ETV Bharat / city

ರಾಜಕೀಯ ತಿರುವು ಪಡೆದುಕೊಂಡ ಉಪಸಭಾಪತಿ ಎಸ್.ಎಲ್.ಧರ್ಮೇಗೌಡರ ಆತ್ಮಹತ್ಯೆ ಪ್ರಕರಣ..! - ಎಸ್​ಎಲ್​ ಧರ್ಮೇಗೌಡರ ಆತ್ಮಹತ್ಯೆ ಪ್ರಕರಣ

ವಿಧಾನಪರಿಷತ್‌ ಸಭಾಪತಿಯವರ ವಿರುದ್ಧದ ಅವಿಶ್ವಾಸ ನಿರ್ಣಯ ಪ್ರಕರಣ ವಿಕೋಪಕ್ಕೆ ಹೋಗಿ ಪರಿಷತ್ತಿನಲ್ಲಿ ಧರ್ಮೇಗೌಡರಿಗೆ ಅವಮಾನವಾಯಿತು. ಇದನ್ನು ಸಹಿಸಲಾಗದೇ ಅವರು ಆತ್ಮಹತ್ಯೆ ಮಾಡಿಕೊಂಡರು ಎಂಬ ಮಾತು ರಾಜಕೀಯ ವಲಯಗಳಲ್ಲಿ ತೀವ್ರತೆ ಪಡೆಯುತ್ತಿದೆ. ಸದ್ಯ ಧರ್ಮೇಗೌಡರ ಸಾವಿನ ಸುತ್ತ ಅಸಂಖ್ಯಾತ ರಾಜಕೀಯ ಅನುಮಾನಗಳು, ಮಾತುಗಳು ಕೇಳಿ ಬರುತ್ತಿವೆ.

vice-president-sl-dharmega-gowda-suicide-case-turn-into-political
ಉಪಸಭಾಪತಿ ಎಸ್​​ಎಲ್ ಧರ್ಮೇಗೌಡ
author img

By

Published : Dec 29, 2020, 8:21 PM IST

ಬೆಂಗಳೂರು : ವಿಧಾನಪರಿಷತ್ತಿನ ಉಪಸಭಾಪತಿ ಎಸ್.ಎಲ್.ಧರ್ಮೇಗೌಡರ ಆತ್ಮಹತ್ಯೆ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದಿದ್ದು, ಅದೇ ಕಾಲಕ್ಕೆ ಇನ್ನೂ ಹಲವು ಶಂಕೆಗಳಿಗೆ ಕಾರಣವಾಗಿದೆ.

ಪರಿಷತ್​​ ಅವಮಾನ

ವಿಧಾನಪರಿಷತ್‌ ಸಭಾಪತಿಯವರ ವಿರುದ್ಧದ ಅವಿಶ್ವಾಸ ನಿರ್ಣಯ ಪ್ರಕರಣ ವಿಕೋಪಕ್ಕೆ ಹೋಗಿ ಪರಿಷತ್ತಿನಲ್ಲಿ ಧರ್ಮೇಗೌಡರಿಗೆ ಅವಮಾನವಾಯಿತು. ಇದನ್ನು ಸಹಿಸಲಾಗದೇ ಅವರು ಆತ್ಮಹತ್ಯೆ ಮಾಡಿಕೊಂಡರು ಎಂಬ ಮಾತು ರಾಜಕೀಯ ವಲಯಗಳಲ್ಲಿ ತೀವ್ರತೆ ಪಡೆಯುತ್ತಿದೆ. ಸಭಾಪತಿ ಕುರ್ಚಿಯ ಮೇಲೆ ಕುಳಿತಿದ್ದ ಧರ್ಮೇಗೌಡರನ್ನು ಏಕಾಏಕಿ ಎಳೆದು ಕೆಡಹುವ ಯತ್ನ ನಡೆದಾಗ ಅದನ್ನು ತಡೆಯುವ ಯತ್ನ ನಡೆದರೂ ಆ ಸಂದರ್ಭದಲ್ಲಾದ ತಳ್ಳಾಟ, ನೂಕಾಟಗಳು ಧರ್ಮೇಗೌಡರ ಮನಸ್ಸನ್ನು ಕಲಕಿದ್ದವು ಎಂಬುದು ಅವರ ಸಮೀಪವರ್ತಿಗಳ ಮಾತು.

