ETV Bharat / city

ವೀಕೆಂಡ್ ಕರ್ಫ್ಯೂ ವಾಪಸ್ ಪಡೆಯಲು ಹೆಚ್ಚಿದ ಒತ್ತಡ.. ವಿವಿಧ ಸಂಘ-ಸಂಸ್ಥೆಗಳಿಂದ ಸಭೆ..

author img

By

Published : Jan 19, 2022, 1:41 PM IST

ವೀಕೆಂಡ್ ಕರ್ಫ್ಯೂ ವಿರೋಧಿಸಿ ವಿವಿಧ ಉದ್ಯಮಗಳ ಸಂಘಟನೆಗಳು ನಾಳೆ ಮಹತ್ವದ ಸಭೆ ನಡೆಸಲು ಮುಂದಾಗಿವೆ..

Various Association Organizations urging to cancel Weekend Curfew
ವೀಕೆಂಡ್ ಕರ್ಫ್ಯೂ ವಾಪಾಸ್ ಪಡೆಯಲು ಹೆಚ್ಚಿದ ಒತ್ತಾಯ

ಬೆಂಗಳೂರು : ವೀಕೆಂಡ್ ಕರ್ಫ್ಯೂ ವಿರೋಧಿಸಿ ವಿವಿಧ ಉದ್ಯಮಗಳ ಸಂಘಟನೆಗಳು ನಾಳೆ ಮಹತ್ವದ ಸಭೆ ನಡೆಸಲು ಮುಂದಾಗಿವೆ. ಬೆಂಗಳೂರು ಹೋಟೆಲ್ ಮಾಲೀಕರ ಸಂಘ, ಬೇಕರಿ ಮತ್ತು ಕಾಂಡಿಮೆಂಟ್ಸ್ ಅಸೋಸಿಯೇಷನ್, ಬಾರ್, ಪಬ್ & ರೆಸ್ಟೋರೆಂಟ್ ಸಂಘ, ಕರ್ನಾಟಕ ಮ್ಯಾರೇಜ್ ಹಾಲ್ ವೆಲ್ ಫೇರ್ ಅಸೋಸಿಯೇಷನ್, ಜಿಮ್, ಸ್ವಿಮ್ಮಿಂಗ್ ಪೂಲ್ ಮಾಲೀಕರು ಕರ್ಫ್ಯೂಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಶುಕ್ರವಾರದವರೆಗೆ ಕಾದು ನೋಡುವ ತಂತ್ರ : ರಾಜಧಾನಿಯ ಅರಮನೆ ಮೈದಾನ ವೈಟ್ ಪೆಟಲ್ಸ್​ನಲ್ಲಿ ಹಲವು ಸಂಘಟನೆಗಳು ಇಂದು ಸಭೆ ನಡೆಸಲಿವೆ. ನಿನ್ನೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸದ್ಯ ಶುಕ್ರವಾರದವರೆಗೆ ಕಾದು ನೋಡೋಣ ಎಂದು ಸರ್ಕಾರ ಸುಮ್ಮನಾಗಿದೆ. ಹೀಗಾಗಿ, ಹಲವು ಉದ್ಯಮಗಳ ಸಂಘಗಳು ಶುಕ್ರವಾರದವರೆಗೆ ಕಾದು ನೋಡುವ ತಂತ್ರ ಅನುಸರಿಸಿವೆ.

