ETV Bharat / city

ಮತದಾನದ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲವೇ? ಈಗಲೇ ನೋಂದಾಯಿಸಿಕೊಳ್ಳಿ - https://www.ceokarnataka.kar.nic.in

2020ರ ವಿಶೇಷ ಮತದಾನ ನೋಂದಣಿಯನ್ನು ಸೆಪ್ಟೆಂಬರ್ 1ರಿಂದ (ನಾಳೆಯಿಂದ) ಆರಂಭಿಸಿರುವ ಚುನಾವಣಾ ಆಯೋಗ, ಜನವರಿ 8ರವರೆಗೂ ಮತದಾರರು ತಮ್ಮ ಹೆಸರು ಸೇರಿಸಲು ಅವಕಾಶ ನೀಡಿದೆ.

Voter list revision start September 1st
author img

By

Published : Aug 31, 2019, 9:15 PM IST

ಬೆಂಗಳೂರು: 2020ರ ವಿಶೇಷ ಮತದಾನ ನೋಂದಣಿಯನ್ನು ಸೆಪ್ಟೆಂಬರ್ 1ರಿಂದ (ನಾಳೆಯಿಂದ) ಆರಂಭಿಸಿರುವ ಚುನಾವಣಾ ಆಯೋಗ, ಜನವರಿ 8ರವರೆಗೂ ಮತದಾರರು ತಮ್ಮ ಹೆಸರು ಸೇರಿಸಲು ಅವಕಾಶ ನೀಡಿದೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರತಿ ವರ್ಷ ನಡೆಯಲಿದೆ. 2020 ಜನವರಿ 1ಕ್ಕೆ 18 ವರ್ಷ ತುಂಬುವವರು ಅರ್ಜಿ ಸಲ್ಲಿಸಬಹುದು. ಜತೆಗೆ ಗುರುತಿನ ಚೀಟಿಯಲ್ಲಿ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಸರಿಪಡಿಸಿಕೊಳ್ಳಬಹುದು. ಸೆಪ್ಟೆಂಬರ್​ 1ರಿಂದ 2020ರ ಜನವರಿ 8ರವರೆಗೆ ಇದಕ್ಕೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.

ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್..

ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಲೋಕಸಭಾ ಚುನಾವಣೆ ಸಮಯದಲ್ಲಿ ಮತದಾರರ ಹೆಸರು ಬಿಟ್ಟು ಹೋಗಿದೆ ಎಂದು ಆಕ್ಷೇಪಗಳು ಬಂದಿದ್ದವು. ರಾಜಕೀಯ ಪಕ್ಷಗಳ ನಾಯಕರ ಪಾತ್ರ ಈಗ ಪ್ರಮುಖ. ಈಗಲೇ ತಪ್ಪಿದ್ದಲ್ಲಿ ಸರಿಪಡಿಸಲು ಇದು ಸಕಾಲ. ಅಧಿಕಾರಿಗಳ ಜತೆ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಬೂತ್​ ಮಟ್ಟದ ಏಜೆಂಟರನ್ನು ನೇಮಿಸಿದರೆ ಉತ್ತಮ. ಆಗ ನಕಲಿ ಮತದಾರರ ಹಾವಳಿ ತಪ್ಪಲಿದೆ ಎಂದು ಹೇಳಿದರು.

ಮತದಾರರ ಪರಿಷ್ಕರಣೆ ಕಾರ್ಯಕ್ರಮವನ್ನು (ಇವಿಪಿ) ಮಾಡುತ್ತಿದ್ದೇವೆ. ಅಲ್ಲಿ ಮತದಾರರು ಆನ್​ಲೈನ್​ ಇಲ್ಲವೇ ಕಾಮನ್ ಸರ್ವೀಸ್ ಸೆಂಟರ್​ (ಸಿಎಸ್​ಸಿ) ಮೂಲಕ ಅರ್ಜಿ ಸಲ್ಲಿಸಬಹುದು. ಹಾಗೂ ಸಹಾಯವಾಣಿ 1950ಕ್ಕೂ ಕರೆ ಮಾಡಬಹುದು. ನಮ್ಮ ವೆಬ್​​ಸೈಟ್​ನಲ್ಲಿ (https://www.ceokarnataka.kar.nic.in) ಕೂಡ ಎಲ್ಲಾ ಮಾಹಿತಿ ಇದೆ ಎಂದು ವಿವರಿಸಿದರು.

ಪ್ರಸ್ತುತ ರಾಜ್ಯದಲ್ಲಿ 5,10,60,498 ಮತದಾರರಿದ್ದಾರೆ. ಅದರಲ್ಲಿ ಪುರುಷರು 2,58,01,694, ಮಹಿಳೆಯರು 2,52,54,153, ಇತರೆ 465 ಮತದಾರರಿದ್ದಾರೆ.

ಉಪ ಚುನಾವಣೆಗೆ ಸಿದ್ಧ: 17 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸಿದ್ಧವಾಗಿದ್ದೇವೆ. ಇದಕ್ಕೆ ಇನ್ನೂ ಆರು ತಿಂಗಳು ಕಾಲಾವಕಾಶವಿದೆ. ಅಲ್ಲದೆ, ದೇಶಾದ್ಯಂತ ಸಾಕಷ್ಟು ಚುನಾವಣೆಗಳು ನಡೆಯಲಿವೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥರು ತೀರ್ಮಾನ ಮಾಡ್ತಾರೆ ಎಂದರು.

