ಬೆಂಗಳೂರು: ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ಸ್ವಚ್ಛ ನಗರಗಳ ಪಟ್ಟಿ ಬಿಡುಗಡೆ ಮಾಡಿದ್ದು, ರಾಜ್ಯ ರಾಜಧಾನಿ ಬೆಂಗಳೂರು ಈ ಬಾರಿಯೂ ಹಿನ್ನಡೆ ಸಾಧಿಸಿದೆ. ಈ ಪಟ್ಟಿಯಲ್ಲಿ ಬೆಂಗಳೂರು 2,768ನೇ ಸ್ಥಾನದಲ್ಲಿದೆ.
ಅಲ್ಲದೆ, ಕಳೆದ ಬಾರಿ ಅಗ್ರ ಮೂರನೇ ಸ್ಥಾನದಲ್ಲಿದ್ದ ಮೈಸೂರು ಈ ಬಾರಿ 134ನೇ ಸ್ಥಾನಕ್ಕೆ ಕುಸಿದಿದೆ. ಸ್ವಚ್ಛ ಸರ್ವೇಕ್ಷಣ್ ಲೀಗ್ ಮೂಲಕ ದೇಶದ ಸ್ವಚ್ಛ ನಗರಗಳ ಪಟ್ಟಿ ಬಿಡುಗಡೆಗೊಳಿಸಲಾಗಿದೆ.
188ನೇ ಸ್ಥಾನದಲ್ಲಿ ತುಮಕೂರು, 272ನೇ ಸ್ಥಾನದಲ್ಲಿ ಚಿತ್ರದುರ್ಗ, ಉಡುಪಿ 695ನೇ ಸ್ಥಾನದಲ್ಲಿದೆ. ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳು ಮಧ್ಯಪ್ರದೇಶದ ಪಾಲಾಗಿದ್ದು, ಅದರಲ್ಲಿ ಇಂದೋರ್ ನಗರಕ್ಕೆ ಪ್ರಥಮ, ಭೂಪಾಲ್ಗೆ ದ್ವಿತೀಯ ಸ್ಥಾನ ಸಿಕ್ಕಿದೆ. ಈ ಲೀಗ್ನಲ್ಲಿ 4,372 ನಗರಗಳ ಸ್ವಚ್ಛತೆ ಕುರಿತು ಸಮೀಕ್ಷೆ ನಡೆಸಲಾಗಿತ್ತು.