ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ ಮತ್ತು ಅನಾವೃಷ್ಟಿ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಹಾಗೂ ಪರಿಹಾರ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ರೂಪಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಕೈ ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.
ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ನಾಯಕರು... ಕಾರಣ? - ಅತಿವೃಷ್ಟಿ ಮತ್ತು ಅನಾವೃಷ್ಟಿ
ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ ಮತ್ತು ಅನಾವೃಷ್ಟಿ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಹಾಗೂ ಪರಿಹಾರ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ರೂಪಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಕೈ ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.
ಕಾಂಗ್ರೆಸ್ ನಾಯಕರ ಪ್ರತಿಭಟನೆ
ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ ಮತ್ತು ಅನಾವೃಷ್ಟಿ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಹಾಗೂ ಪರಿಹಾರ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ರೂಪಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಕೈ ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.
Intro:newsBody:ಧರಣಿ ಸತ್ಯಾಗ್ರಹ ಮೂಲಕ ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ
ಬೆಂಗಳೂರು: ಬಿಜೆಪಿ ಸರ್ಕಾರದ ವಿರುದ್ಧ ಬೀದಿಗೆ ಇಳಿದ ರಾಜ್ಯ ಕಾಂಗ್ರೆಸ್ ನಾಯಕರು ಇಂದು ಬೃಹತ್ ಪ್ರತಿಭಟನೆ ಧರಣಿ ನಡೆಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ,ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಬೆಂಗಳೂರಿನ ಮೌರ್ಯ ವೃತ್ತದ ಗಾಂಧಿಪ್ರತಿಮೆ ಮುಂಭಾಗ ಒಂದು ದಿನದ ಧರಣಿ ಸತ್ಯಾಗ್ರಹ ನಡೆಯಿತು. ಅತಿವೃಷ್ಟಿ ಬಗ್ಗೆ ನಿರ್ಲಕ್ಷ ಹಾಗು ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ಧರಣಿಯಲ್ಲಿ ನಾಯಕರು ಗಮನ ಸೆಳೆದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ರಾಜ್ಯದ ಹಲವು ಕಡೆ ಪ್ರವಾಹದಿಂದ ದೊಡ್ಡ ನಷ್ಟವಾಗಿದೆ. 22 ಜಿಲ್ಲೆಗಳ 103 ತಾಲೂಕು ಪ್ರವಾಹದಿಂದ ತತ್ತರಿಸಿವೆ. ಪ್ರವಾಹ ಪೀಡಿತ ಸ್ಥಳಗಳಿಗೆ ನಮ್ಮ ತಂಡ ಭೇಟಿ ನೀಡಿದೆ. ಈ ವಿಚಾರದಲ್ಲಿ ಸರ್ಕಾರಕ್ಕೆ ಸಹಕಾರ ನೀಡಿದ್ದೆವು. ಆದರೆ ಸಮಸ್ಯೆ ಪರಿಹರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಮಂತ್ರಿ ಮಂಡಳ ರಚನೆಯಲ್ಲೇ ಬ್ಯುಸಿಯಾಯ್ತು. ಸರ್ಕಾರ ಉಳಿಸಿಕೊಳ್ಳೋಕೆ ಸಿಎಂ ಗಮನಹರಿಸಿದ್ರು. ಅದು ಬಿಟ್ಟು ಜನರ ಬಗ್ಗೆ ಗಮನಹರಿಸಲಿಲ್ಲ. ಕೇಂದ್ರದಲ್ಲಿ ಅವರದ್ದೇ ಸರ್ಕಾರವಿದೆ. ರಾಜ್ಯದಲ್ಲೂ ಅವರದ್ದೇ ಸರ್ಕಾರವಿದೆ. ಹೀಗಿದ್ದರೂ ಕೇಂದ್ರದಿಂದ ಯಾವ ನೆರವು ಬಂದಿಲ್ಲ ಎಂದು ರಾಜ್ಯ, ಕೇಂದ್ರದ ವಿರುದ್ಧ ದಿನೇಶ್ ವಾಗ್ದಾಳಿ ನಡೆಸಿದರು.
