ETV Bharat / city

ಎಂಜಲು ಉಗಿದು ಹಣ್ಣು ಮಾರುತ್ತಿದ್ದ ಆರೋಪ... ಬೆಂಗಳೂರಲ್ಲಿ ವ್ಯಾಪಾರಿಗೆ ಸಾರ್ವಜನಿಕರಿಂದ ತರಾಟೆ

ಕೊರೊನಾ ಕುರಿತು ಜಾಗೃತಿ ವಹಿಸಬೇಕಾದವರೇ ವಿಕೃತಿ ಮೆರೆಯುತ್ತಿರುವುದು ನಿಜಕ್ಕೂ ಮಾನವ ಸಮಾಜ ಆತಂಕ ಪಡುವ ವಿಷಯ. ಬೆಂಗಳೂರಲ್ಲಿ ದ್ರಾಕ್ಷಿ ಹಣ್ಣಿನ ಮೇಲೆ ಎಂಜಲು ಉಗಿದು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವ್ಯಾಪಾರಿಯನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

trader-selling-leftovers-grapes-fruits-in-bangalore
ಎಂಜಲು ಉಗಿದು ದ್ರಾಕ್ಷಿ ಹಣ್ಣು ಮಾರಾಟ
author img

By

Published : Apr 23, 2020, 2:39 PM IST

ಬೆಂಗಳೂರು: ದ್ರಾಕ್ಷಿ ಹಣ್ಣಿನ ಮೇಲೆ ಎಂಜಲು ಉಗಿದು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವ್ಯಾಪಾರಿಯೊಬ್ಬನನ್ನು ಸಾರ್ವಜನಿಕರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಗರದಲ್ಲಿ ನಡೆದಿದೆ.

ಎಂಜಲು ಉಗಿದ ಹಣ್ಣು ಮಾರಾಟ ಮಾಡುತ್ತಿದ್ದ ಆರೋಪ... ವ್ಯಾಪಾರಿಗೆ ಸಾರ್ವಜನಿಕರಿಂದ ತರಾಟೆ​​​

ಜೆ ಪಿ ನಗರದ ಸಾರಕಿ ಬಳಿಯ 9ನೇ ಅಡ್ಡ ರಸ್ತೆ ಬದಿಯಲ್ಲಿ ತಳ್ಳುಗಾಡಿಯಲ್ಲಿ ದ್ರಾಕ್ಷಿ ಹಣ್ಣು ಮಾರಾಟ ಮಾಡುತ್ತಿದ್ದ ವ್ಯಾಪಾರಿ, ಹಣ್ಣುಗಳ ಮೇಲೆ ಎಂಜಲು ಉಗಿದು ಮಾರಾಟ ಮಾಡುತ್ತಿದ್ದ. ಇದನ್ನು ಗಮನಿಸಿದ ಸಾರ್ವಜನಿಕರು ವ್ಯಕ್ತಿಯನ್ನ ತರಾಟೆಗೆ ತೆಗೆದುಕೊಂಡು ಛೀಮಾರಿ ಹಾಕಿದ್ದಾರೆ.

ನಂತರ ತಪ್ಪೊಪ್ಪಿಕೊಂಡ ವ್ಯಕ್ತಿ, ಮತ್ತೊಮ್ಮೆ ಹೀಗೆ ಮಾಡುವುದಿಲ್ಲ. ಹಣ್ಣುಗಳನ್ನು ಸ್ವಚ್ಛಗೊಳಿಸಿ ಮಾರಾಟ ಮಾಡುವುದಾಗಿ ಹೇಳಿದ್ದಾನೆ. ಸದ್ಯ ವಿಕೃತ ಮನಸ್ಸಿನ ವ್ಯಾಪಾರಿಯ ಕೃತ್ಯ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.