ಬೆಂಗಳೂರು: ಸರ್ಕಾರ ಶಿಫಾರಸು ಮಾಡಿದ ಕೋವಿಡ್ ರೋಗಿಗಳಿಗೆ ಪ್ರವೇಶ ನಿರಾಕರಿಸಿದ ಆರೋಪ ಹಿನ್ನೆಲೆ ವಿಕ್ರಮ್ ಆಸ್ಪತ್ರೆ ಹಾಗೂ ಸಾಗರ್ ಅಪೋಲೊ ಆಸ್ಪತ್ರೆ ಒಪಿಡಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಬಂದ್ ಮಾಡಿಸಿದ್ದಾರೆ.
ಸೋಮವಾರ ಡಿಹೆಚ್ಓ ಶ್ರೀನಿವಾಸ್ ಗುಳೂರು ದಿಢೀರ್ ಭೇಟಿ ನೀಡಿ, ಐಎಲ್ಐ & ಎಸ್ಎಆರ್ಐ ಪ್ರಕರಣಗಳಿಗೆ ಚಿಕಿತ್ಸೆ ನೀಡದಿರುವ ಕುರಿತು ಕಾರಣ, ಉತ್ತರ ನೀಡುವಂತೆ ಎರಡೂ ಆಸ್ಪತ್ರೆಗಳಿಗೆ ನೋಟಿಸ್ ನೀಡಿದ್ದರು.
ನೋಟಿಸ್ಗೆ ಉತ್ತರ ನೀಡದ ಕಾರಣ 48 ಗಂಟೆಗಳ ಕಾಲ ಒಪಿಡಿ ಬಂದ್ ಮಾಡಿದ್ದು, ಸ್ಥಳದಲ್ಲಿ ಆರೋಗ್ಯ ಅಧಿಕಾರಿಗಳು ಹಾಗೂ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇದನ್ನು ಮೀರಿ ಆಸ್ಪತ್ರೆ ಕಾನೂನು ಉಲ್ಲಂಘಿಸಿದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಡಿಹೆಹ್ಒ ಶ್ರೀನಿವಾಸ್ ಮಾಹಿತಿ ಹೇಳಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ದಾಖಲಾತಿ ಪಡೆದು ಚಿಕಿತ್ಸೆ ನೀಡುವಂತೆ ಹಾಗೂ ಆಸ್ಪತ್ರೆಯಲ್ಲಿ ಶೇ.50% ಹಾಸಿಗೆಗಳನ್ನು ಕಾಯ್ದಿರಿಸುವಂತೆ, ಕಾಯ್ದಿರಿಸಲಾಗಿರುವ ಹಾಸಿಗೆಗಳ ಮಾಹಿತಿಯನ್ನು ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೆ, ಸರ್ಕಾರದಿಂದ ಸೂಚಿಸಲ್ಪಟ್ಟ ಸೋಂಕಿತ ರೋಗಿಗಳ ಹಾಗೂ ಚಿಕಿತ್ಸೆಯನ್ನು ನೀಡುತ್ತಿಲ್ಲ ಎಂಬುದು ಕಂಡು ಬಂದಿದೆ ಎಂದರು.