ಟ್ವೀಟ್ ಇಲ್ಲಾ
ಸಣ್ಣಪುಟ್ಟ ಹುಟ್ಟುಹಬ್ಬಕ್ಕೂ ಮೋದಿ ಟ್ವೀಟ್ ಹಾಕ್ತಾರೆ. ಆದರೆ ಪ್ರವಾಹದ ಬಗ್ಗೆ ಎಲ್ಲಿಯೂ ಸಣ್ಣ ಟ್ವೀಟ್ ಹಾಕಲಿಲ್ಲ. ಪ್ರಧಾನಿ ಬರೋದು ಎಲೆಕ್ಷನ್ ನಲ್ಲಿ ಮಾತ್ರ ಬಂದು 20 ಕಡೆ ಭಾಷಣ ಮಾಡಿಹೋಗ್ತಾರೆ. ಆದರೆ ಇಂತ ಸಂದರ್ಭದಲ್ಲಿ ಅವರು ತಡಸ್ಥವಾಗಿರ್ತಾರೆ. ನಿಮ್ಮ ಪ್ರಧಾನಿಗೆ ಹೇಳೋ ಧೈರ್ಯ ನಿಮಗಿಲ್ಲ. ಹೋಗ್ಲಿ ನಮ್ಮನಾದ್ರೂ ದೆಹಲಿಗೆ ಕರೆದೋಯ್ರಿ. ನಿಮ್ಮ ಪರವಾಗಿ ನಾವು ಮಾತನಾಡ್ತೇವೆ. ಬಿಜೆಪಿ ಸರ್ಕಾರಕ್ಕೆ ಭವಿಷ್ಯವಿಲ್ಲ. ವಾಮಮಾರ್ಗದ ಮೂಲಕದಿಂದ ಸರ್ಕಾರ ರಚನೆಯಾಗಿದೆ. ಮೂರು ರೀತಿಯ ಅತೃಪ್ತರು ಅದರಲ್ಲಿದ್ದಾರೆ. ರಿಸೈನ್ ಮಾಡಿ ಹೋಗಿರುವ ಶಾಸಕರು ಅತೃಪ್ತರು, ಸಚಿವ ಸ್ಥಾನ ಸಿಗದ ಅತೃಪ್ತರು, ಮಂತ್ರಿಯಾದ್ರೂ ಅಸಮಾಧಾನ ಇರೋವ್ರು ಅತೃಪ್ತರೇ. ಮೂರು ರೀತಿಯ ಅತೃಪ್ತರು ಇದ್ದಾರೆ. ಹೀಗಾಗಿ ಚುನಾವಣೆ ಯಾವಾಗ ಬೇಕಾದರೂ ಬರಬಹುದು ಎಂದರು.
10 ಸಾವಿರ ಕೋಟಿ ಬಿಡುಗಡೆ ಮಾಡಬೇಕು
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಕೇಂದ್ರ ಸರ್ಕಾರ ರಾಜ್ಯದಲ್ಲಾದ ನೆರೆ ಬರ ನಷ್ಟಕ್ಕೆ 10 ಸಾವಿರ ಕೋಟಿ ಬಿಡುಗಡೆ ಮಾಡಬೇಕು. ಸಿಎಂ ಯಡಿಯೂರಪ್ಪ ಕೂಡಲೆ ಕೇಂದ್ರ ಸರ್ಕಾರದ ಮುಂದೆ ಹೋಗಿ ಪರಿಹಾರಕ್ಕೆ ಒತ್ತಾಯಿಸಬೇಕು. ಸರ್ಕಾರ ಮಾಡಿದ ಘೋಷಣೆ ಈಡೇರಿಸಬೇಕು. ಮನೆ ಕಳೆದುಕೊಂಡವರಿಗೆ 10 ಲಕ್ಷ ರೂ ನೀಡಬೇಕು. ಅನೇಕ ಮಂದಿ ದಾಖಲೆ ಕಳೆದುಕೊಂಡಿದ್ದಾರೆ. ದಾಖಲೆ ಒದಗಿಸಲು ಆಡಳಿತ ಚುರುಕಾಗಬೇಕು, ಜನರಿಗೆ ಸಾಂತ್ವನ ನೀಡುವ ಕಾರ್ಯ ಮಾಡಬೇಕು. ಪರಿಹಾರ ಒದಗಿಸಬೇಕು ಎಂದರು.
