ETV Bharat / city

ನಿನ್ನೆ ಜಲಮಂಡಳಿ ಅಧ್ಯಕ್ಷರಾದರು..ಇಂದು ಮೊದಲಿದ್ದ ಹುದ್ದೆಗೆ ವಾಪಾಸಾದರು! - Transfer Order

ಗುರುವಾರ ಎಂ.ಮಹೇಶ್ವರ್ ರಾವ್ ಅವರನ್ನು ಬೆಂಗಳೂರು ಜಲಂಮಡಳಿ ಅಧ್ಯಕ್ಷರನ್ನಾಗಿ ವರ್ಗಾವಣೆಗೊಳಿಸಿ ಶುಕ್ರವಾರ ಆ ಆದೇಶ ತಡೆ ಹಿಡಿದ ರಾಜ್ಯ ಸರ್ಕಾರ.

state government Interruption to Transfer Order
author img

By

Published : Aug 23, 2019, 11:26 PM IST

ಬೆಂಗಳೂರು: ಎಂ.ಮಹೇಶ್ವರ್ ರಾವ್ ಅವರನ್ನು ಬೆಂಗಳೂರು ಜಲಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿ ವರ್ಗಾವಣೆಗೊಳಿಸಿದ್ದ ರಾಜ್ಯ ಸರ್ಕಾರ, ಶುಕ್ರವಾರ ಆ ವರ್ಗಾವಣೆ ಆದೇಶಕ್ಕೆ ತಡೆ ಹಿಡಿದಿದೆ.

ಗುರುವಾರ ಮಹೇಶ್ವರ್ ರಾವ್​​ ಅವರನ್ನು ಜಲಮಂಡಳಿ ಅಧ್ಯಕ್ಷ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿತ್ತು. ಬಳಿಕ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಕಾರ್ಯದರ್ಶಿ ಹುದ್ದೆಯಲ್ಲೇ ಮುಂದುವರಿಸುವಂತೆ ಆದೇಶ ಹೊರಡಿಸಿದೆ.

ವರ್ಗಾವಣೆಗೊಳಿಸಿದ 24 ಗಂಟೆಯೊಳಗೆ ಆದೇಶ ತಡೆ ಹಿಡಿದಿರುವುದು ಅಚ್ಚರಿಗೆ ಕಾರಣವಾಗಿದೆ. ಯಾವ ಕಾರಣಕ್ಕೆ ಆದೇಶವನ್ನು ತಡೆಹಿಡಿಯಲಾಗಿದೆ ಎಂದು ಇನ್ನೂ ಸ್ಪಷ್ಟವಾಗಿಲ್ಲ.

ಇಬ್ಬರು ಅಧಿಕಾರಿಗಳ ವರ್ಗಾವಣೆ: ವರ್ಗಾವಣೆ ಪರ್ವ ಮುಂದುವರಿಸಿರುವ ರಾಜ್ಯ ಸರ್ಕಾರ ಇಂದು (ಶುಕ್ರವಾರ) ಮತ್ತಿಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಕೆಎಎಸ್ ಅಧಿಕಾರಿ‌ ಜಯವೈಭವ ಸ್ವಾಮಿ ಅವರನ್ನು ರಾಮನಗರ ಜಿಲ್ಲಾ‌ ಪಂಚಾಯತ್​ನ ಸಿಇಒ, ಕೆ.ಶಿವರಾಮೇಗೌಡ ಅವರನ್ನು ಬೆಂಗಳೂರು ನಗರ ಜಿಲ್ಲಾ‌ ಪಂಚಾಯತ್​​ನ ಸಿಇಒರನ್ನಾಗಿ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ.

Intro:GggBody:KN_BNG_06_BWSSBCHAIRMAN_ORDERHOLD_SCRIPT_7201951

ಜಲಮಂಡಳಿ ಅಧ್ಯಕ್ಷರನ್ನಾಗಿ ಮಾಡಲಾಗಿದ್ದ ಮಹೇಶ್ವರ್ ರಾವ್ ವರ್ಗಾವಣೆಗೆ ತಡೆ

ಬೆಂಗಳೂರು: ಜಲಮಂಡಳಿ ಅಧ್ಯಕ್ಷರಾಗಿ ಮಾಡಲಾಗಿದ್ದ ಎಂ.ಮಹೇಶ್ವರ್ ರಾವ್ ವರ್ಗಾವಣೆಯನ್ನು ರಾಜ್ಯ ಸರ್ಕಾರ ತಡೆಹಿಡಿದಿದೆ.

ನಿನ್ನೆ ಮಹೇಶ್ವರ್ ರಾವ್ ರನ್ನು ಬೆಂಗಳೂರು ಜಲಂಮಡಳಿ ಅಧ್ಯಕ್ಷರನ್ನಾಗಿ ವರ್ಗಾವಣೆ ಮಾಡಲಾಗಿತ್ತು. ಆದರೆ ಇಂದು ರಾಜ್ಯ ಸರ್ಕಾರ ಆ ಅದೇಶವನ್ನು ತಡೆಹಿಡಿದಿದೆ‌.

ಅವರನ್ನು ಈ ಹಿಂದಿದ್ದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಕಾರ್ಯದರ್ಶಿ ಹುದ್ದೆಯಲ್ಲೇ ಮುಂದುವರಿಸಿ, ಆದೇಶ ಹೊರಡಿಸಿದೆ. ಜಲಮಂಡಳಿಗೆ ವರ್ಗಾವಣೆ ಮಾಡಿದ 24 ತಾಸುಗಳೊಳಗೆ ಆ ಆದೇಶವನ್ನು ತಡೆ ಹಿಡಿದಿರುವುದು ಅಚ್ಚರಿಗೆ ಕಾರಣವಾಗಿದೆ. ಯಾವ ಕಾರಣಕ್ಕೆ ಮಹೇಶ್ವರ್ ರಾವ್ ವರ್ಗಾವಣೆ ಆದೇಶವನ್ನು ತಡೆಹಿಡಿಯಲಾಗಿದೆ ಎಂದು ಇನ್ನೂ ಸ್ಪಷ್ಟವಾಗಿಲ್ಲ.

ಇಬ್ಬರು ಅಧಿಕಾರಿಗಳ ವರ್ಗಾವಣೆ:

ವರ್ಗಾವಣೆಯನ್ನು ಮುಂದುವರಿಸಿರುವ ಹೊಸ ಸರ್ಕಾರ ಇಂದು ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.

ಕೆಎಎಸ್ ಅಧಿಕಾರಿ‌ ಜಯವೈಭವ ಸ್ವಾಮಿಯವರನ್ನು ರಾಮನಗರ ಜಿಲ್ಲಾ‌ ಪಂಚಾಯತ್ ನ ಸಿಇಒ ಆಗಿ ವರ್ಗಾವಣೆ ಮಾಡಲಾಗಿದೆ.

ಇನ್ನು ಕೆ.ಶಿವರಾಮೇಗೌಡರನ್ನು ಬೆಂಗಳೂರು ನಗರ ಜಿಲ್ಲಾ‌ ಪಂಚಾಯತ್ ನ ಸಿಇಒರನ್ನಾಗಿ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ.Conclusion:Ggg
ETV Bharat Logo

Copyright © 2024 Ushodaya Enterprises Pvt. Ltd., All Rights Reserved.