ETV Bharat / city

ಸಾರಿಗೆ ಇಲಾಖೆಯ ತಾತ್ಕಾಲಿಕ ಹುದ್ದೆಗಳು ಒಂದು ವರ್ಷ ಮುಂದುವರಿಕೆ - ರಾಜ್ಯ ಸರ್ಕಾರದ ಆದೇಶ

ಸಾರಿಗೆ ಇಲಾಖೆಯಲ್ಲಿ ಈ ಹಿಂದೆ ನೇಮಿಸಿಕೊಳ್ಳಲಾಗಿದ್ದ ತಾತ್ಕಾಲಿಕ ಹುದ್ದೆಗಳನ್ನು ಒಂದು ವರ್ಷಗಳ ಕಾಲ ಮುಂದುವರೆಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Transport department temporary post continued, Transport department temporary post continued for one year, state government order, Bengaluru news, ಸಾರಿಗೆ ಇಲಾಖೆ ತಾತ್ಕಾಲಿಕ ಹುದ್ದೆ ಮುಂದುವರಿಕೆ, ಸಾರಿಗೆ ಇಲಾಖೆ ತಾತ್ಕಾಲಿಕ ಹುದ್ದೆಯನ್ನು ಒಂದು ವರ್ಷ ಮುಂದುವರಿಸಲಾಗಿದೆ, ರಾಜ್ಯ ಸರ್ಕಾರದ ಆದೇಶ, ಬೆಂಗಳೂರು ಸುದ್ದಿ,
ರಾಜ್ಯ ಸರ್ಕಾರದ ಆದೇಶ
author img

By

Published : May 10, 2022, 8:28 AM IST

ಬೆಂಗಳೂರು: ಸಾರಿಗೆ ಇಲಾಖೆ ಅಡಿಯಲ್ಲಿನ ತಾತ್ಕಾಲಿಕ ಹುದ್ದೆಗಳನ್ನು ಒಂದು ವರ್ಷ ಮುಂದುವರೆಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ಹುದ್ದೆಗಳನ್ನು ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಮುಂದಿನ ವರ್ಷದ ಅವಧಿವರೆಗೂ ವಿಸ್ತರಿಸಲಾಗಿದೆ. ಇಲಾಖೆಯ ವಿವಿಧ ವೃಂದಗಳ ಒಟ್ಟು 796 ತಾತ್ಕಾಲಿಕ ಹುದ್ದೆಗಳಿಗೆ ಅನ್ವಯವಾಗುವಂತೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಸರ್ಕಾರ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 1.30 ಕೋಟಿ ಜನಕ್ಕೆ 1 ಕೋಟಿ ವಾಹನ.. ಹಳ್ಳ ಹಿಡಿಯುತ್ತಾ ಪಬ್ಲಿಕ್​ ಟ್ರಾನ್ಸ್​ಪೋರ್ಟ್​!?

ಸಾರಿಗೆ ಆಯುಕ್ತರ ಹಿಂದಿನ ಪತ್ರಗಳಲ್ಲಿ, ವಿವಿಧ ವರ್ಗಗಳ ವಾಹನಗಳ ಸಂಖ್ಯೆ ಪ್ರತಿ ವರ್ಷವೂ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಬಾಗಿಲಿಗೆ ಸೇವೆ ಒದಗಿಸಲು ಸರ್ಕಾರ ಹೊಸದಾಗಿ ಕಚೇರಿಗಳನ್ನು ಪ್ರಾರಂಭಿಸಿದೆ. ಆದರೆ ಅವಶ್ಯವಿರುವ ಸಿಬ್ಬಂದಿ ಲಭ್ಯವಿಲ್ಲದ ಕಾರಣ ಕೆಲಸಗಳನ್ನು ಸುಸೂತ್ರವಾಗಿ ನಿರ್ವಹಿಸಲು ಕಳೆದೆರಡು ವರ್ಷಗಳಿಂದ ಒದಗಿಸಲಾಗಿದ್ದ ಹುದ್ದೆಗಳನ್ನು ಮುಂದುವರೆಸಿ ಆದೇಶ ಹೊರಡಿಸುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು ಎಂದು ಆದೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸಾರಿಗೆ ಆಯುಕ್ತರ ಪುಸ್ತಾವನೆಯನ್ನು ಪರಿಶೀಲಿಸಿದ ಸರ್ಕಾರ ಪುನಃ ಒಂದು ವರ್ಷದ ಅವಧಿಗೆ ಮುಂದುವರೆಸಲು ಆದೇಶಿಸಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.