ಬೆಂಗಳೂರು: ಖೇಲ್ ರತ್ನ ಪ್ರಶಸ್ತಿ ಬಳಿಕ ಇದೀಗ ಅಸ್ಸೋಂನ ರಾಷ್ಟ್ರೀಯ ಉದ್ಯಾನವನದಿಂದಲೂ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೆಸರು ತೆರವುಗೊಳಿಸಲಾಗಿದ್ದು, ಇದೊಂದು ಮೂರ್ಖ ನಿರ್ಧಾರ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಅಸ್ಸೋಂನ 'ರಾಜೀವ್ ಗಾಂಧಿ ಒರಾಂಗ್ ರಾಷ್ಟ್ರೀಯ ಉದ್ಯಾನವನ'ವನ್ನು 'ಒರಾಂಗ್ ರಾಷ್ಟ್ರೀಯ ಉದ್ಯಾನವನ' ಎಂದು ಹಿಮಂತ ಬಿಸ್ವಾ ಶರ್ಮಾ ಸರ್ಕಾರ ಮರುನಾಮಕರಣ ಮಾಡಿದೆ. ನಿನ್ನೆ ನಡೆದ ಅಸ್ಸೋಂ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಉದ್ಯಾನವನಕ್ಕೆ ಮರುನಾಮಕರಣ ಮಾಡುವಂತೆ ಆದಿವಾಸಿ ಮತ್ತು ಬುಡಕಟ್ಟು ಸಮುದಾಯದ ದೀರ್ಘಕಾಲದ ಬೇಡಿಕೆಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಸ್ಸೋಂ ಸರ್ಕಾರ ಹೇಳಿಕೊಂಡಿದೆ.
-
"This is a foolish decision," says former Karnataka CM and Congress leader Siddaramaiah on Assam govt's decision to rename Rajiv Gandhi National Park as Orang National Park pic.twitter.com/1bqXtNUReN
— ANI (@ANI) September 2, 2021 " class="align-text-top noRightClick twitterSection" data="
">"This is a foolish decision," says former Karnataka CM and Congress leader Siddaramaiah on Assam govt's decision to rename Rajiv Gandhi National Park as Orang National Park pic.twitter.com/1bqXtNUReN
— ANI (@ANI) September 2, 2021"This is a foolish decision," says former Karnataka CM and Congress leader Siddaramaiah on Assam govt's decision to rename Rajiv Gandhi National Park as Orang National Park pic.twitter.com/1bqXtNUReN
— ANI (@ANI) September 2, 2021
ಇದನ್ನೂ ಓದಿ: ಮರು ನಾಮಕರಣ: ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಇನ್ನು ಮುಂದೆ 'ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ'
ಈ ಹಿಂದೆ 'ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ'ಯನ್ನು 'ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ' ಎಂದು ಪ್ರಧಾನಿ ನರೇಂದ್ರ ಮೋದಿ ಮರುನಾಮಕರಣ ಮಾಡಿದ್ದರು. ಕರ್ನಾಟಕದಲ್ಲೂ ಕೂಡ ಬಿಜೆಪಿ ಸರ್ಕಾರವು ಇಂದಿರಾ ಗಾಂಧಿ ಕ್ಯಾಂಟೀನ್ ಅನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಹೆಸರು ಬದಲಾಯಿಸುವ ಪ್ರಯತ್ನ ಮಾಡುತ್ತಿದೆ. ಇದೊಂದು ದ್ವೇಷದ ರಾಜಕಾರಣ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ದ್ವೇಷದ ರಾಜಕಾರಣ: ಸಿದ್ದರಾಮಯ್ಯ ಕೆಂಡಾಮಂಡಲ