ಧರ್ಮೇಗೌಡರ ಆತ್ಮಹತ್ಯೆಗೂ, ವಿಧಾನಪರಿಷತ್ತಿನ ಘಟನಾವಳಿಗೂ ನೇರ ಸಂಬಂಧ

ಈ ಮಧ್ಯೆ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಾವು ಬರೆದಿಟ್ಟ ಡೆತ್‌ ನೋಟ್‌ನಲ್ಲಿ ವಿಧಾನಪರಿಷತ್ತಿನಲ್ಲಾದ ಘಟನೆಯಿಂದ ನೊಂದಿದ್ದಾಗಿ ದಾಖಲಿಸಿರುವುದು ಘಟನೆಗೆ ರಾಜಕೀಯ ತಿರುವು ಸಿಗುವಂತೆ ಮಾಡಿದೆ. ಈ ಘಟನೆ ನಡೆಯದೇ ಇದ್ದಿದ್ದರೆ ಧರ್ಮೇಗೌಡರು ಆತ್ಮಹತ್ಯೆ ಮಾಡಿಕೊಳ್ಳುವಷ್ಟರ ಮಟ್ಟಿಗೆ ನೋವು ಮಾಡಿಕೊಳ್ಳುತ್ತಿರಲಿಲ್ಲ. ಹೀಗಾಗಿ ಧರ್ಮೇಗೌಡರ ಆತ್ಮಹತ್ಯೆಗೂ, ವಿಧಾನಪರಿಷತ್ತಿನ ಘಟನಾವಳಿಗೂ ನೇರ ಸಂಬಂಧವಿದೆ. ಹೀಗಾಗಿ ಇಡೀ ಘಟನಾವಳಿಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಮತ್ತು ಯಾವ್ಯಾವ ಕಾರಣಗಳಿಂದ ಆ ಘಟನೆ ನಡೆಯಿತು? ಯಾರ್ಯಾರು ಅದಕ್ಕೆ ಕುಮ್ಮಕ್ಕು ನೀಡುವಂತೆ ವರ್ತಿಸಿದರು?ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಬೇಕು.

ಕೂಲಂಕಷ ಮರುಪರಿಶೀಲನೆ

ಯಾಕೆಂದರೆ ಇಡೀ ದೇಶಕ್ಕೆ ಮಾದರಿಯಾದ ರಾಜ್ಯ ವಿಧಾನಪರಿಷತ್ತಿನಲ್ಲಿ ಇಂತಹ ಘಟನೆ ಹಿಂದೆಂದೂ ನಡೆದಿರಲಿಲ್ಲ. ಅದೇ ರೀತಿ ಪರಿಷತ್ತಿನ ಸಭಾಪತಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಘಟನೆಗಳೂ ನಡೆದಿರಲಿಲ್ಲ. ಹೀಗಾಗಿ ಇಡೀ ಘಟನೆಯನ್ನು ಕೂಲಂಕಷವಾಗಿ ಮರುಪರಿಶೀಲನೆ ಮಾಡಬೇಕು ಎಂಬುದು ರಾಜಕೀಯ ಮತ್ತು ಸಾರ್ವಜನಿಕ ವಲಯಗಳ ಮಾತುಗಳು. ಈ ಮಧ್ಯೆ ಧರ್ಮೇಗೌಡರು ಆತ್ಮಹತ್ಯೆ ಮಾಡಿಕೊಳ್ಳುವ ಕೆಲ ದಿನಗಳ ಹಿಂದಿನಿಂದಲೂ ಅವರು ಖಿನ್ನತೆಯಲ್ಲಿದ್ದರು ಎಂಬ ಬಗ್ಗೆ ಅವರ ಸಹೋದರ ಸೇರಿದಂತೆ ಆಪ್ತರು ಹೇಳುತ್ತಿರುವುದು ಇಂತಹ ಮಾತಿಗೆ ಮತ್ತಷ್ಟು ಪುಷ್ಟಿ ನೀಡಿದೆ.

