ದೇವನಹಳ್ಳಿ : ರಾಜ್ಯ ಪ್ರವಾಸದಲ್ಲಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಇಂದು ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ಉಪ ರಾಷ್ಟ್ರಪತಿಗಳನ್ನು ಸ್ವಾಗತಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಪಿ.ಸಿ. ಮೋಹನ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಆಗಮಿಸಿದ್ದರು.

ವೆಂಕಯ್ಯ ನಾಯ್ಡು ಅವರಿಗೆ ಮುಖ್ಯಮಂತ್ರಿ ಹೂ ಗುಚ್ಛ ನೀಡಿ ಸ್ವಾಗತ ಕೋರಿದರು. ನಂತರ ಏರ್ಪೋರ್ಟ್ ನಿಂದ ಬೆಂಗಳೂರು ಕಡೆ ಉಪ ರಾಷ್ಟ್ರಪತಿಗಳು ಪ್ರಯಾಣ ಬೆಳೆಸಿದರು.
