ETV Bharat / city

ನೂತನ ಸಂಚಾರಿ ನಿಯಮ.. ಒರಿಜಿನಲ್​​ ದಾಖಲೆಗಳು ಇರಬೇಕಾ, ಬೇಡವಾ?

ವಾಹನ ಸವಾರರು ವಾಹನದ ಮೂಲ ದಾಖಲೆಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳಬೇಕಾ ಅಥವಾ ಬೇಡವಾ ಎಂಬುದಕ್ಕೆ ಪೊಲೀಸ್​ ಇಲಾಖೆ ಪರಿಹಾರ ಸೂಚಿಸಿದೆ.

The new Motor Vehicles Act came into effect
author img

By

Published : Sep 9, 2019, 12:32 PM IST

ಬೆಂಗಳೂರು: ನಗರದಲ್ಲೆಡೆಯೂ ನೂತನ ಮೋಟಾರು ವಾಹನ ಕಾಯ್ದೆಯದ್ದೇ ಮಾತು. ಕಾಯ್ದೆ ಜಾರಿಯಾದ ಮೊದಲ ದಿನವೇ (ಸೆಪ್ಟೆಂಬರ್‌ 1) ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಸವಾರರನ್ನು ಸಂಚಾರಿ ಪೊಲೀಸರು ಭರ್ಜರಿ ಭೇಟೆಯಾಡಿದರು. ಅದಕ್ಕೆ ಪೊಲೀಸ್​ ಇಲಾಖೆ ಸವಾರರು ವಾಹನದ ಮೂಲ ದಾಖಲೆಗಳನ್ನು ತಮ್ಮಲಿಯೇ ಇಟ್ಟುಕೊಳ್ಳಬೇಕಾ ಅಥವಾ ಬೇಡವಾ ಎಂಬುದಕ್ಕೆ ಪರಿಹಾರ ಸೂಚಿಸಿದೆ.

ಹೊಸ ಸಂಚಾರಿ ನಿಯಮ ಅಧಿಕೃತವಾಗಿ ಜಾರಿಯಾದಾಗಿನಿಂದ ಸಾರ್ವಜನಿಕರಲ್ಲಿ ಸಾಕಷ್ಟು ಗೊಂದಲ ಉಂಟಾಗಿದೆ. ಈ ಹಿಂದೆ ನಿಯಮಗಳನ್ನ ಉಲ್ಲಂಘಿಸಿದವರು ಪೊಲೀಸರಿಗೆ ಸಿಕ್ಕಿಬಿದ್ದರೆ, ಮೂಲ ದಾಖಲೆಗಳು ಇರಬೇಕಿರಲಿಲ್ಲ. ಜೆರಾಕ್ಸ್ ಪ್ರತಿಗಳನ್ನೂ ತೋರಿಸಬಹುದಿತ್ತು. ಆದರೀಗ ನಿಯಮ ಬದಲಾದ ಕಾರಣ ಮೂಲ ದಾಖಲೆಗಳು ಇರಲೇಬೇಕು ಎನ್ನುತ್ತಿದ್ದಾರೆ ಸಂಚಾರಿ ಪೊಲೀಸರು.

ಒಂದು ವೇಳೆ ಮೂಲ ದಾಖಲೆಗಳು ಇರದಿದ್ದರೆ, ₹ 2000 ದಂಡ ಕಟ್ಟಬೇಕಾಗುತ್ತದೆ. ಎಮಿಷನ್ ಟೆಸ್ಟ್, ಇನ್ಸೂರೆನ್ಸ್, ಆರ್​ಸಿ ಬುಕ್ ಸೇರಿ ವಾಹನಕ್ಕೆ ಸಂಬಂಧಿಸಿದ ಎಲ್ಲಾ ಮೂಲ ದಾಖಲೆಗಳಿರಬೇಕು ಎಂದು ಇಲಾಖೆ ಆದೇಶ ಹೊರಡಿಸಿದೆ.