ದುರ್ಬಲ ಮನಸ್ಥಿತಿ ಧರ್ಮೇಗೌಡರಿಗಿರಲಿಲ್ಲ

ಇನ್ನು ಧರ್ಮೇಗೌಡರು ಅನಾರೋಗ್ಯದಿಂದ ಬಳಲುತ್ತಿದ್ದರು, ಕೌಟುಂಬಿಕ ಕಾರಣಗಳಿಂದ ನೊಂದಿದ್ದರು ಎಂಬುದೂ ಸೇರಿದಂತೆ ಹಲವು ಬಗೆಯ ಮಾತುಗಳು ಕೇಳಿ ಬರುತ್ತಿವೆಯಾದರೂ ಇದರಿಂದ ಅವರು ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ಆಪ್ತರು ಒಪ್ಪುತ್ತಿಲ್ಲ. ಇಂತಹ ಕಾರಣಗಳಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಥಿತಿ ಧರ್ಮೇಗೌಡರಲ್ಲಿ ಇಲ್ಲ ಎಂಬುದು ಹಲವು ರಾಜಕೀಯ ನಾಯಕರು ಮಾತು.

ಪರಿಷತ್​ ಗಲಾಟೆ ನೋವು

ವಿಧಾನಪರಿಷತ್ತಿನಲ್ಲಾದ ಘಟನೆಯಿಂದ ಅವರು ನೊಂದಿದ್ದರು ಎಂಬುದು ಎಲ್ಲರಿಗೂ ಗೊತ್ತು. ಮತ್ತು ಈ ಬಗ್ಗೆ ಆಪ್ತರು ಜೆಡಿಎಸ್‌ ನಾಯಕರಾದ ಹೆಚ್‌.ಡಿ.ಕುಮಾರಸ್ವಾಮಿ ಅವರಿಗೆ ಮಾತ್ರವಲ್ಲ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿಯೂ ಹೇಳಿಕೊಂಡಿದ್ದರು. ಘಟನೆಯಿಂದ ಖಿನ್ನರಾಗಿರುವ ಅವರನ್ನು ಸಮಾಧಾನಿಸುವಂತೆ ಆಪ್ತರು ಕೋರಿಕೊಂಡಿದ್ದು ಸ್ಪಷ್ಟವಾಗಿರುವಾಗ ಅವರ ಆತ್ಮಹತ್ಯೆಗೆ ಬೇರೆ ಕಾರಣಗಳನ್ನು ಗುರುತಿಸುವುದರಲ್ಲಿ ಅರ್ಥವಿಲ್ಲ ಎಂಬುದು ಅವರ ಮಾತು.

ಹೀಗೆ ಧರ್ಮಗೌಡರ ಆತ್ಮಹತ್ಯೆ ಪ್ರಕರಣ ಹಲವಾರು ಅನುಮಾನಗಳನ್ನು ಮೂಡಿಸಿದರೂ ಅಂತಿಮವಾಗಿ ವಿಧಾನಪರಿಷತ್ತಿನಲ್ಲಾದ ಘಟನೆಯ ಮೇಲೆ ಎಲ್ಲರ ಗಮನ ನೆಟ್ಟಿದ್ದು, ಮುಂದೇನಾಗುತ್ತದೋ ಕಾದು ನೋಡಬೇಕು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.