ETV Bharat / city

ಬೇಡಿಕೆ ಈಡೇರಿಸದಿದ್ದರೆ ಮುಂದಿನ ಶೈಕ್ಷಣಿಕ ವರ್ಷ ಪುನಾರಂಭವಾಗುವುದಿಲ್ಲ: ಕ್ಯಾಮ್ಸ್ ಎಚ್ಚರಿಕೆ

ಯಾವ ಶಾಲೆ ಅಧಿಕ ಶುಲ್ಕಕ್ಕೆ ಒತ್ತಡ ಹೇರುತ್ತೋ, ಅಂತಹವರ ವಿರುದ್ಧ ದೂರು ನೀಡಿ. ಅದು ಬಿಟ್ಟು ಎಲ್ಲಾ ಶಾಲೆಗಳ ಮೇಲೆ ಆರೋಪ ಮಾಡುವುದು ಸರಿಯಲ್ಲ..

Bangalore
ಬೇಡಿಕೆ ಈಡೇರಿಸದಿದ್ದರೆ ಮುಂದಿನ ಶೈಕ್ಷಣಿಕ ವರ್ಷ ಪುನಾರಂಭವಾಗುವುದಿಲ್ಲ: ಕ್ಯಾಮ್ಸ್ ಎಚ್ಚರಿಕೆ
author img

By

Published : May 24, 2021, 2:09 PM IST

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಶೈಕ್ಷಣಿಕ ವರ್ಷಕ್ಕೆ ಪೆಟ್ಟುಬಿದ್ದಿದೆ. ಈ ನಡುವೆ ನಮ್ಮ ಬೇಡಿಕೆ ಈಡೇರಿಸದಿದ್ದರೆ ಮುಂದಿನ ಶೈಕ್ಷಣಿಕ ವರ್ಷ ಪುನಾರಂಭವಾಗುವುದಿಲ್ಲ ಎಂದು ಖಾಸಗಿ ಶಾಲೆಗಳು ಎಚ್ಚರಿಕೆ ನೀಡಿವೆ.

ಇಂದು ಎಲ್ಲ ವಿವಿಧ ಖಾಸಗಿ ಶಾಲೆಗಳ ಒಕ್ಕೂಟ ಸೇರಿ ವರ್ಚುವಲ್ ಸಭೆ ನಡಸಿ, ಈ ಒಮ್ಮತದ ನಿರ್ಧಾರವನ್ನ ಕೈಗೊಂಡಿದೆ. ಈ ಕುರಿತು ಮಾತಾನಾಡಿರುವ ಕ್ಯಾಮ್ಸ್​​​​​​​​​​ನ ಕಾರ್ಯದರ್ಶಿ ಶಶಿಕುಮಾರ್, ಶಿಕ್ಷಣ ಇಲಾಖೆ ನಮ್ಮ ಬೇಡಿಕೆ ಈಡೇರಿಸದಿದ್ದರೆ, ಶಾಲೆಯನ್ನ ಆರಂಭಿಸೋದಿಲ್ಲ. ಮುಂದಿನ ಶೈಕ್ಷಣಿಕ ವರ್ಷ ರದ್ದು ಮಾಡುತ್ತೇವೆ. ಯಾರು ಕೂಡ ಶಾಲೆಗಳನ್ನು ನಡೆಸೋದಿಲ್ಲ ಎಂಬ ನಿಲುವು ತೆಗೆದುಕೊಂಡಿದ್ದೇವೆ.‌

ಇದಕ್ಕೆ ಕಾರಣ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಸಹಕಾರ ನೀಡಬೇಕು. ಎಲ್ಲರಿಗೂ ಕೊರೊನಾ ಲಸಿಕೆಯನ್ನು ಪ್ರಥಮ ಆದ್ಯತೆಯಾಗಿ ನೀಡಬೇಕು. ಜೊತೆಗೆ ಕೋವಿಡ್ ಪರಿಸ್ಥಿತಿಯಲ್ಲಿ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಗೊಂದಲಮಯ ಆದೇಶ ನೀಡಬಾರದು.

ಕಳೆದ ವರ್ಷ ಕಡ್ಡಾಯ ದಾಖಲಾತಿ ಆಗಬೇಕು. ಆದರೆ, ಹಾಜರಾತಿ ನಿಮ್ಮಿಷ್ಟ ಅನ್ನೋದು ಸರಿಯಲ್ಲ.‌ ಹಾಜರಾತಿಯನ್ನ ಕಡ್ಡಾಯ ಮಾಡಬೇಕು. ಗೊಂದಲದ ಹೇಳಿಕೆ ನೀಡಬಾರದು.‌

ಪೋಷಕರಿಗೂ ಕಡ್ಡಾಯ ದಾಖಲಾತಿ ಇರುವಂತೆ ತಿಳಿಸಬೇಕು. ಕೇವಲ ಖಾಸಗಿ ಶಾಲೆಗಳ ಮೇಲೆ ಎರುಗುವುದನ್ನ ನಿಲ್ಲಿಸಬೇಕು ಎಂದರು. ಪಾಠ-ಪ್ರವಚನ ಮಾಡಿಸಿಕೊಂಡು ಕೊನೆ ಕ್ಷಣದಲ್ಲಿ ಟಿಸಿ ಕೊಡಿ ಅನ್ನುವುದು ಎಷ್ಟು ಸರಿ? ಶುಲ್ಕ ಕಟ್ಟದೇ ಇದ್ದರೆ ಹೇಗೆ? ಈ ರೀತಿಯ ಅವೈಜ್ಞಾನಿಕ ನಿಲುವು ಸರಿಯಲ್ಲ. ಮುಂದಿನ‌ ಶೈಕ್ಷಣಿಕ ವರ್ಷಕ್ಕೆ ನಮ್ಮ ಸಹಕಾರ ಇರೋದಿಲ್ಲ ಎಂದರು.

