ETV Bharat / city

ಪ್ರತಿಪಕ್ಷಗಳ ಕಾರ್ಯನಿರ್ವಹಣೆಗೆ ರಾಜ್ಯಸರ್ಕಾರ ಅಡ್ಡಿಪಡಿಸುತ್ತಿದೆ: ರಾಮಲಿಂಗಾ ರೆಡ್ಡಿ

ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕ. ಅವರಿಗೆ ಎಲ್ಲ ಅಧಿಕಾರ ಇದೆ. ಡಿಸಿಗಳ ಜೊತೆ ಸಭೆ ಮಾಡಬಹುದು. ಈ ಸಂಬಂಧ ಸಿದ್ದರಾಮಯ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಡಿಸಿಗಳಿಂದ ಮಾಹಿತಿ ತೆಗೆದುಕೋಳ್ಳಲು ಸಭೆ ಮಾಡಬೇಕು ಅಂತಿದ್ರು. ಆದ್ರೆ ಸರ್ಕಾರ ಅದಕ್ಕೆ ಅವಕಾಶ ನೀಡಿಲ್ಲ ಎಂದು ರಾಮಲಿಂಗಾ ರೆಡ್ಡಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

   state government is interrupting the functioning of the opposition party : Ramalinga Reddy

author img

By

Published : May 20, 2021, 6:37 PM IST

Updated : May 20, 2021, 7:40 PM IST

ಬೆಂಗಳೂರು: ಕೊರೊನಾ ನೆಪವೊಡ್ಡಿ ರಾಜ್ಯಸರ್ಕಾರ ಪ್ರತಿಪಕ್ಷಗಳ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಬಿಎಲ್ ಶಂಕರ್, ರಮೇಶ್ ‌ಬಾಬು ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕ. ಅವರಿಗೆ ಎಲ್ಲ ಅಧಿಕಾರ ಇದೆ. ಡಿಸಿಗಳ ಜೊತೆ ಸಭೆ ಮಾಡಬಹುದು. ಈ ಸಂಬಂಧ ಸಿದ್ದರಾಮಯ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಡಿಸಿಗಳಿಂದ ಮಾಹಿತಿ ತೆಗೆದುಕೊಳ್ಳಲು ಸಭೆ ಮಾಡಬೇಕು ಅಂತಿದ್ರು. ಆದ್ರೆ ಸರ್ಕಾರ ಅದಕ್ಕೆ ಅವಕಾಶ ನೀಡಿಲ್ಲ. ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ಸಭೆ ಮಾಡುವುದಕ್ಕೂ ಅವಕಾಶ ಕೊಟ್ಟಿಲ್ಲ. ಕೊರೊನಾ ಇದೆ ಅಂತ ರಾಜ್ಯಪಾಲರು ಹೇಳುತ್ತಿದ್ದಾರೆ. ವಿಡಿಯೋ ‌ಕಾನ್ಪರೆನ್ಸ್​ ಮೂಲಕ ಸಭೆ ಮಾಡಲು ಅವಕಾಶ ಕೇಳಿದ್ದೇವೆ ಎಂದರು.

ಪ್ರತಿಪಕ್ಷಗಳ ಕಾರ್ಯನಿರ್ವಹಣೆಗೆ ರಾಜ್ಯಸರ್ಕಾರ ಅಡ್ಡಿಪಡಿಸುತ್ತಿದೆ: ರಾಮಲಿಂಗಾ ರೆಡ್ಡಿ

ರೆಮ್ಡಿಸಿವಿಯರ್ ಸರ್ಕಾರವೇ ನಿಗದಿ ಮಾಡಿ ಹಂಚಿಕೆ ಮಾಡುತ್ತಿದೆ. ಆದ್ರೂ ಕೂಡ ಬ್ಲಾಕ್ ಮಾರ್ಕೆಟ್​ನಲ್ಲಿ ರೆಮ್ಡಿಸಿವಿಯರ್ ಸಿಗ್ತಾ ಇದೆ. ಇದು ಹೇಗೆ ಆಯ್ತು ಅಂತ ಸರ್ಕಾರ ಉತ್ತರ ಕೊಡಬೇಕು. ಇನ್ನೂ ಬ್ಲಾಕ್ ಪಂಗಸ್​ಗೆ ಚಿಕಿತ್ಸೆ ಸಿಗುತ್ತಿಲ್ಲ, ಔಷಧ ಸಿಗುತ್ತಿಲ್ಲ ಅಂತ ಸರ್ಕಾರ ನೆಪ ಹೇಳುತ್ತಿದೆ. ಆಕ್ಸಿಜನ್ 1200 ಮೆಟ್ರಿಕ್ ಟನ್ ಕೊಡಿ ಎಂದು ಕೋರ್ಟ್ ಹೇಳಿದೆ. ಆದರೆ ಇವರು ಎಷ್ಟು ಬಂದಿದೆ ಎಂದು ಮಾಹಿತಿ ನೀಡುತ್ತಿಲ್ಲ. ಸರ್ಕಾರವೇ ನೇರ ಕೊಂಡುಕೊಳ್ಳುವಾಗ ಬ್ಲಾಕ್ ಮಾರ್ಕೆಟ್​ಗೆ ಹೇಗೆ ರೆಮ್ಡಿಸಿವಿಯರ್ ಹೋಯ್ತು ಇದು ಯಕ್ಷ ಪ್ರಶ್ನೆ. ಹೊಸ ಕಾಯಿಲೆ ಬ್ಲಾಕ್ ಫಂಗಸ್ ಬಂದಿದೆ. ಇದಕ್ಕೆ ಸರ್ಕಾರದ ಬಳಿ ಔಷಧಿ ಇಲ್ಲ. ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುತ್ತಾರೆ ಅಂದ್ರು. ನಾನು ಕೊಡಿಸಲು ಪ್ರಯತ್ನ ಮಾಡಿದೆ. ಆದ್ರೆ, ಅಲ್ಲಿ ಬೆಡ್ ಇಲ್ಲ ಎಂದು ವಿವರಿಸಿದರು.

