ಬೆಂಗಳೂರು: ಮಧ್ಯರಾತ್ರಿ ಕುಡಿದ ಅಮಲಿನಲ್ಲಿ ಕಾರಿನಲ್ಲೇ ನಿದ್ದೆಗೆ ಜಾರಿದ್ದ ವ್ಯಕ್ತಿಗಳನ್ನು ಪ್ರಶ್ನಿಸಲು ಮುಂದಾದ ಪೊಲೀಸರ ಮೇಲೆಯೇ ಕಾರು ಹರಿಸಲು ಯತ್ನಿಸಿದ್ದ ಮೂವರು ಆರೋಪಿಗಳನ್ನು ಕಬ್ಬನ್‌ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ದಯಾನಂದ್ ಸಾಗರ್, ಮಂಜುನಾಥ್, ವೀರೇಂದ್ರ ಎಂದು ಗುರುತಿಸಲಾಗಿದೆ.
ಆರೋಪಿಗಳು ಏಪ್ರಿಲ್ 22ರಂದು ಮದ್ಯ ಸೇವಿಸಿ ಬ್ರಿಗೇಡ್ ರಸ್ತೆ ಬಳಿ ಬಂದು ಕಾರು ನಿಲುಗಡೆಗೊಳಿಸಿದ್ದರು. ಈ ವೇಳೆ, ಸಿಟಿಒ ಸರ್ಕಲ್ ಬಳಿ ತಪಾಸಣೆ ನಡೆಸುತ್ತಿದ್ದ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಕುಡಿದ ಅಮಲಿನಲ್ಲಿ ಕಾರು ಲಾಕ್ ಮಾಡಿಕೊಂಡು ನಿದ್ರೆಗೆ ಜಾರಿದ್ದ ಆರೋಪಿಗಳನ್ನು ಪೊಲೀಸರು ಎಚ್ಚರಿಸಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಇರಲಿಲ್ಲ.
ಹೀಗಾಗಿ ಪೊಲೀಸರು ಕಾರಿನ ಚಕ್ರಕ್ಕೆ ವ್ಹೀಲ್ ಕ್ಲಾಂಪ್ ಹಾಕಿ ಕಾರಿನ ಸುತ್ತ ಬ್ಯಾರಿಕೇಡ್ ಹಾಕಿದ್ದರು. ಬಳಿಕ ಮಧ್ಯರಾತ್ರಿ ಎಚ್ಚರಗೊಂಡ ಆರೋಪಿಗಳು ಸುತ್ತಲೂ ಬ್ಯಾರಿಕೇಡ್ ಹಾಕಿರುವುದನ್ನು ಕಂಡು, ಕೂಡಲೇ ಕಾರನ್ನು ಚಲಾಯಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಈ ವೇಳೆ, ಎದುರುಗಡೆ ನಿಂತಿದ್ದ ಸಿಬ್ಬಂದಿ ಮೇಲೆ ಕಾರು ಹತ್ತಿಸಲು ಯತ್ನಿಸಿದ್ದು, ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಓದಿ : ವಿಜಯಪುರದಲ್ಲಿ ಭಾರಿ ಮಳೆ: ಪ್ರತ್ಯೇಕ ಪ್ರಕರಣದಲ್ಲಿ ಬಾಲಕ ಸೇರಿ ಇಬ್ಬರು ಸಾವು!