗಾರಿಕೆಗಳಿಗೆ ನಿಗದಿತ ಸಮಯದಲ್ಲಿ ಸಾಲ ಕೊಡಲು ಬ್ಯಾಂಕ್‍ಗಳಿಗೆ ಸೂಚಿಸಲಾಗುವುದು. ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಸಹಾಯಧನ ಪಡೆಯಲು ಆದಾಯ ಮಿತಿ ವಿಸುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. 2021-22ನೇ ಸಾಲಿನಲ್ಲಿ ಪ್ರಧಾನಿಯವರ ಉದ್ಯೋಗ ಸೃಜನೆ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 298 ಫಲಾನುಭವಿಗಳು ಸೌಲಭ್ಯ ಪಡೆದಿದ್ದಾರೆ ಎಂದು ಹೇಳಿದರು.

ಗ್ರಾಮ ಪಂಚಾಯತಿ ಮೇಲ್ದರ್ಜೆಗೆ: 10 ಸಾವಿರದಿಂದ 20 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕಾ ಸಚಿವ ಎಂಟಿಬಿ ನಾಗರಾಜ್ ಅವರು, ಜೆಡಿಎಸ್ ಉಪನಾಯಕ ಬಂಡೆಪ್ಪ ಕಾಶಂಪುರ್ ಅವರ ಪ್ರಶ್ನೆಗೆ ಉತ್ತರಿಸಿದರು. ಗ್ರಾಮ ಪಂಚಾಯತಿಯನ್ನು ಪಟ್ಟಣ ಪಂಚಾಯತಿಯನ್ನಾಗಿ ಮೇಲ್ದರ್ಜೆಗೇರಿಸಲು ಜಿಲ್ಲಾಧಿಕಾರಿಯಿಂದ ಪ್ರಸ್ತಾವನೆ ಬರಬೇಕು. ಅಂತಹ ಪ್ರಸ್ತಾವನೆಗಳನ್ನು ಅಧಿಸೂಚನೆ ಹೊರಡಿಸಿ ಮೇಲ್ದರ್ಜೆಗೇರಿಸಲಾಗುವುದು. ರಾಜ್ಯದ ಗ್ರಾಮ ಪಂಚಾಯತಿಗಳನ್ನು ಈ ರೀತಿ ಮೇಲ್ದರ್ಜೆಗೇರಿಸಲು ಜೂನ್ 30ರವರೆಗೂ ಅವಕಾಶವಿದೆ ಎಂದರು.

ಬೀದರ್ ಜಿಲ್ಲಾಕಾರಿಗಳು ಪೌರಾಡಳಿತ ನಿರ್ದೇಶನಾಲಯಕ್ಕೆ ಅಗತ್ಯ ದಾಖಲೆ ಸಲ್ಲಿಸಿದ್ದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಬೀದರ್ ತಾಲೂಕಿನ ಕಮಟಾನ ಮತ್ತು ಚಿಟಗುಪ್ಪ ತಾಲೂಕಿನ ಮುನ್ನಹೆಕ್ಕೆಹಳ್ಳಿ ಗ್ರಾ.ಪಂಗಳು ಪಟ್ಟಣ ಪಂಚಾಯತಿಯಾಗಿ ಪರಿವರ್ತನೆ ಹೊಂದಲು ಅರ್ಹತೆ ಹೊಂದಿವೆ ಎಂದು ತಿಳಿಸಿದರು.

ರಾಜಕಾಲುವೆಗಳಿಲ್ಲ: ತುರುವೇಕೆರೆ ಪಟ್ಟಣ ವ್ಯಾಪ್ತಿಯಲ್ಲಿ ಯಾವುದೇ ರಾಜ್ಯ ಕಾಲುವೆಗಳಿಲ್ಲ. ಆರು ಹತ್ತಿಗಿಡದ ಹಳ್ಳಗಳಿದ್ದು, ಅಕ್ರಮ ಮತ್ತು ಒತ್ತುವರಿ ನಿರ್ಮಾಣವಾಗಿಲ್ಲ ಎಂದು ಶಾಸಕ ಮಸಾಲ ಜಯರಾಂ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಒಂದು ವೇಳೆ ಅಕ್ರಮ ಮತ್ತು ಒತ್ತುವರಿಯಾಗಿದ್ದರೆ, ತೆರವಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ವೇಳೆ ಮಾತನಾಡಿದ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ್, ತುರುವೇಕೆರೆ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದರು.

ಇದನ್ನೂ ಓದಿ: ಶುಲ್ಕ ಪಾವತಿಸದಿರುವ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ : ಸಚಿವ ಬಿ ಸಿ ನಾಗೇಶ್‌

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.