ಬೆಂಗಳೂರು : ಟಿಕೆಟ್ ರಹಿತ ಸಂಚಾರ ಮಾಡಿದ ಪ್ರಯಾಣಿಕರಿಗೆ ನೈರುತ್ಯ ರೈಲ್ವೆ ವಲಯ ಭರ್ಜರಿ ಬಿಸಿ ಮುಟ್ಟಿಸಿದೆ. ಪ್ರಸಕ್ತ ವರ್ಷ 38,479 ಪ್ರಯಾಣಿಕರ ಮೇಲೆ ದಂಡ ಪ್ರಯೋಗ ಮಾಡುವ ಮೂಲಕ ₹2 ಕೋಟಿಗೂ ಅಧಿಕ ದಂಡ ಸಂಗ್ರಹ ಮಾಡಿದೆ.
ವಿಭಾಗವು ಕಳೆದ ವರ್ಷ ನವೆಂಬರ್ ತಿಂಗಳೊಂದರಲ್ಲೇ 6,910 ಟಿಕೆಟ್ ರಹಿತ ಪ್ರಯಾಣದ ಪ್ರಕರಣಗಳನ್ನು ದಾಖಲಿಸಿ 44,93,765 ದಂಡವನ್ನ ಸಂಗ್ರಹಿಸಿದೆ. ಏಪ್ರಿಲ್ ತಿಂಗಳಿನಿಂದ ನವೆಂಬರ್ವರೆಗೆ 1,66,981 ಪ್ರಕರಣಗಳನ್ನು ದಾಖಲಿಸುವ ಮೂಲಕ ವಿಭಾಗದ ಸಂಚಿತ ಟಿಕೆಟ್ ಪರಿಶೀಲನೆಯ ಅದಾಯವು 9,33,12,980 ಆಗಿದೆ.
ರೈಲ್ವೆ ಕಾಯಿದೆ 1989 ಸೆಕ್ಷನ್ 138ರ ಪ್ರಕಾರ, ಯಾವುದೇ ಪ್ರಯಾಣಿಕರು ಪಾಸ್/ಟಿಕೆಟ್ ಇಲ್ಲದೇ ಪ್ರಯಾಣಿಸುವುದು ಕಂಡು ಬಂದಲ್ಲಿ ಶುಲ್ಕಕ್ಕೆ ಸಮನಾದ (ಅವರು ಪ್ರಯಾಣಿಸಿದ ದೂರಕ್ಕೆ ಒಂದು ಪಟ್ಟು ಸಾಮಾನ್ಯ ದರ ಅಥವಾ ರೈಲು ಪ್ರಾರಂಭವಾದ ನಿಲ್ದಾಣದಿಂದ ಪ್ರಯಾಣಿಸಿದವರೆಗಿನ ದರ) ಹೆಚ್ಚುವರಿ ಶುಲ್ಕಗಳ ಜೊತೆ 250 ರೂಪಾಯಿ ಸೇರಿ, ಯಾವುದು ಹೆಚ್ಚು ಅದನ್ನು ವಿಧಿಸಲಾಗುತ್ತದೆ.
ಇದನ್ನೂ ಓದಿ: ಬದುಕಿದೆಯಾ ಬಡಜೀವ.. ಪ್ರಪಾತಕ್ಕೆ ಬೀಳಬೇಕಾದ ಬಸ್ ಅದೃಷ್ಟವಶಾತ್ ಪಾರು.. 20 ಮಂದಿ ಬಚಾವ್..
ಇನ್ನು 35 ಕಸದ ಪ್ರಕರಣಗಳನ್ನು ದಾಖಲು ಮಾಡುವ ಮೂಲಕ 9,200 ರೂಪಾಯಿ ಹಾಗೂ ಕೋವಿಡ್ ನಿಯಮಗಳ ಪ್ರಕಾರ ಮಾಸ್ಕ್ ಧರಿಸದ 214 ಪ್ರಕರಣಗಳನ್ನು ದಾಖಲಿಸುವ ಮೂಲಕ 1.57,750 ರೂಪಾಯಿ ಮತ್ತು ರೈಲ್ವೆ ಆವರಣದಲ್ಲಿ ಧೂಮಪಾನ ಮಾಡಿದ 3 ಪ್ರಕರಣಗಳಿಂದ 2,600 ಸಂಗ್ರಹಿಸಿದೆ.
ಈ ಮೂಲಕ ಎಲ್ಲಾ ಪ್ರಕರಣಗಳಲ್ಲಿ ಈ ವರ್ಷ 2,18,73,555 ರೂಪಾಯಿ ಆದಾಯವನ್ನು ರೈಲ್ವೆ ಇಲಾಖೆ ಸಂಗ್ರಹಿಸಿದೆ.
ಯಾವ್ಯಾವ ತಿಂಗಳು ಎಷ್ಟೆಷ್ಟು ದಂಡ ವಸೂಲಿ?
ಏಪ್ರಿಲ್- 1,31,83,370
ಮೇ- 38,21,510
ಜೂನ್- 52,75,415
ಜುಲೈ - 96,14,395
ಆಗಸ್ಟ್ - 1,10,85,635
ಸೆಪ್ಟೆಂಬರ್ - 1,09,06,275
ಅಕ್ಟೋಬರ್ - 1,75,84,025
ನವೆಂಬರ್- 2,18,72,355