ಹೋಟೆಲ್​ಗಳ ಮಾಲೀಕರ ಸಂಘದ ಒತ್ತಡ : ವಾರಾಂತ್ಯದ ಕರ್ಫ್ಯೂ ವಾಪಸ್ ಪಡೆದು ನಷ್ಟದಿಂದ ಪಾರು ಮಾಡಬೇಕು ಎಂದು ಸರ್ಕಾರದ ಮೇಲೆ ರಾಜ್ಯ ಹೋಟೆಲ್​ಗಳ ಮಾಲೀಕರ ಸಂಘ ಒತ್ತಡ ಹೇರುವ ಪ್ರಯತ್ನವನ್ನು ಮುಂದುವರಿಸಿದೆ. ಕೋವಿಡ್ ನಿಯಂತ್ರಣಕ್ಕಾಗಿ ರಾತ್ರಿ ಕರ್ಫ್ಯೂ ಅವಧಿಯನ್ನು ರಾತ್ರಿ 11ರಿಂದ ಪ್ರಾರಂಭಿಸಬೇಕು. ವಾರಾಂತ್ಯ ಕರ್ಫ್ಯೂ ಹಿಂತೆಗೆದುಕೊಳ್ಳಬೇಕು. ಸಾಧ್ಯವಾಗದಿದ್ದರೆ ವಾರಾಂತ್ಯದಲ್ಲಿ ಹೋಟೆಲ್​ಗಳ ಒಟ್ಟು ಸಾಮರ್ಥ್ಯದ ಶೇ. 50ರಷ್ಟು ಸೀಟುಗಳ ಭರ್ತಿಗೆ ಅವಕಾಶ ನೀಡಬೇಕೆಂದು ಮೊರೆಯಿಟ್ಟಿದೆ. ರಾಜ್ಯ ಹೋಟೆಲ್​ಗಳ ಮಾಲೀಕರ ಸಂಘದ ನಿಯೋಗ ನಿನ್ನೆ ಸಚಿವ ಅಶ್ವತ್ಥ್‌ ನಾರಾಯಣ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದೆ.

ನಷ್ಟದ ಹೊಡೆತ : ರಾಜ್ಯದಲ್ಲಿ 65,000ಕ್ಕೂ ಹೆಚ್ಚು ಸಣ್ಣ, ಮಧ್ಯಮ ಹಾಗೂ ಐಷಾರಾಮಿ ಹೋಟೆಲ್‌ಗಳಿವೆ. ಈ ಉದ್ಯಮದಲ್ಲಿ ಅವಿದ್ಯಾವಂತ, ಬಡವರು, ಮಹಿಳೆಯರು ಸೇರಿ ಅಧಿಕ ಜನರಿಗೆ ಉದ್ಯೋಗ ಒದಗಿಸಲಾಗಿದೆ. ಕೋವಿಡ್​ನಿಂದ ಹೋಟೆಲ್ ಉದ್ಯಮ ತತ್ತರಿಸಿದ್ದು, ನಷ್ಟ ತಾಳಲಾಗದೇ ಶೇ.30ರಷ್ಟು ಉದ್ಯಮಿಗಳು ಹೋಟೆಲ್‌ಗಳನ್ನು ಮುಚ್ಚಿದ್ದಾರೆ. ವಾರಾಂತ್ಯದ ಕರ್ಫ್ಯೂ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಾಸಿಕ 20 ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಹೇಳಿದ್ದಾರೆ.

ಮನವಿ :

1) ಹೋಟೆಲ್ ಅಸೋಸಿಯೇಷನ್ ಮನವಿ

  • ಹೋಟೆಲ್​ಗಳಲ್ಲಿ ಪಾರ್ಸೆಲ್ ವ್ಯವಸ್ಥೆಯಿಂದ ಲಾಸ್
  • ಊಟದ ಮೊತ್ತಕ್ಕಿಂತ ಪಾರ್ಸೆಲ್ ಸಾಮಾಗ್ರಿಗಳ ಬೆಲೆಯೇ ದುಬಾರಿ
  • ವಾರದ 7 ದಿನವೂ ಮಹಾರಾಷ್ಟ್ರದಂತೆ ರೂಲ್ಸ್ ಮಾಡಿ
  • ಮಹಾರಾಷ್ಟ್ರದಲ್ಲಿ ಯಾವುದೇ ವೀಕೆಂಡ್ ಕರ್ಫ್ಯೂ ಇಲ್ಲ
  • ವಾರದ 7 ದಿನವೂ ಸಹ 50 : 50 ರೂಲ್ಸ್ ಮಹಾರಾಷ್ಟ್ರದಲ್ಲಿದೆ
  • ಇದೇ ನಿಯಮವನ್ನು ಕರ್ನಾಟಕದಲ್ಲೂ ಜಾರಿಗೆ ತನ್ನಿ ಎಂದು ಹೋಟೆಲ್ ಅಸೋಸಿಯೇಷನ್ ಮನವಿ ಇಟ್ಟಿದೆ.