ಸರ್ಕಾರದ ನಿರ್ಲಕ್ಷ್ಯ ಹೆಚ್ಚಾಗಿದೆ
ಮಾಜಿ ಸಂಸದ ಡಾ. ಎಂ. ವೀರಪ್ಪ ಮೊಯ್ಲಿ ಮಾತನಾಡಿ, ಇಂತದ್ದೊಂದು ನಿರ್ಲಕ್ಷ್ಯವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡಿದ್ದನ್ನು ನನ್ನ ರಾಜಕೀಯ ಅನುಭವದಲ್ಲಿ ಕಂಡಿರಲಿಲ್ಲ. ಸರ್ಕಾರದ ನಿರ್ಲಕ್ಷ್ಯ ಹೆಚ್ಚಾಗಿದೆ. ಹಿಂದೆಲ್ಲಾ ಇಂತಹ ಸ್ಥಿತಿ ಇರಲಿಲ್ಲ. ಗ್ರಾಮಕ್ಕೆ ಗ್ರಾಮವೇ ನಾಶವಾಗಿರುವಾಗ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಕೇಂದ್ರ ಸರಿಯಾಗಿ ವೀಕ್ಷಣೆಗೂ ಬಂದಿಲ್ಲ. ಮನಮೋಹನ್ ಸಿಂಗ್ ಕೈಗೊಂಡ ಮಾದರಿಯ ನಿರ್ಣಯವನ್ನು ಈ ಸರ್ಕಾರ ಕೈಗೊಳ್ಳುತ್ತಿಲ್ಲ. ಕೇರಳ, ತಮಿಳುನಾಡು, ಗುಜರಾತ್, ಓರಿಸ್ಸಾದಲ್ಲಿ ವಿಕೋಪವಾದಾಗ ನಾವು ಸಮರ್ಥವಾಗಿ ನಿಭಾಯಿಸಿದ್ದರು. ಇಂದಿನ ಸರ್ಕಾರ ಆರೀತಿ ಮಾಡುತ್ತಿಲ್ಲ. ರಾಜ್ಯ ಸರ್ಕಾರ ಅಸ್ತಿತ್ವಲ್ಲಿದೆ ಎನ್ನುವುದೇ ಅನುಮಾನ, ನಾವು ಬೀದಿಗಿಳಿದು ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
100 ವರ್ಷದಲ್ಲಿ ಇಂತ ಪ್ರವಾಹ ಕಂಡಿರಲಿಲ್ಲ
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ,1914 ರಲ್ಲಿ ಇಂತಹ ಪ್ರವಾಹ ಬಂದಿತ್ತಂತೆ. ಎಲ್ಲಾ ನದಿ ಉಕ್ಕಿ ಹರಿದಿವೆ. ಹಿರಿಯರನ್ನು ನನ್ನ ಪ್ರವಾಸ ಸಂದರ್ಭ ಕೇಳಿದಾಗ 100 ವರ್ಷದಲ್ಲಿ ಇಂತ ಪ್ರವಾಹ ಕಂಡಿಲ್ಲ ಎಂದಿದ್ದಾರೆ. ಲಕ್ಷಾಂತರ ಜನ ಬೀದಿ ಪಾಲಾಗಿದ್ದಾರೆ. ಲಕ್ಷಕ್ಕೂ ಹೆಚ್ಚು ಕುಟುಂಬಕ್ಕೆ ಹಾನಿಯಾಗಿದೆ. 88 ಮಂದಿ ಸತ್ತಿದ್ದಾರೆ. ಹಲವರು ಕಾಣೆಯಾಗಿದ್ದಾರೆ. ಊರುಗಳೇ ಕೊಚ್ಚಿ ಹೋಗಿವೆ. 20 ಲಕ್ಷ ಎಕರೆ ಪ್ರದೇಶದ ಬೆಳೆ ಹಾನಿಯಾಗಿದೆ. ಕೇಂದ್ರ ಸರ್ಕಾರ ಕ್ಕೆ ರಾಜ್ಯದ ಬಗ್ಗೆ ಕಿಂಚಿತ್ ಕಾಳಜಿ ಇಲ್ಲ. 25 ಸ್ಥಾನ ಗೆದ್ದುಕೊಟ್ಟರೂ, ಕೇಂದ್ರದ ಮಂತ್ರಿಗಳಿದ್ದಾರೆ ಏನೂ ಮಾಡಿಲ್ಲ. ಅನೈತಿಕ ವಾಗಿ ರಾಜ್ಯದಲ್ಲಿ ಬಿಜೆಪಿಯ ಯಡಿಯೂರಪ್ಪ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮಂತ್ರಿಮಂಡಲ ಇಲ್ಲದೇ 26 ದಿನ ಕೆಲಸ ಮಾಡಿಲ್ಲ. ದಿಲ್ಲಿಗೆ ಹತ್ತಾರು ಸಾರಿ ಹೋದರೂ ಪ್ರವಾಹಕ್ಕೆ ಒಂದೇ ಒಂದು ರೂಪಾಯಿ ತರಲು ಯಡಿಯೂರಪ್ಪ ಗೆ ಆಗಿಲ್ಲ. ಏಳು ಜಿಲ್ಲೆಯಲ್ಲಿ ಮಳೆ ಆಗಿಲ್ಲ. ಬರ ಇದೆ. ಇನ್ನೊಂದೆ ಪ್ರವಾಹಕ್ಕೆ ಹಲವು ಜಿಲ್ಲೆ ಸಂಕಷ್ಟಕ್ಕೆ ಈಡಾಗಿದೆ. ಬಿಜೆಪಿಯ ಪವರ್ ಫುಲ್ ಮಿನಿಸ್ಟರ್ ಅಮಿತ್ ಷಾ ಬಂದರು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಂದು ಹೋದರು. ಯಡಿಯೂರಪ್ಪ ನೇ 50 ಸಾವಿರ ಕೋಟಿ ನಷ್ಟವಾಗಿದೆ. ಹಣ ಬಿಡುಗಡೆ ಮಾಡದೇ ಜನರಿಗೆ ದ್ರೋಹ ಮಾಡಿದ್ದಾರೆ. ರೈತರ ಕಷ್ಟಕ್ಕೆ ಹಣ ಬಂದಿಲ್ಲ, ಪ್ರವಾಹಕ್ಕೆ ಹಣ ಬಂದಿಲ್ಲ. ಸಚಿವ ಕೆ.ಎಸ್. ಈಶ್ವರಪ್ಪ ನಾಲಿಗೆ ಬಿಗಿಹಿಡಿದು ಮಾತನಾಡಬೇಕು ಎಂದರು.
ಯಡಿಯೂರಪ್ಪ ಅವರ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದವರು. ಜವಾಬ್ದಾರಿ ನಿರ್ವಹಿಸಲು ಆಗಲಿಲ್ಲ ಅಂದ್ರೆ ನಾನು ಅಸಾಹಯಕ ಅಂತ ಜನರ ಕ್ಷಮೆ ಕೇಳಿ. ರಾಜ್ಯದ ಜನರ ಕ್ಷಮೆ ಕೇಳಲಿ. ಸಂಪೂರ್ಣ ಮನೆ ಕಳೆದುಕೊಂಡವರಿಗೆ 10 ಲಕ್ಷ ರೂ ಪರಿಹಾರ ನೀಡಬೇಕು. ಊರೇ ನಾಶವಾಗಿದೆ. ಅಲ್ಲಿ ಎತ್ತರವಾದ ಪ್ರದೇಶದಲ್ಲಿ ಊರನ್ನು ನಿರ್ಮಿಸಿಕೊಡಬೇಕು. ರಸ್ತೆ, ವಿದ್ಯುತ್ ಸಮಸ್ಯೆ ಆಗಿದೆ. ಇದನ್ನು 15 ದಿನದಲ್ಲಿ ಸರಿಪಡಿಸಿ ಎಂದು ಅಧಿಕಾರಿಗಳಿಗೆ ಹೇಳಿದ್ದೇವೆ. ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಹೆಚ್ಚಿನ ಅನುದಾನ ತರಿಸಿಕೊಳ್ಳಬೇಕು. ಮೋದಿ ಮುಂದೆ ಬಿಜೆಪಿಯವರಿಗೆ ತುಟಿ ಬಿಚ್ಚಲ್ಲ. ನಿಮಗೆ ಬಯ ಆದರೆ ಯಡಿಯೂರಪ್ಪ ನವರೇ ಸರ್ವ ಪಕ್ಷ ಸಭೆ ಕರೆದುಕೊಂಡು ಹೋಗಿ ನಾವು ಮಾತಾಡುತ್ತೇವೆ.ವಿಶೇಷ ಅಧಿವೇಶನ ಕರೆಯಿರಿ, ಬರ, ನೆರೆ ಬಗ್ಗೆ ಅಧಿವೇಶನ ಕರೆಯಲಿ. ಅಲ್ಲಿ ಚರ್ಚಿಸೋಣ, ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ವಿವರಿಸಲಿ. ನೀವು ಸರಿಯಾದ ಪರಿಹಾರ ಕೊಡದಿದ್ದರೆ, ಕಾಂಗ್ರೆಸ್ ಕ್ಷ ಸುಮ್ಮನಿರಲ್ಲ ಬೀದಿಗಿಳಿದು ಹೋರಾಡುತ್ತೇವೆ. ಇದು ಬೆದರಿಕೆ ಅಲ್ಲ, ನಮ್ಮ ಕರ್ತವ್ಯ. ಸಾಲ ಹಾಗೂ ಬಡ್ಡಿ, ಸುಸ್ಥಿ ಬಡ್ಡಿ ಮನ್ನಾ ಮಾಡಬೇಕು. ರೈತರು, ನೇಕಾರರು, ಮೀನುಗಾರರಿಗೆ ಪರಿಹಾರ ಕೊಡಬೇಕು. ದಾನಿಗಳು ಕೈಲಾದ ಸಹಾಯ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ವತಿಯಿಂದಲೂ ಪರಿಹಾರ ಸಾಮಗ್ರಿ ಕಳಿಸಿಕೊಟ್ಟಿದ್ದಾರೆ. ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಗೋಕಾಕ್ ಪ್ರದೇಶವನ್ನು ಹೊಸದಾಗಿ ಮರು ನಿರ್ಮಿಸುವ ಕಾರ್ಯ ಮಾಡಬೇಕು. ನಾಲ್ಕುವರೆ ಸಾವಿರ ಕುಟುಂಬ ಸಂಕಷ್ಟಕ್ಕೆ ಈಡಾಗಿದೆ. ಸರ್ಕಾರ ಗಮನ ಹರಿಸಬೇಕು. ಸಮರೋಪಾದಿಯಲ್ಲಿ ಪರಿಹಾರ ನೀಡಬೇಕು. ಒಂದು ಎಕರೆ ಬೆಳೆಹಾನಿಗೆ 50 ಸಾವಿರ, ಒಂದು ಹೆಕ್ಟೇರ್ ಗೆ 1.25 ಲಕ್ಷ ರೂ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಗದರಿಸಿದ ಸಿದ್ದರಾಮಯ್ಯ
ಮಾತಿನ ಮಧ್ಯೆ ಹಿಂದೆ ಕುಳಿತವರು ಮಾತನಾಡುತ್ತಿದ್ದ ಕಾರಣಕ್ಕೆ ಸಿಟ್ಟಾಗಿ ಗದರಿಸಿ ಸುಮ್ಮನಾಗಿಸಿದ ಸಿದ್ದರಾಮಯ್ಯ, ಮಾಜಿ ಸಚಿವ ಆರ್.ವಿ. ದೇಶಪಾಂಡೆ ಹೊರಡಲು ಮುಂದಾದಾಗ ಮಾತನಾಡಿ ಹೋಗಿ, ಈಗಲೇ ಹೊರಬೇಡಿ ಎಂದು ಗದರಿಸುವ ದನಿಯಲ್ಲಿ ಹೇಳಿದರು. ಹೊರಟು ನಿಂತಿದ್ದ ದೇಶಪಾಂಡೆ ಸುಮ್ಮನೆ ಮತ್ತೆ ಜಾಗದಲ್ಲಿ ಕುಳಿತರು.
ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಮಾತನಾಡಿ, ಯಡಿಯೂರಪ್ಪ ಹಾಗೂ ಬಿಜೆಇ ನಾಯಕರು ಮೂರು ದಿನಕ್ಕೆ 50 ಸಾವಿರ ಕೋಟಿ ಅಂದರು ಈಗ 1 ಲಕ್ಷ ಕೋಟಿ ಅನ್ನುತ್ತಿದ್ದೀರಿ. ಎಲ್ಲರೂ ಗಮನಿಸಿದ್ದಾರೆ. ನಾವೂ ಸಹಕಾರ ನೀಡಲು ಬದ್ಧವಾಗಿದ್ದೇವೆ. ನುಡಿದಂತೆ ನಡೆಯಬೇಕಿದ್ದ ಸರ್ಕಾರ ಮಾತು ಮರೆತಿದೆ. ಸರ್ಕಾರ ರಚನೆಗೆ ಮಾಡಿದ ಆತುರ ಈಗೇನಾಗಿದೆ. ಬಡವರ ಪರವಾಗಿ ನೀಡಿದ ಮಾತು ಈಡೇರಿಸಿ. ಜನ ಜಾನುವಾರು ನಷ್ಟವಾಗಿದೆ. ಈಗ ವನ್ಯಜೀವಿ ಗಳು ನಾಡಿಗೆ ಬರುವ ಆತಂಕ ಎದುರಾಗಿದೆ. ಸರ್ಕಾರ ಜನರ ಸೇವೆ ಮಾಡುವ ಅವಕಾಶ ಪಡೆದುಕೊಂಡಿದೆ. ಈಡೇರಿಸಬೇಕು. ಯಡಿಯೂರಪ್ಪ ದ್ವೇಶದ ರಾಜಕಾರಣ ಮಾಡುತ್ತಿದ್ದಾರೆ. ಜನರಿಗೆ ಅನುಕೂಲ ಆಗುವ ಸರ್ಕಾರ ನೀಡುವಲ್ಲಿ ಎಡವಿದ್ದೀರಿ. ಸರ್ಕಾರದ ಆಯಸ್ಸು ಕಡಿಮೆ ಆಗಿದೆ ಎಂದರು.
ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ, ಎಂ.ಬಿ. ಪಾಟೀಲ್, ಮೋಟಮ್ಮ, ಎಚ್.ಕೆ. ಪಾಟೀಲ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರ್ ನಾಥ್, ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಮತ್ತಿತರರು ಮಾತನಾಡಿದರು.
Conclusion:news