ಎಲ್ಲರೂ ಮೂಲ ದಾಖಲೆಗಳನ್ನು ಇಟ್ಟುಕೊಳ್ಳಲು ಆಗುವುದಿಲ್ಲ. ಹಾಗಾಗಿ ಪೊಲೀಸ್​ ಇಲಾಖೆ ಅದಕ್ಕೂ ಅನ್ಯಮಾರ್ಗ ಸೂಚಿಸಿದೆ. ಡಿಜಿ ಲಾಕರ್ ಆ್ಯಪ್​​ ಡೌನ್​ಲೋಡ್​ ಮಾಡಿಕೊಂಡು ಮೂಲ ದಾಖಲೆಗಳನ್ನು ಅದರಲ್ಲಿ ಸಂಗ್ರಹಿಸಿಕೊಳ್ಳಬಹುದು. ಪೊಲೀಸರಿಗೆ ಸಿಕ್ಕಿಬಿದ್ದಾಗ ಅದನ್ನ ತೋರಿಸಬಹುದು ಎಂದೂ ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Intro:ಟ್ರಾಫಿಕ್ ಹೊಸ ನಿಯಮ,ದಾಖಲೆ ಒರಿಜನಲ್ ಇರಲೇಬೇಕಾ?..
ಇಲ್ಲಿದೆ ಉತ್ತರ

ಸಿಪಿ ಬೈಟ್ ಇದೆ

ಸಿಟಿಯಲ್ಲಿ ಎಲ್ಲಿ ನೋಡಿದ್ರು ಹೊಸ ರೂಲ್ಸ್ ದೇ ಮಾತು.ಸೆ.ರಿಂದ ಆರಂಭವಾದ ಹೊಸ ಕಾನೂನಿಂದ ಮೊದಲ ದಿನವೇ ಟ್ರಾಫಿಕ್ ಪೊಲೀಸರು ಭರ್ಜರಿ ಭೇಟೆಯಾಡಿದ್ರು.

ಇನ್ನೂ ಟ್ರಾಫಿಕ್ ಹೊಸ ನಿಯಮ ಬಂದಾಗಿನಿಂದ ಜನರಲ್ಲಿ ಸಾಕಷ್ಟು ಗೊಂದಲ ಉಂಟಾಗಿದ್ದು ಈ ಹಿಂದೆ ಪೊಲೀಸರು ಹಿಡಿದ್ರೆ ದಾಖಲೆಗಳು ಒರಿಜಿನಲ್ ಇರಬೇಕೆಂದೇನಿರಲಿಲ್ಲ, ಜೆರಾಕ್ಸ್ ಪ್ರತಿಗಳನ್ನ ತೋರಿಸಬಹುದಿತ್ತು ಈಗ ನಿಯಮ ಬದಲಾದ ಕಾರಣ ದಾಖಲೆಗಳೂ ಒರಿಜಿನಲ್ ಇರಲೇಬೇಕು ಅಂತಿದೆ ಟ್ರಾಫಿಕ್ ಇಲಾಖೆ

ಒಂದು ವೇಳೇ ಒರಿಜಿನಲ್ ದಾಖಲೆ ಇಲ್ಲದೆ ಇದ್ರೆ ಎರಡು ಸಾವಿರ ರೂಪಾಯಿ ಫೈನ್ ಬೀಳಲಿದೆ.ಎಮಿಷನ್ ಟೆಸ್ಟ್,ಇನ್ಸೂರೆನ್ಸ್,ಆರ್ ಸಿ ಬುಕ್ ಈ ಎಲ್ಲಾ ದಾಖಲೆಗಳ ಒರಿಜಿನಲ್ ಪ್ರತಿ ಇರಬೇಕು ಎಂದು ಸ್ಪಷ್ಟ ಆದೇಶ ಹೊರಡಿಸಿದೆ.

ಇನ್ನೂ ಇದಕ್ಕೂ ಅನ್ಯ ಮಾರ್ಗ ಸೂಚಿಸಿರುವ ಪೊಲೀಸ್ ಇಲಾಖೆ ಎಲ್ಲಾ ಒರಿಜಿನಲ್ ದಾಖಲೆ ಇಟ್ಟುಕೊಳ್ಳಲು ಆಗುವುದಿಲ್ಲ ಹೀಗಾಗಿ ಡಿಜಿ ಲಾಕರ್ ಆ್ಯಪ್ ನಲ್ಲಿ ದಾಖಲೆಗಳನ್ನ ಸೇವ್ ಮಾಡಿ
ಇಟ್ಟುಕೊಂಡರೆ ಅದನ್ನ ತೋರಿಸಬಹುದು ಎಂದೂ ಕೂಡ ನಗರ ಪೊಲಿಸ್ ಆಯುಕ್ತರು ತಿಳಿಸಿದ್ದಾರೆBody:KN_BNG_01_TRAFIC_7204498Conclusion:KN_BNG_01_TRAFIC_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.