ಚಾಮರಾಜನಗರದಲ್ಲಿ ಅಷ್ಟು ಜನ ಆಕ್ಸಿಜನ್ ಕೊರತೆಯಿಂದ ಸತ್ತಿದ್ದು ಅಂತ ಇದೆ. ನಮಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆ ಮಾಡಲು ಅವಕಾಶ ಕೊಡುತ್ತಿಲ್ಲ. ಇಷ್ಟೆಲ್ಲಾ ಇದ್ರು ಗ್ರಾಮದಲ್ಲಿ ಸೋಂಕು ಪತ್ತೆ ಹಚ್ಚುವ ಕೆಲಸ ಮಾಡುತ್ತಿಲ್ಲ. ವ್ಯಾಕ್ಸಿನ್ ಕಡಿಮೆ ಕೊಡುತ್ತಿದ್ದಾರೆ , ವ್ಯಾಕ್ಸಿನ್ ತೆಗೆದುಕೊಂಡು ಹೋಗಲು ಬಂದವರು ವಾಪಸ್ ಹೋಗ್ತಿದ್ದಾರೆ ಎಂದರು.

ಸರ್ಕಾರದಲ್ಲಿ ಪ್ರತಿಪಕ್ಷದ ನಾಯಕರಿಗೆ ಮಾಹಿತಿ ಪಡೆದುಕೊಳ್ಳುವ ಅವಕಾಶ ಇದೆ. ಆರ್​ಟಿಐ ನಲ್ಲಿ ಅವಕಾಶ ಇದೆ, ಅಲ್ಲಿ ಮಾಹಿತಿ ಪಡೆದುಕೊಳ್ಳಬಹುದು. ಆದ್ರೆ ಅಲ್ಲಿ ಕೂಡ ಸ್ಟಾಫ್ ಕೆಲಸ ಮಾಡುತ್ತಿಲ್ಲ. ಸಿದ್ದರಾಮಯ್ಯ ಅವರು ಕರೆದಿರುವ ಸಭೆಗೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.

ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಬಿ.ಎಲ್. ಶಂಕರ್ ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆ ಅಡಿ ಯಾರು ಬೇಕಾದರೂ ಮಾಹಿತಿ ಪಡೆಯಬಹುದು. ಪ್ರತಿಪಕ್ಷದ ನಾಯಕ ಅಂದ್ರೆ ಶ್ಯಾಡೊ ಸಿಎಂ. ಸರ್ಕಾರದಲ್ಲಿ ಆಗುತ್ತಿರುವ ಲೋಪವನ್ನು ಎತ್ತಿ ಹಿಡಿಯಲು ಅವಕಾಶ ಇದೆ. ಜಿಲ್ಲಾಧಿಕಾರಿಗಳ ಮೂಲಕ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆಯುತ್ತಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಸಿಎಂ ಆಗಿದ್ದಾಗ , ಯಡಿಯೂರಪ್ಪ ಅವರು ರಿವ್ಯುವ್ ಮಾಡಲು ಕೇಳಿದ್ರು, ಮಾಹಿತಿ ಪಡೆಯಲು ಅಲ್ಲ. ಇವರು ಯಾವುದೋ ಒಂದು ಉದಾಹರಣೆಗೆ ಕೊಟ್ಟು ಇದನ್ನು ತಳ್ಳಿ ಹಾಕುತ್ತಾರೆ. ಸುಪ್ರೀಂ ಕೋರ್ಟ್ ಇವರನ್ನು ಯಾವ ಗ್ರಹದಲ್ಲಿ ಇದ್ದೀರಿ ಎಂದು ತರಾಟೆಗೆ ತೆಗದುಕೊಂಡಿದೆ. ಇವರು ಎಷ್ಟು ವ್ಯಾಕ್ಸಿನ್ ಕೊಟ್ರಿ ಎಂದು ಸರಿಯಾದ ಮಾಹಿತಿ ಕೊಡುತ್ತಿಲ್ಲ. ದೊಡ್ಡ ಪ್ರಮಾಣದಲ್ಲಿ ಸಾವಿನ ಸಂಖ್ಯೆ ಮುಚ್ಚಿಡುತ್ತಿದ್ದಾರೆ. ಬೇರೆ ಕಾಯಿಲೆಯಿಂದ ಜೊತೆಗೆ ಕೋವಿಡ್ ಬಂದು ಸತ್ತವರಿಗೆ ಅದನ್ನು ಕೋವಿಡ್ ಸಾವು ಎಂದು ಪರಿಗಣಿಸುತ್ತಿಲ್ಲ ಎಂದರು.

Last Updated : May 20, 2021, 7:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.