ಬೆಂಗಳೂರು : ಇಂದು ವಿಧಾನ ಪರಿಷತ್ ಸಭಾಪತಿ ಚುನಾವಣೆ ಹಿನ್ನೆಲೆ ಪಕ್ಷದ ವಿಧಾನ ಪರಿಷತ್ ಸದಸ್ಯರ ಜೊತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಭೆ ನಡೆಸಿದರು.
ನಿನ್ನೆ ಅಧಿಕೃತ ನಿವಾಸ ಕಾವೇರಿಯಲ್ಲಿ ಎಂಎಲ್ಸಿಗಳ ಸಭೆ ನಡೆಸಿದ ಸಿಎಂ, ಜೆಡಿಎಸ್ಗೆ ಈಗಾಗಲೇ ಬೆಂಬಲ ಘೋಷಣೆ ಮಾಡಿರುವಂತೆ ಮಂಗಳವಾರ ಜೆಡಿಎಸ್ ಪರ ಮತ ಚಲಾಯಿಸುವಂತೆ ಪರಿಷತ್ ಸದಸ್ಯರಿಗೆ ಸೂಚನೆ ನೀಡಿದರು.
ಉಪ ಸಭಾಪತಿ ಸ್ಥಾನ ಬಿಜೆಪಿಗೆ ಹಾಗೂ ಸಭಾಪತಿ ಸ್ಥಾನ ಜೆಡಿಎಸ್ಗೆ ಎನ್ನುವ ಮಾತುಕತೆಯಂತೆ ಬಸವರಾಜ ಹೊರಟ್ಟಿ ಅವರನ್ನು ಬೆಂಬಲಿಸುವಂತೆ ಸಿಎಂ ತಿಳಿಸಿದರು.
ಈಗಾಗಲೇ ಪರಿಷತ್ನಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆ ಇಂದು ನಡೆಯಲಿರುವ ಸಭಾಪತಿ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಬೆಂಬಲದಿಂದ ಜೆಡಿಎಸ್ ಅಭ್ಯರ್ಥಿ ಗೆಲುವು ಬಹುತೇಕ ಖಚಿತವಾಗಿದೆ.