ನೆಲಮಂಗಲ(ಬೆಂಗಳೂರು ಗ್ರಾಮಾಂತರ): ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನ್ನೆಲ್ಲ ಅಗಲಿ ತಿಂಗಳುಗಳೇ ಕಳೆದರೂ ಅವರ ನೆನಪು ಮಾತ್ರ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಅವರ ಹೆಸರಿನಲ್ಲಿ ಸಾಮಾಜಿಕ ಕಾರ್ಯ, ಪೂಜೆ ಪುನಸ್ಕಾರ, ಪಾದಯಾತ್ರೆಗಳು ಇಂದಿಗೂ ಮುಂದುವರಿದಿದೆ.
ಪುನೀತ್ ರಾಜಕುಮಾರ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಜೇಮ್ಸ್ ಮಾರ್ಚ್ 17ಕ್ಕೆ ಕನ್ನಡ, ತೆಲುಗು, ತಮಿಳು, ಮಳಯಾಲ ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಲಿದೆ. ಅಪ್ಪು ಕೊನೆ ಸಿನಿಮಾ ಜೇಮ್ಸ್ ವಿಶ್ವದಾಖಲೆ ಮಾಡಲೆಂದು ಇಲ್ಲೊಂದು ತಂಡ ಕಾಲ್ನಡಿಗೆ ಮೂಲಕ ವಿಜಯಪುರದಿಂದ ಬೆಂಗಳೂರು ನಗರಕ್ಕೆ ಬರುತ್ತಿದೆ.
ಇದನ್ನೂ ಓದಿ: ಹಿಜಾಬ್ ವಿವಾದದ ತೀರ್ಪು.. ಎಂದಿನಂತೆ ನಡೆಯಲಿದೆ ಸಹಾಯಕ ಉಪನ್ಯಾಸಕರ ನೇಮಕ ಪರೀಕ್ಷೆ
ಫೆಬ್ರವರಿ 25 ರಂದು ಈ ಪಾದಯಾತ್ರೆ ಆರಂಭವಾಗಿದೆ. ವಿಜಯಪುರದ ಧರೆಪ್ಪ ಅರ್ದಾವೂರ್ ಮತ್ತು ವಿದ್ಯಾರಾಣಿ ದಂಪತಿ ಏಳು ಮಕ್ಕಳ ಜೊತೆ ಸುಮಾರು 525 ಕಿ.ಮೀ ಪಾದಯಾತ್ರೆ ಕೈಗೊಂಡಿದ್ದಾರೆ. ರಸ್ತೆ ಉದ್ದಕ್ಕೂ ಪುನೀತ್ ಅಭಿನಯದ ಗೀತೆಗಳ ಸಾರದೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ. ಇನ್ನೂ ಪುನೀತ್ ರಾಜ್ ಕುಮಾರ್ ಕನಸಿನಂತೆ ಕನ್ನಡ ಶಾಲೆಗಳ ಅಭಿವೃದ್ಧಿ, ಅಂಗಾಂಗಗಳ ದಾನ ಮತ್ತು ನೇತ್ರದಾನ ಕುರಿತು ಪಾದಯಾತ್ರೆ ಉದ್ದಕ್ಕೂ ಜಾಗೃತಿ ಮೂಡಿಸಿ ಅಪ್ಪು ಮೇಲಿನ ಅಭಿಮಾನ ವ್ಯಕ್ತಪಡಿಸಿದ್ದಾರೆ.