ETV Bharat / city

ವ್ಯಕ್ತಿ ಕೊಲೆಗೈದು ಪ್ಲಾಸ್ಟಿಕ್ ಚೀಲದಲ್ಲಿ ಮೃತದೇಹ ಕಟ್ಟಿ ಕೆರೆಯಲ್ಲಿ ಬಿಸಾಡಿದ ಆರೋಪಿಗಳು ಅರೆಸ್ಟ್!

author img

By

Published : Jan 26, 2022, 2:31 PM IST

Updated : Jan 26, 2022, 3:57 PM IST

ಹಲವು ವರ್ಷಗಳಿಂದ ಎಸ್ಎಸ್ಆರ್ ಗೋಲ್ಡ್ ಕಂಪನಿಯಲ್ಲಿ ದಿವಾಕರ್ ಕೆಲಸ ಮಾಡುತ್ತಿದ್ದ. ಜನರಿಂದ ಚಿನ್ನ ಪಡೆದು ಹಣ ನೀಡುವ ವ್ಯವಹಾರ ಮಾಡುತ್ತಿದ್ದ. ಮತ್ತೊಂದೆಡೆ ಆರೋಪಿಗಳು ಐಷಾರಾಮಿ ಜೀವನಕ್ಕಾಗಿ ಅಕ್ರಮ ಹಣ ಸಂಪಾದನೆಗೆ ಇಳಿದಿದ್ದರು.‌.

two accused arrested under Bangalore murder case
ಬೆಂಗಳೂರು ಕೊಲೆ ಪ್ರಕರಣದ ಆರೋಪಿಗಳು ಅರೆಸ್ಟ್

ಬೆಂಗಳೂರು : ವ್ಯಕ್ತಿಯೋರ್ವನ ಕತ್ತು ಹಿಸುಕಿ ಕೊಲೆ ಮಾಡಿ, ಯಾರಿಗೂ ಅನುಮಾನ ಬಾರದಿರಲೆಂದು ಪ್ಲಾಸ್ಟಿಕ್ ಚೀಲದಲ್ಲಿ ಮೃತದೇಹ ಕಟ್ಟಿ ಕೆರೆಯಲ್ಲಿ ಬಿಸಾಕಿ ಎಸ್ಕೇಪ್ ಆಗಿದ್ದ ಇಬ್ಬರು ಆರೋಪಿಗಳನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ದಿವಾಕರ್ ಎಂಬಾತ ಕೊಲೆಯಾದ ದುದೈರ್ವಿ. ಬನಶಂಕರಿಯ ಸರೆಬಂಡೆಪಾಳ್ಯ ನಿವಾಸಿ ಲಕ್ಷ್ಮಿ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪುಟ್ಟೇನಹಳ್ಳಿ ಪೊಲೀಸರು, ತುಮಕೂರು ಮೂಲದ ಮಂಜುನಾಥ್ ಹಾಗೂ‌ ಮುನಿರಾಜ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬೆಂಗಳೂರು ಕೊಲೆ ಪ್ರಕರಣದ ಬಗ್ಗೆ ಡಿಸಿಪಿ ಹರೀಶ್ ಪಾಂಡೆ ಮಾಹಿತಿ ನೀಡಿರುವುದು

ಹಲವು ವರ್ಷಗಳಿಂದ ಎಸ್ಎಸ್ಆರ್ ಗೋಲ್ಡ್ ಕಂಪನಿಯಲ್ಲಿ ದಿವಾಕರ್ ಕೆಲಸ ಮಾಡುತ್ತಿದ್ದ. ಜನರಿಂದ ಚಿನ್ನ ಪಡೆದು ಹಣ ನೀಡುವ ವ್ಯವಹಾರ ಮಾಡುತ್ತಿದ್ದ. ಮತ್ತೊಂದೆಡೆ ಆರೋಪಿಗಳು ಐಷಾರಾಮಿ ಜೀವನಕ್ಕಾಗಿ ಅಕ್ರಮ ಹಣ ಸಂಪಾದನೆಗೆ ಇಳಿದಿದ್ದರು.‌

