ETV Bharat / city

ಪಾದರಾಯನಪುರದಲ್ಲಿ ನಿಲ್ಲದ ಕೊರೊನಾ ಹಾವಳಿ:  ಮತ್ತೆ ಮೂವರಲ್ಲಿ ಸೋಂಕು ಪತ್ತೆ! - ಕೋವಿಡ್​ 19

ಬೆಂಗಳೂರಿನ ಕೊರೊನಾ ಹಾಟ್​ಸ್ಪಾಟ್ ಪಾದರಾಯನಪುರದಲ್ಲಿ ಮತ್ತೆ ಮೂವರಿಗೆ ಸೋಂಕು ಕಾಣಿಸಿಕೊಂಡಿದೆ. ಈ ಮೊದಲೇ ಎಲ್ಲರನ್ನೂ ಕ್ವಾರಂಟೈನ್​ ಮಾಡಿದ್ದ ಕಾರಣದಿಂದ ಕೊರೊನಾ ಸೋಂಕು ಹೆಚ್ಚಿನ ಜನರಿಗೆ ಹರಡೋದನ್ನು ಅಧಿಕಾರಿಗಳು ತಪ್ಪಿಸಿದ್ದಾರೆ.

corona
ಕೊರೊನಾ
author img

By

Published : May 12, 2020, 2:44 PM IST

ಬೆಂಗಳೂರು: ಪಾದರಾಯಪುರದಲ್ಲಿ ಇಂದು ಮತ್ತೆ ಮೂವರಲ್ಲಿ ಕೊರೊನಾ ಪತ್ತೆಯಾಗಿದೆ. ರೋಗಿ ಸಂಖ್ಯೆ 454ರ ಸಂಪರ್ಕದಲ್ಲಿದ್ದ ಈಗ ಮೂವರಿಗೂ ಕೊರೊನಾ ಹರಡಿದ್ದು, ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 33 ವರ್ಷದ ಮಹಿಳೆ (ರೋಗಿ ಸಂಖ್ಯೆ 888), 38 ವರ್ಷದ ಮಹಿಳೆ (ರೋಗಿ ಸಂಖ್ಯೆ 889) ಹಾಗೂ 38 ವರ್ಷದ ಮಹಿಳೆ (ರೋಗಿ ಸಂಖ್ಯೆ 890)ಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರೆಲ್ಲರಿಗೂ ರೋಗಿ ಸಂಖ್ಯೆ 454ರ ಸಂಪರ್ಕದಿಂದ ಕೊರೊನಾ ಹರಡಿದೆ.

corona
ಕೊರೊನಾ

ಇದಕ್ಕೂ ಮೊದಲು ಇವರನ್ನು ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದರೆಂದು ಕ್ವಾರಂಟೈನ್​ ಮಾಡಲಾಗಿತ್ತು. ಹದಿನಾಲ್ಕು ದಿನದ ಕ್ವಾರಂಟೈನ್ ಅವಧಿ ಮುಗಿಯುವ ವೇಳೆ ಟೆಸ್ಟ್ ಮಾಡಿದಾಗ ಕೊರೊನಾ ಪತ್ತೆಯಾಗಿದೆ. ಮೊದಲೇ ಕ್ವಾರಂಟೈನ್ ಮಾಡಿದ್ದ ಹಿನ್ನೆಲೆ, ಇವರಿಂದ ಇನ್ನಷ್ಟು ಜನರಿಗೆ ಕೊರೊನಾ ಹರಡುವುದನ್ನು ಅಧಿಕಾರಿಗಳು ತಪ್ಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.