2) ಬಾರ್ & ರೆಸ್ಟೊರೆಂಟ್ ಮಾಲೀಕರ ಮನವಿ

  • ವೀಕೆಂಡ್ ಕರ್ಫ್ಯೂ ತೆರವು ಮಾಡಿ, ಪಾರ್ಸೆಲ್​ಗೆ ಅನುಮತಿ ನೀಡಿ
  • ಇಲ್ಲವಾದರೆ, ಒಂದು ಸಮಯ ನಿಗದಿ ಮಾಡಿ
  • ನಿಗದಿತ ಸಮಯದವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿ
  • ವಾರದ 7 ದಿನವೂ ಕೇವಲ ನೈಟ್ ಕರ್ಫ್ಯೂ ಇರಲಿ
  • ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ ವೀಕೆಂಡ್ ಕರ್ಫ್ಯೂ ತೆರವುಗೊಳಿಸಿ

3) ಕರ್ನಾಟಕ ಮ್ಯಾರೇಜ್ ಹಾಲ್ ವೆಲ್ ಫೇರ್ ಅಸೋಸಿಯೇಷನ್ ಕೋರಿಕೆ

  • ಮದುವೆ, ಸಮಾರಂಭಗಳಿಗೆ ಹೇರಿರುವ 100 ಜನರ ಮಿತಿ ವಾಪಸ್ ಪಡೆಯಿರಿ
  • ಶೇ.50ರಷ್ಟು ಜನರ ಮಿತಿಗೆ ಅನುಮತಿ ನೀಡಿ
  • ಕಲ್ಯಾಣ ಮಂಟಪಗಳ ಗಾತ್ರಕ್ಕೆ ಅನುಗುಣವಾಗಿ ಅವಕಾಶ ಕೊಡಿ

4) ಮೊಬೈಲ್ ರೀಟೈಲರ್ಸ್ ಅಸೋಸಿಯೇಷನ್ ಮನವಿ

  • ವೀಕೆಂಡ್ ಕರ್ಫ್ಯೂ ಕಂಪ್ಲೀಟ್ ಕ್ಯಾನ್ಸಲ್ ಮಾಡಿ
  • ಆನ್‌ಲೈನ್‌ನಂತೆಯೇ ನಮಗೂ ವ್ಯಾಪಾರಕ್ಕೆ ಅವಕಾಶ ಕೊಡಿ
  • ಮೊಬೈಲ್, ಲ್ಯಾಪ್‌ಟಾಪ್ ರಿಪೇರಿಗಳು ವಾರಾಂತ್ಯಕ್ಕೆ ಹೆಚ್ಚಿನ ವ್ಯಾಪಾರ
  • ವರ್ಕ್ ಫ್ರಂನಿಂದ ಸರ್ವೀಸ್​ ಸೆಂಟರ್​ಗಳಿಗೆ ಡಿಮ್ಯಾಂಡ್ ಹೆಚ್ಚು

5)ಸ್ವಿಮ್ಮಿಂಗ್ ಪೂಲ್ & ಜಿಮ್ ಮಾಲೀಕರ ಅಹವಾಲು :

  • ವಾರದ 7 ದಿನವೂ ಶೇ.50ರಷ್ಟು ಜನರಿಗೆ ಅವಕಾಶ ಕೊಡಿ
  • ಬ್ಯಾಚ್​ಗಳ ರೀತಿ ಸ್ವಿಮ್ಮಿಂಗ್ ಹಾಗೂ ಜಿಮ್​ಗಳಲ್ಲಿ ವ್ಯವಸ್ಥೆ ಮಾಡಿಕೊಂಡಿದ್ದೇವೆ.

ಇದನ್ನೂ ಓದಿ: ಚುಚ್ಚುಮದ್ದು ಪಡೆದು ಮೂರು ಮಕ್ಕಳ ಸಾವು ಪ್ರಕರಣ: ಸಿಎಂಗೆ ವರದಿ ಸಲ್ಲಿಸಿದ ಡಿಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.