ಬೆಂಗಳೂರು: ಕಳೆದ ಒಂದು ವಾರದಿಂದ ತರಕಾರಿ ಬೆಲೆ ಗಗನಕ್ಕೇರಿದ್ದು, ಕಡಿಮೆ ಇಳುವರಿಯಿಂದ ರೈತರು ನಷ್ಟ ಅನುಭವಿಸಿದರೆ, ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದರು. ಆದರೆ, ಇಂದು ಟೊಮೇಟೊ, ಹಸಿ ಮೆಣಸಿನಕಾಯಿ ಸೇರಿದಂತೆ ಕೆಲ ತರಕಾರಿಗಳ ಸಗಟು ಮತ್ತು ಚಿಲ್ಲರೆ ಬೆಲೆ ಕೊಂಚ ಇಳಿಕೆ ಕಂಡಿದೆ.
ನಿನ್ನೆ ಪ್ರತಿ ಕೆ.ಜಿ ಟೊಮೇಟೊ ಬೆಲೆ 98ರೂ ರೂ. ಇತ್ತು. ಆದರೆ ಇಂದು 90ರೂ ರೂ. ಗೆ ಲಭ್ಯವಾಗುತ್ತಿದ್ದು, 8 ರೂ. ಬೆಲೆ ಕಡಿಮೆಯಾಗಿದೆ. ಹಾಗೆಯೇ ಹಸಿ ಮೆಣಸಿನಕಾಯಿ ಬೆಲೆ ನಿನ್ನೆ 60 ರೂ ರೂ. ಇತ್ತು. ಆದರೆ, ಇಂದು 58 ರೂ. ಇದ್ದು, 2 ರೂ. ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ ಮೂಲಂಗಿ ಮತ್ತು ಬದನಕಾಯಿ ಬೆಲೆ ಮಾತ್ರ ಇನ್ನೂ ಏರಿಕೆ ಕಂಡಿದೆ. 70 ರೂ. ಇದ್ದ ಮೂಲಂಗಿ ಬೆಲೆ ಇಂದು 75 ಕ್ಕೆ ಹಾಗೂ 108 ರೂ. ಇದ್ದ ಬದನಕಾಯಿ ದರ 110 ರೂ.ಗೆ ಏರಿಕೆಯಾಗಿದೆ.
ರಾಜಧಾನಿಯಲ್ಲಿ ಇಂದಿನ ತರಕಾರಿ ದರ ಹೀಗಿದೆ
ತರಕಾರಿ | ನಿನ್ನೆಯ ದರ | ಇಂದಿನ ದರ |
ಬೆಳ್ಳುಳ್ಳಿ | 128 ರೂ. | 128 (ಬದಲಾವಣೆ ಇಲ್ಲ) |
ಟೊಮೇಟೊ | 98 ರೂ. | 90 ರೂ. (ಇಳಿಕೆ) |
ದಪ್ಪ ಮೆಣಸಿನಕಾಯಿ | 124 ರೂ. | 124 ರೂ. (ಬದಲಾವಣೆ ಇಲ್ಲ) |
ಹಸಿ ಮೆಣಸಿನಕಾಯಿ | 60 ರೂ. | 58 ರೂ.(ಇಳಿಕೆ) |
ಕ್ಯಾರೆಟ್ | 94 ರೂ. | 94 ರೂ. (ಬದಲಾವಣೆ ಇಲ್ಲ) |
ಹುರಳೀಕಾಯಿ(ಬೀನ್ಸ್) | 94 ರೂ. | 94 ರೂ.(ಬದಲಾವಣೆ ಇಲ್ಲ) |
ಶುಂಠಿ | 84 ರೂ. | 84 ರೂ.(ಬದಲಾವಣೆ ಇಲ್ಲ) |
ಈರುಳ್ಳಿ(ಮಧ್ಯಮ) | 53 ರೂ. | 53 ಬದಲಾವಣೆ ಇಲ್ಲ |
ಸಾಂಬರ್ ಈರುಳ್ಳಿ | 56 ರೂ. | 56 ರೂ. ಬದಲಾವಣೆ ಇಲ್ಲ |
ಆಲೂಗಡ್ಡೆ | 44 ರೂ. | 44 ರೂ ಬದಲಾವಣೆ ಇಲ್ಲ |
ಮೂಲಂಗಿ | 70 ರೂ. | 75 ರೂ.( ಏರಿಕೆ) |
ಬದನಕಾಯಿ | 108 ರೂ. | 108 ರೂ.(ಏರಿಕೆ) |
ಸೌತೆಕಾಯಿ | 24 ರೂ. | 24 ರೂ.(ಬದಲಾವಣೆ ಇಲ್ಲ) |
ಸೊಪ್ಪು
ಕೊತ್ತಂಬರಿ ಸೊಪ್ಪು | 108 ರೂ.(ಬದಲಾವಣೆ ಇಲ್ಲ) |
ಕೊತ್ತಂಬರಿ ನಾಟಿ | 135 ರೂ.-125 ರೂ.(ಇಳಿಕೆ) |
ಮೆಂತ್ಯ ಸೊಪ್ಪು | 128 ರೂ.(ಬದಲಾವಣೆ ಇಲ್ಲ) |
ಪಾಲಕ್ ಸೊಪ್ಪು | 107 ರೂ.(ಬದಲಾವಣೆ ಇಲ್ಲ) |
ಸಬ್ಬಕ್ಕಿ ಸೊಪ್ಪು | 70 ರೂ.( ಬದಲಾವಣೆ ಇಲ್ಲ) |
ಕರಿಬೇವು | 67 ರೂ.(ಬದಲಾವಣೆ ಇಲ್ಲ) |
ದಂಟಿನ ಸೊಪ್ಪು | 127 ರೂ.(ಬದಲಾವಣೆ ಇಲ್ಲ) |
ತೆಂಗಿನ ಕಾಯಿ
32 ರೂ.(ದಪ್ಪ) |
28 ರೂ.(ಮಧ್ಯಮ) |
22 ರೂ.( ಸಣ್ಣ) |
16 ರೂ.(ಅತಿ ಸಣ್ಣ) |
ಇದನ್ನೂ ಓದಿ: ಕೊರೊನಾ ರೂಪಾಂತರಿ 'ಒಮಿಕ್ರೋನ್' ಆತಂಕ: ದಕ್ಷಿಣ ಆಫ್ರಿಕಾ ಸೇರಿ ಈ ದೇಶಗಳಿಗೆ ಪ್ರವೇಶ ನಿಷೇಧ