ಇದಕ್ಕಾಗಿ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡ ಆರೋಪಿಗಳು, ಗೂಗಲ್​ನಲ್ಲಿ ಸರ್ಚ್ ಮಾಡಿ‌ದಾಗ ಎಸ್​ಎಸ್​ಆರ್ ಗೋಲ್ಡ್ ಕಂಪನಿ ಹೆಸರನ್ನು ತೋರಿಸಿದೆ‌. ಕಸ್ಟಮರ್ ಕೇರ್​ ನಂಬರ್​​ಗೆ ಕರೆ ಮಾಡಿ ದಿವಾಕರ್ ನಂಬರ್ ಪಡೆದಿದ್ದಾರೆ‌.

ಜನವರಿ 19ರಂದು ಕರೆ‌ ಮಾಡಿ ನಮಗೆ ಹಣದ ಅಗತ್ಯವಿದೆ. ಹೀಗಾಗಿ, 65ರಿಂದ 70 ಗ್ರಾಂ ಚಿನ್ನಾಭರಣ ಮಾರಾಟ ಮಾಡುತ್ತೇವೆ. ಹಣ ಸಮೇತ ಸುಂಕದಕಟ್ಟೆಗೆ ಬನ್ನಿ ಎಂದಿದ್ದಾರೆ. ಇದರಂತೆ ₹5 ಲಕ್ಷ ಹಣ ಇಟ್ಟುಕೊಂಡು ಜನವರಿ 20ರಂದು ಬೈಕಿನಲ್ಲಿ ಸುಂಕದಕಟ್ಟೆಯ ಆರೋಪಿಗಳ ಮನೆಯೊಂದಕ್ಕೆ ದಿವಾಕರ್ ಹೋಗಿದ್ದಾರೆ.

ಇದನ್ನೂ ಓದಿ: ಹುಚ್ಚು ಹಿಡಿದವರು ಮಾತ್ರ ಬಿಜೆಪಿಯಿಂದ ಕಾಂಗ್ರೆಸ್​​ಗೆ ವಲಸೆ ಹೋಗ್ತಾರೆ: ಸಚಿವ ಆರಗ ಜ್ಞಾನೇಂದ್ರ

ಮಾತುಕತೆ ನೆಪದಲ್ಲಿ ಇಬ್ಬರು ಆರೋಪಿಗಳು ದಿವಾಕರ್‌ನನ್ನು ಕತ್ತು ಹಿಸುಕಿ‌ ಸಾಯಿಸಿದ್ದಾರೆ. ಬಳಿಕ ಪ್ಲಾಸ್ಟಿಕ್ ಚೀಲದಲ್ಲಿ ಶವವನ್ನು ಕಟ್ಟಿದ್ದಾರೆ.‌ ಬಳಿಕ ಮಾಗಡಿ ರೋಡ್​ನ ಹೊನ್ನಾಪುರ ಕೆರೆಗೆ ಎಸೆದಿದ್ದಾರೆ‌‌. ಆತನ ಬೈಕ್ ಅನ್ನು ಸಹ ಕೆರೆಯಲ್ಲಿ ಮುಳುಗಿಸಿ ಸಾಕ್ಷ್ಯ ನಾಶಪಡಿಸಿದ್ದಾರೆ.

ಮತ್ತೊಂದೆಡೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದಿವಾಕರ್ ನಾಪತ್ತೆಯಾಗಿರುವುದಾಗಿ ದೂರು ನೀಡಿದ ಮೇರೆಗೆ‌ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ವಿಚ್ ಆಫ್ ಮಾಡಿಕೊಂಡಿದ್ದ ದಿವಾಕರ್​ನ ಮೊಬೈಲ್ ನಂಬರ್​ನ ಒಳ ಹಾಗೂ ಹೊರ ಬರುವ ಕರೆಯ ಲಿಸ್ಟ್​ ಅನ್ನು ಪರಿಶೀಲಿಸಿದಾಗ ಕೊನೆಯದಾಗಿ ಆರೋಪಿಗಳು ಕರೆ ಮಾಡಿರುವ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 26, 2022, 3:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.