ETV Bharat / city

ಮೂವರು ಅಂತರ್​​ ರಾಜ್ಯ ಡ್ರಗ್​ ಪೆಡ್ಲರ್ಸ್ ಅರೆಸ್ಟ್​​​​​ - ಸಿಸಿಬಿ ಅರೆಸ್ಟ್​​ ಲೇಟೆಸ್ಟ್​ ಸುದ್ದಿ

ನಗರದ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಣಿಪಾಲ್ ಕೌಂಟಿ ಕ್ಲಬ್ ರೋಡ್​​ನ ಮನೆಯೊಂದರಲ್ಲಿ ಮಾದಕವಸ್ತುಗಳಾದ ಹ್ಯಾಶಿಶ್, ಎಂಡಿಎಂಎ, ಗಾಂಜಾ ಮಾರಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಮೂವರು ಅಂತರ್​ ರಾಜ್ಯ ಡ್ರಗ್ ಪೆಡ್ಲರ್ಸ್​ಗಳ‌ನ್ನು ಬಂಧಿಸಿದ್ದಾರೆ.

ಡ್ರಗ್ ಪೆಡ್ಲರ್ಸ್​ಗಳ‌ ಬಂಧನ
author img

By

Published : Nov 17, 2019, 3:09 PM IST

ಬೆಂಗಳೂರು: ಮಾದಕ ವಸ್ತುಗಳನ್ನ ಮಾರಾಟ ಮಾಡುತ್ತಿದ್ದ ಮೂವರು ಅಂತರ್​​​​ ರಾಜ್ಯ ಡ್ರಗ್ ಪೆಡ್ಲರ್ಸ್​ಗಳ‌ನ್ನು ಬಂಧಿಸುವಲ್ಲಿ‌ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಶಾಕೀರ್, ನಜೀಲ್ ಹಾಗೂ ಹಮೀದ್​​​ ಬಂಧಿತ ಆರೋಪಿಗಳು. ಬಂಧಿತರು ನಗರದ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಣಿಪಾಲ್ ಕೌಂಟಿ ಕ್ಲಬ್ ರೋಡ್​​ನ ಮನೆಯೊಂದರಲ್ಲಿ ಮಾದಕ ವಸ್ತುಗಳಾದ ಹ್ಯಾಶಿಶ್, ಎಂಡಿಎಂಎ, ಗಾಂಜಾ ಮಾರಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ಮೂಲತಃ ಕೇರಳದವರಾಗಿದ್ದು, ಆಂಧ್ರ ಪ್ರದೇಶದ ವೈಜಾಕ್​​​ಗೆ ಹೋಗಿ ಅಲ್ಲಿ ಡ್ರಗ್ ಪೆಡ್ಲರ್ಸ್​ಗಳ‌ನ್ನ ಸಂಪರ್ಕ ಮಾಡಿ ಮಾದಕ ವಸ್ತುಗಳನ್ನ ಅತಿ ಕಡಿಮೆ ಬೆಲೆಗೆ ಖರೀದಿ ಮಾಡುತ್ತಿದ್ದರು. ಬಳಿಕ ಅವನ್ನು ಕಾಲೇಜು ವಿದ್ಯಾರ್ಥಿಗಳಿಗೆ, ಟೆಕ್ಕಿಗಳಿಗೆ, ಸಾರ್ವಜನಿಕರಿಗೆ ಹೆಚ್ಚಿನ ಹಣ ತೆಗೆದುಕೊಂಡು ಮಾರಾಟ ಮಾಡುತ್ತಿರುವ ವಿಚಾರ ತನಿಖೆಯಲ್ಲಿ ಬಯಲಾಗಿದೆ.

ಇನ್ನು ಬಂಧಿತರಿಂದ 1 ಕೆಜಿ 12 ಗ್ರಾಂ ಸೆಮಿ ಸ್ಯಾಲಿಡ್ ಹ್ಯಾಶಿಶ್ ಆಯಿಲ್, 2 ಕೆಜಿ 200 ಗ್ರಾಂ ಗಾಂಜಾ, 12 ಗ್ರಾಂ ಎಂಡಿಎಂಎ, 3 ಮೊಬೈಲ್ ಫೋನ್, ಒಂದು ನ್ಯಾನೋ ಕಾರು, ಎರಡು ದ್ವಿಚಕ್ರ ವಾಹನ, ನಗದು ಹಾಗೂ ತೂಕದ ಯಂತ್ರವನ್ನು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

Intro:KN_BNG_05_DRUG_7204498Body:KN_BNG_05_DRUG_7204498Conclusion:ಡ್ರಗ್ ಪೆಡ್ಲರ್ಗಳ‌ ಬಂಧನ ಮಾಡಿದ ಸಿಸಿಬಿ

ಮಾದಕ ವಸ್ತುಗಳನ್ನ ಮಾರಟ ಮಾಡುತ್ತಿದ್ದ ಮೂವರು ಅಂತರ್ ರಾಜ್ಯ ಡ್ರಗ್ ಪೆಡ್ಲರ್ಗಳ‌ಬಂಧನ ಮಾಡುವಲ್ಲಿ‌ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.ಶಾಕೀರ್ , ನಜೀಲ್, ಮೊಹಮ್ಮದ್ ಬಂಧಿತ ಆರೋಪಿಗಳು.

ಈ ಆರೋಪಿಗಳು ಬೆಂಗಳೂರು ನಗರದ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಣಿಪಾಲ್ ಕೌಂಟಿ ಕ್ಲಬ್ ರೋಡ್ ನ ಮನೆಯೊಂದರಲ್ಲಿ ಮಾದಕವಸ್ತುಗಳಾದ ಹ್ಯಾಶಿಶ್,ಗಾಂಜಾ, ಎಂ.ಡಿ.ಎಂ.ಎ ಮಾರಾಟ ಮಾಡ್ತಿದ್ರು. ಈ ಮಾಹಿತಿ ಸಿಸಿಬಿ ಅಧಿಕಾರಿಗಳಿಗೆ ತಿಳಿದು ದಾಳಿ ನಡೆಸಿ ಆರೋಪಿಗಳ ಬಂಧಿಸಿದ್ದಾರೆ.

ಆರೋಪಿಗಳನ್ನ ವಿಚಾರಣೆ ನಡೆಸಿದಾಗ ಆರೋಪಿಗಳು ಮೂಲತಃ ಕೇರಳದವರು ಆಗಿದ್ದು ಆಂಧ್ರ ಪ್ರದೇಶದ ವೈಜಾಕ್ಗೆ ಹೋಗಿ ಅಲ್ಲಿ ಡ್ರಗ್ ಪೆಡ್ಲರ್ಗಳನ್ನ ಸಂಪರ್ಕ ಮಾಡಿ ಮಾದಕ ವಸ್ತುಗಳನ್ನ ಅತಿ ಕಡಿಮೆಗೆ ಖರೀದಿ ಮಾಡಡ್ತಿದ್ರು.

ನಂತ್ರ ಬೆಂಗಳೂರಿಗೆ ಮಾದಕ ವಸ್ತುಬತಂದು ಕಾಲೇಜು ವಿದ್ಯಾರ್ಥಿಗಳಿಗೆ, ಟೆಕ್ಕಿಗಳಿಗೆ, ಸಾರ್ವಜನಿಕರಿಗೆ ಹೆಚ್ಚಿನ ಹಣ ಅವರಿಂದ ತೆಗೆದುಕೊಂಡು ಮಾರಾಟ ಮಾಡ್ತಿರುವ ವಿಚಾರ ತನೀಕೆ ಯಲ್ಲಿ ಬಯಲಾಗಿದೆ. ಇನ್ನು ಬಂಧಿತರಿಂದ 1.ಕೆಜಿ 12ಗ್ರಾಂ ಸೆಮಿ ಸ್ಯಾಲಿಡ್ ಹ್ಯಾಶಿಶ್ ಆಯಿಲ್, 2ಕೆ.ಜಿ ತೂಕದ 200ಗ್ರ ಗಾಂಜಾ , 12ಗ್ರಾಂ ಎಂಡಿ.ಎಂ.ಎ 3ಮೊಬೈಲ್ ಫೋನ್ , ಒಂದು ನ್ಯಾನೋ ಕಾರು, ಎರಡು ದ್ವಿಚಕ್ರವಾಹನ ,ತೂಕದ ಯಂತ್ರ ,ನಗದು ವಶ ಪಡಿಸಿ ತನೀಕೆ ಮುಂದುವರೆಸಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.