ಮಾಸ್ ಪಾಸ್

1 ರಿಂದ 9ನೇ ತರಗತಿಯ ಮಕ್ಕಳಿಗೆ ಪರೀಕ್ಷೆ ಇಲ್ಲದೇ ಮಾಸ್ ಪಾಸ್ ಮಾಡಿದ್ದೀರಾ. ಆದೇಶ ಸ್ಪಷ್ಟವಾಗಿಯು ಇದೆ. ಆದರೆ, ಇಲಾಖೆಯ ಕೆಳಹಂತದ ಅಧಿಕಾರಿಗಳು ಒಳಸಂಚು ಮಾಡಿ ದಾಖಲೆ ಕ್ರೋಢೀಕರಿಸುವ ಸಲುವಾಗಿ ಎಲ್ಲರನ್ನೂ ತೇರ್ಗಡೆ ಮಾಡುವಂತೆ ಒತ್ತಾಯ ಮಾಡ್ತಾರೆ.

ಆದರೆ, ಶುಲ್ಕ ಕಟ್ಟದೇ, ಶಾಲೆಗೂ ಸೇರದೇ, ಪಾಠ ಪ್ರವಚನ ಆಗದವರನ್ನೂ ತೇರ್ಗಡೆ ಮಾಡುವುದು ಎಷ್ಟು ಸರಿ. ಮುಂದಿನ ದಿನಗಳಲ್ಲಿ ಇದು ಬೇರೆ ರೀತಿಯ ಮನಸ್ಥಿತಿಗೆ ಕಾರಣವಾಗುತ್ತೆ.‌ ನಿರಂತವಾಗಿ ಪಾಠ ಕೇಳಿದವರಿಗೂ, ಕೇಳದೇ ಇರುವವರಿಗೂ ಒಂದೇನಾ ಎಂಬ ಮಾತುಗಳು ಬರಲಿದೆ. ಇದರಿಂದ ಕಲಿಕೆಯ ಗುಣಮಟ್ಟ ಹಾಳಾಗುತ್ತೆ ಅಂತ ಕಿಡಿಕಾರಿದರು.

ಮುಂದಿನ ಶೈಕ್ಷಣಿಕ ವರ್ಷಕ್ಕೆ ಶುಲ್ಕ ಹೆಚ್ಚಳ ಬೇಡ

ಮುಂದಿನ ಶೈಕ್ಷಣಿಕ ವರ್ಷಕ್ಕೆ ಯಾವುದೇ ಶಾಲೆಗಳು ಶುಲ್ಕ ಹೆಚ್ಚಳ ಮಾಡಬಾರದು. ಸಾಮೂಹಿಕವಾಗಿ ಎಲ್ಲ ಸಂಘಟನೆಗಳು ಈ ನಿರ್ಧಾರ ಮಾಡಿದ್ದು, ಮಾನವೀಯತೆ ಮೆರೆದು, ಡಿಸ್ಕೌಂಟ್ ಕೊಟ್ಟು ಮಕ್ಕಳ ಕಲಿಕೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು.‌ ಹಲವು ಶಾಲೆಗಳು ಶೇ. 20-30% ಶುಲ್ಕ ಹೆಚ್ಚಳ ಮಾಡುವುದು ಕಾನೂನುಬಾಹಿರ. ಆ ರೀತಿ ಮಾಡದಂತೆ ತಿಳಿಸಿದರು.‌

ಪೋಷಕರಿಗೂ ಎಚ್ಚರಿಕೆ
ಕೆಲ ಪೋಷಕರ ಸಂಘವೂ ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಇಡೀ ಖಾಸಗಿ ಶಾಲೆಗಳ ಮೇಲೆ ಆರೋಪ ಮಾಡುವುದು ಸರಿಯಲ್ಲ. ಶುಲ್ಕ ಕಟ್ಟಬೇಡಿ, ದಾಖಲಾತಿ ಆಗಬೇಡಿ ಅಂತ ಹಬ್ಬಿಸುವುದು ಮಾಡಿದರೆ ಪೊಲೀಸ್ ದೂರು ನೀಡಬೇಕಾಗುತ್ತೆ.

ಯಾವ ಶಾಲೆ ಅಧಿಕ ಶುಲ್ಕಕ್ಕೆ ಒತ್ತಡ ಹೇರುತ್ತೋ, ಅಂತಹವರ ವಿರುದ್ಧ ದೂರು ನೀಡಿ. ಅದು ಬಿಟ್ಟು ಎಲ್ಲಾ ಶಾಲೆಗಳ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದರು.

ಓದಿ: ಆಕ್ಸಿಜನ್ ದುರಂತ.. 36 ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡುವಂತೆ ಆರ್‌ ಧ್ರುವನಾರಾಯಣ್ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.