ಬೆಂಗಳೂರು: ಕೋವಿಡ್-19 ಹಿನ್ನೆಲೆ ಪಾಲಿಕೆ ಆರೋಗ್ಯ ಸಿಬ್ಬಂದಿಯ ಆರೋಗ್ಯ ತಪಾಸಣೆಗೆ ಅಗತ್ಯವಿರುವ ಥರ್ಮಲ್ ಸ್ಕ್ರೀನಿಂಗ್ ಯಂತ್ರ ಹಾಗೂ ಫೇಸ್ ಮಾಸ್ಕ್ಗಳನ್ನು ಎಸ್ವಿಪಿ ಹಾಗೂ ಬಿ-ಪ್ಯಾಕ್ ಉಚಿತವಾಗಿ ನೀಡಿವೆ.
ಉಚಿತವಾಗಿ 40 ಥರ್ಮಲ್ ಸ್ಕ್ರೀನಿಂಗ್ ಸಾಧನಗಳು ಹಾಗೂ 50 ಪೇಸ್ ಶೀಲ್ಡ್ಗಳನ್ನು ನೀಡಿವೆ. ಎಸ್ವಿಪಿ ವತಿಯಿಂದ ಈಗಾಗಲೇ ನಗರದಲ್ಲಿ ಪಾಲಿಕೆ ಫೀವರ್ ಕ್ಲೀನಿಕ್, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ 10 ಸಾವಿರ ಪೇಸ್ ಶೀಲ್ಡ್, ಪೋಲೀಸ್ ಸಿಬ್ಬಂದಿಗೆ 20 ಸಾವಿರ ಪುನರ್ ಬಳಕೆ ಮುಖಗವಸುಗಳು ಹಾಗೂ 600 ಪಿಪಿಇ ಕಿಟ್ಗಳನ್ನು ನೀಡಲಾಗಿದೆ.
ಅಲ್ಲದೆ 65 ಥರ್ಮಲ್ ಸ್ಕ್ರೀನಿಂಗ್ ಸಾಧನಗಳಲ್ಲಿ ಈಗಾಗಲೇ 35 ಸಾಧನಗಳನ್ನು ಆಸ್ಪತ್ರೆಗಳಿಗೆ ನೀಡಿದ್ದು, ಇಂದು 40 ಥರ್ಮಲ್ ಸ್ಕ್ರೀನಿಂಗ್ ಸಾಧನಗಳನ್ನು ಪಾಲಿಕೆಗೆ ನೀಡಿದ್ದಾರೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದರು.