ETV Bharat / city

ಡ್ರಗ್ಸ್​ ಲಿಂಕ್​​​ ಪ್ರಕರಣ: ವಿಚಾರಣೆ ವೇಳೆ ಕಣ್ಣೀರು ಹಾಕಿದ ತೆಲುಗು ನಟ - ಸ್ಯಾಂಡಲ್​​​ವುಡ್ ಡ್ರಗ್ ಲಿಂಕ್​​ ಪ್ರಕರಣ

ತೆಲುಗು ಸಿನಿಮಾಗಳನ್ನು ಶಂಕರೇಗೌಡ ವಿತರಣೆ ಮಾಡುತ್ತಿದ್ದ ಸಮಯದಲ್ಲಿ, ಹೈದರಾಬಾದ್​ನಲ್ಲಿ ಮೊದಲ ಬಾರಿ ಶಂಕರ್​ ಗೌಡನ ಪರಿಚಯವಾಯಿತು. ಕನ್ನಡದಲ್ಲಿ ಸಿನಿಮಾ ಮಾಡುತ್ತೇನೆ. ನಿನಗೆ ಅವಕಾಶ ಕೊಡುತ್ತೇನೆ ಎಂದು ಶಂಕರ್​ ಗೌಡ ಪರಿಚಯ ಮಾಡಿಕೊಂಡಿದ್ದ. ಸಿನಿಮಾದಲ್ಲಿ ಅವಕಾಶ ಸಿಗಬಹುದು ಅಂತ ಆತನ ಜೊತೆ ಸಂಪರ್ಕ ಹೊಂದಿದ್ದೆ ಎಂದು ತೆಲುಗು ನಟ ತನೀಶ್ ವಿಚಾರಣೆ ವೇಳೆ ತಿಳಿಸಿದ್ದಾರೆ.

Tollywod actor Tanish
ತೆಲುಗು ನಟ ತನೀಶ್
author img

By

Published : Mar 25, 2021, 12:40 PM IST

ಬೆಂಗಳೂರು: ಸ್ಯಾಂಡಲ್​​​ವುಡ್​ಗೆ ಡ್ರಗ್ಸ್​ ಲಿಂಕ್​​ ಪ್ರಕರಣದ ವಿಚಾರಣೆ ವೇಳೆ ತೆಲುಗು ನಟ ತನೀಶ್ ಕಣ್ಣೀರು ಹಾಕಿದ್ದಾರೆ. ಪೊಲೀಸರ ಬಳಿ ನನ್ನದೇನು ತಪ್ಪಿಲ್ಲ ಸರ್​, ಒಮ್ಮೆ ಮಾತ್ರ ಶಂಕರ್​ ಗೌಡ ಅವರ ನಿವಾಸದಲ್ಲಿನ ನಡೆದ ಪಾರ್ಟಿಯಲ್ಲಿ ಭಾಗಿಯಾಗಿದ್ದೆ ಅಷ್ಟೇ ಎಂದು ಅಳಲು ತೊಂಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಮಾರ್ಚ್ 17ರಂದು ಬೆಂಗಳೂರಿನ ಗೋವಿಂದಪುರ ಠಾಣೆ ಪೊಲೀಸರಿಂದ ವಿಚಾರಣೆ ಎದುರಿಸಿದ್ದ ನಟ ತನೀಶ್, ಬೆಂಗಳೂರು ಪೊಲೀಸರು ನೋಟಿಸ್ ಕೊಡುತ್ತಿದ್ದಂತೆ ನನ್ನ ಹೊಸ ಸಿನಿಮಾ ಪ್ರಾಜೆಕ್ಟ್ ಕ್ಯಾನ್ಸಲ್ ಆಯ್ತು. ಮಾರ್ಚ್ 14ಕ್ಕೆ ನನ್ನ ಹೊಸ ಸಿನಿಮಾಗೆ ಸಹಿ ಮಾಡಬೇಕಿತ್ತು ಎಂದು ಪೊಲೀಸರ ಮುಂದೆ ಬಿಕ್ಕಿ-ಬಿಕ್ಕಿ ಅತ್ತಿದ್ದಾರೆ ಎನ್ನಲಾಗ್ತಿದೆ.

ನೀವು ನನಗೆ ನೋಟಿಸ್ ಕೊಡುತ್ತಿದ್ದಂತೆ ನನ್ನ ಕೈಯಲ್ಲಿರುವ ಸಿನಿಮಾಗಳಿಂದ ನನ್ನನ್ನು ಕೂಡ ಕೈಬಿಟ್ಟಿದ್ದಾರೆ. ದಯಮಾಡಿ ನನ್ನನ್ನ ಮತ್ತೆ ಕರೀಬೇಡಿ, ಏನಿದ್ದರೂ ಎಲ್ಲವನ್ನು ಈಗಲೇ ಕೇಳಿ ಮುಗಿಸಿ ಎಂದು ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಅವರ ಮುಂದೆ ವಿನಂತಿಸಿಕೊಂಡಿದ್ದಾರೆ.

ಓದಿ: ಡ್ರಗ್ಸ್ ಪ್ರಕರಣ: ತೆಲುಗು‌ ನಟ ತನೀಶ್ ಸೇರಿ ಐವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್

ತೆಲುಗು ಸಿನಿಮಾಗಳನ್ನು ಶಂಕರ್​ ಗೌಡ ವಿತರಣೆ ಮಾಡುತ್ತಿದ್ದ ಸಮಯದಲ್ಲಿ, ಹೈದರಾಬಾದ್​ನಲ್ಲಿ ಮೊದಲ ಬಾರಿ ಶಂಕರ್​ ಗೌಡನ ಪರಿಚಯವಾಯಿತು. ಕನ್ನಡದಲ್ಲಿ ಸಿನಿಮಾ ಮಾಡುತ್ತೇನೆ. ನಿನಗೆ ಅವಕಾಶ ಕೊಡುತ್ತೇನೆ ಎಂದು ಶಂಕರ್​ ಗೌಡ ಪರಿಚಯ ಮಾಡಿಕೊಂಡಿದ್ದ. ಸಿನಿಮಾದಲ್ಲಿ ಅವಕಾಶ ಸಿಗಬಹುದು ಅಂತ ಆತನ ಜೊತೆ ಸಂಪರ್ಕ ಹೊಂದಿದ್ದೆ.

ಬೆಂಗಳೂರಿಗೆ ಬಂದಾಗ ಸಿನಿಮಾ ಬಗ್ಗೆ ಚರ್ಚಿಸಲು ಶಂಕರ್​ ಗೌಡನನ್ನು ಭೇಟಿಯಾಗುತ್ತಿದ್ದೆ. ಅವರ ನಿವಾಸದಲ್ಲಿ ನಡೆದ ಪಾರ್ಟಿಯಲ್ಲಿ ಒಮ್ಮೆ ಮಾತ್ರ ಭಾಗವಹಿಸಿದ್ದೆ ಎಂದು ತನೀಶ್ ಗೋವಿಂದಪುರ ಪೊಲೀಸರ ವಿಚಾರಣೆಯಲ್ಲಿ ತಿಳಿಸಿದ್ದಾನೆಂದು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಓದಿ: ಡ್ರಗ್ಸ್ ಪ್ರಕರಣ: ಗೋವಿಂದಪುರ ಪೊಲೀಸ್ ಠಾಣೆಗೆ ಟಾಲಿವುಡ್ ನಟ ತನೀಶ್ ಹಾಜರ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.