Intro:newsBody:ನಾಳೆಯಿಂದ ರಾಜ್ಯಾದ್ಯಂತ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ: ಸಂಜೀವ್ ಕುಮಾರ್

ಬೆಂಗಳೂರು: ಚುನಾವಣಾ ಆಯೋಗವು 2020 ರ ವಿಶೇಷ ಮತದಾನ ನೋಂದಣಿ ನಾಳೆಯಿಂದ ಆರಂಭವಾಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ತಿಳಿಸಿದರು.
ಬೆಂಗಳೂರಿನ ಶೇಷಾದ್ರಿ ರಸ್ತೆಯ ಚುನಾವಣಾ ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರತಿವರ್ಷ ಮಾಡುತ್ತೇವೆ. 2020 ಜನವರಿ 1 ಕ್ಕೆ 18 ವರ್ಷ ತುಂಬುವವರು ಅರ್ಜಿ ಸಲ್ಲಿಸಬಹುದು. ಇದರ ಜತೆ ಮತದಾರರ ಪಟ್ಟಿಯಲ್ಲಿ ಕೈಬಿಟ್ಟು ಹೋದವರು, ವಿಳಾಸ ಬದಲಾದವರು ಸರಿಪಡಿಸಿಕೊಳ್ಳಬಹುದಾಗಿದೆ. ಸೆ.1 ರಿಂದ 2020 ರ ಜನವರಿ 8 ರ ವರೆಗೆ ಅವಕಾಶ ಇರಲಿದೆ ಎಂದಿದ್ದಾರೆ.
ನಮ್ಮ ಸಿಬ್ಬಂದಿ ಮನೆ ಮನೆಗೆ ಭೇಟಿಮಾಡಿ ಮಾಹಿತಿ ಪಡೆದು ಪಟ್ಟಿ ಸಿದ್ಧಪಡಿಸುತ್ತಾರೆ. ಲೋಕಸಭಾ ಚುನಾವಣೆ ವೇಳೆ ಹೆಸರು ಬಿಟ್ಟು ಹೋಗಿದೆ ಎಂದು ಹಲವರು ಆರೋಪಿಸಿದ್ದರು. ಇದರಿಂದ ನಾಗರಿಕರು ಈಗ ಗಮನ ಹರಿಸಿ ಹಿಂದೆ ನಿಟ್ಟು ಜೋದ ಹೆಸರನ್ನು ದಾಖಲೆ ಸಲ್ಲಿಸಿ ಸರಿಪಡಿಸಿಕೊಳ್ಳಬಹುದಾಹಿದೆ. ರಾಜಕೀಯ ಪಕ್ಷಗಳ ಪಾತ್ರ ಈಗ ಪ್ರಮುಖ. ಈಗಲೇ ತಪ್ಪಿದ್ದಲ್ಲಿ ಸರಿಪಡಿಸಲು ಇದು ಸಕಾಲ. ನಮ್ಮವರ ಜತೆ ರಾಜಕೀಯ ಪಕ್ಷದವರು ತಮ್ಮ ಭೂತ್ ಏಜೆಂಟ್ ಗಳನ್ನು ನೇಮಿಸಿದರೆ ಉತ್ತಮ. ಈ ಮೂಲಕ ನಮ್ಮ ಸಹಕಾರಕ್ಕೆ ಸಿಗಬೇಕು. ಆಗ ನಕಲು ಇತರೆ ಸಮಸ್ಯೆ ನಿವಾರಣೆ ಆಗಲಿದೆ ಎಂದರು.
ಈ ಸಾರಿ ವಿವಿಧ ವೇಳಾಪಟ್ಟಿ ಸಿದ್ಧಪಡಿಸಿದ್ದೇವೆ. ಇವಿಪಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಅಲ್ಲಿ ಮತದಾರರು ಆನ್ಲೈನ್ ಇಲ್ಲವೇ ನಮ್ಮ ಸಿ ಎಸ್ ಸಿ ಕೇಂದ್ರದ ಮೂಲಕ ಅರ್ಜಿ ಭರಿಸಬಹುದು 1950 ಕಾಲ್ ಸೆಂಟರ್ ಗಳಿಗೂ ಕರೆ ಮಾಡಬಹುದು. ನಮ್ಮ ವೆಬ್ಸೈಟ್ ಗಳಲ್ಲಿ ಕೂಡ ಎಲ್ಲಾ ಮಾಹಿತಿ ಇದೆ. ಸಮರ್ಪಕ ಹಾಗೂ ಪಾರದರ್ಶಕ ಚುನಾವಣೆ ಆಗಲಿ ಎಂಬ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದ್ದು, ಜನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸದ್ಯ ರಾಜ್ಯದಲ್ಲಿ 51060498 ಮಂದಿ ಮತದಾರರಿದ್ದು ಇದರಲ್ಲಿ 25801694 ಪುರುಷರು, 25254153 ಮಹಿಳೆಯರು, 465 ಇತರೆ ಮತದಾರರಿದ್ದಾರೆ.
ಉಪ ಚುನಾವಣೆಗೆ ಸಿದ್ಧ
17 ವಿಧಾನಸಭಾ ಕ್ಷೇತ್ರಗಳ ಬೈ ಎಲೆಕ್ಸನ್ ಗೆ ನಾವು ರೆಡಿ ಇದ್ದೇವೆ. ಇನ್ನೂ ಆರು ತಿಂಗಳು ಕಾಲಾವಕಾಶ ಇದೆ. ದೇಶವ್ಯಾಪಿ ಸಾಕಷ್ಟು ಎಲೆಕ್ಸನ್ಸ್ ನಡೆಯಬೇಕಿದೆ. ಈ ಬಗ್ಗೆ ಆಯೋಗದ ಮುಖ್ಯಸ್ಥರು ತೀರ್ಮಾನ ಮಾಡ್ತಾರೆ ಎಂದರು.Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.