ETV Bharat / city

ವೃಷಭಾವತಿ ನದಿ ತಿರುವು ಯೋಜನೆ ; 'ನೀರಿ' ಸಲಹೆ ಪರಿಗಣಿಸುವುದಾಗಿ ಹೈಕೋರ್ಟ್​ಗೆ ಮಾಹಿತಿ - ಹೈಕೋರ್ಟ್

ತಜ್ಞರು ಪರಿಶೀಲಿಸಿ ವರದಿ ನೀಡಿದ ನಂತರ ಈ ಕುರಿತು ನಿರ್ಧರಿಸೋಣ ಎಂದು ತಿಳಿಸಿ ವಿಚಾರಣೆಯನ್ನು ಜನವರಿ 15ಕ್ಕೆ ಮುಂದೂಡಿತು. ಅಲ್ಲದೆ ವೃಷಭಾವತಿ ನದಿ ತಿರುವು ಯೋಜನೆಯ ಎಲ್ಲಾ ಕಾಮಗಾರಿಗಳಿಗೆ ನೀಡಿರುವ ಮಧ್ಯಂತರ ತಡೆಯಾಜ್ಞೆಯನ್ನು ಮುಂದಿನ ಆದೇಶದವರೆಗೂ ವಿಸ್ತರಿಸಿತು..

High Court
ಹೈಕೋರ್ಟ್
author img

By

Published : Dec 10, 2020, 10:03 PM IST

ಬೆಂಗಳೂರು : ರಾಮನಗರದ ಬೈರಮಂಗಲ ಕೆರೆಗೆ ವೃಷಭಾವತಿ ನದಿಯ ಕಲುಷಿತ ನೀರು ಸೇರುವುದನ್ನು ತಪ್ಪಿಸಲು ಜಲಾಯಶದ ಬಳಿ ನದಿ ತಿರುವು ಕಾಲುವೆ ನಿರ್ಮಿಸುವ ಸಂಬಂಧ ನೀರಿ ಸಲಹೆ ಪರಿಗಣಿಸುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್​ಗೆ ಮಾಹಿತಿ ನೀಡಿದೆ.

ಈ ಸಂಬಂಧ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ನೀರಿ)ಗೆ ಡಿಸೆಂಬರ್ 5ರಂದು ಪತ್ರ ಬರೆದಿದ್ದೇವೆ. ನೀರಿ ತಜ್ಞರು ಡಿಸೆಂಬರ್ 3ನೇ ವಾರದಲ್ಲಿ ಸ್ಥಳ ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಅದರಂತೆ ಪರಿಶೀಲನೆ ನಡೆಸಿದ 3-4 ದಿನಗಳಲ್ಲಿ ಯೋಜನೆಯ ಸಾಧಕ-ಬಾಧಕಗಳ ಕುರಿತು ಮಧ್ಯಂತರ ವರದಿ ಸಿಗಬಹುದು ಎಂದು ಸರ್ಕಾರ ತಿಳಿಸಿದೆ.

ವೃಷಭಾವತಿ ನದಿ ತಿರುವು ಯೋಜನೆ ಪ್ರಶ್ನಿಸಿ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಯೋಜನೆ ಜಾರಿಯಲ್ಲಿ ನೀರಿ ಸಲಹೆ ಪರಿಗಣಿಸಲು ನಿರ್ಧರಿಸಿದ್ದೇವೆ. ಅದರಂತೆ ಕಾವೇರಿ ನೀರಾವರಿ ನಿಗಮವು ನೀರಿಗೆ ಪತ್ರ ಬರೆದು ಮನವಿ ಮಾಡಿದೆ ಎಂದರು.

ಇದನ್ನೂ ಓದಿ: ಸರ್ಕಾರದ ವಿರುದ್ಧ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡ ಹೈಕೋರ್ಟ್

ಹೇಳಿಕೆ ದಾಖಲಿಸಿಕೊಂಡ ಪೀಠ, ನೀರಿ ಯೋಜನೆ ಕುರಿತು ಪರಿಶೀಲನೆ ನಡೆಸಲಿ. ಹಾಗೆಯೇ ಅರ್ಜಿದಾರರು ಯೋಜನೆಗೆ ಸಂಬಂಧಿಸಿದಂತೆ ತಜ್ಞರ ಜೊತೆ ಸಮಾಲೋಚಿಸಿರುವ ವಿವರ ಹಾಗೂ ದಾಖಲೆಗಳನ್ನು ಒದಗಿಸಲಿ.

ತಜ್ಞರು ಪರಿಶೀಲಿಸಿ ವರದಿ ನೀಡಿದ ನಂತರ ಈ ಕುರಿತು ನಿರ್ಧರಿಸೋಣ ಎಂದು ತಿಳಿಸಿ ವಿಚಾರಣೆಯನ್ನು ಜನವರಿ 15ಕ್ಕೆ ಮುಂದೂಡಿತು. ಅಲ್ಲದೆ ವೃಷಭಾವತಿ ನದಿ ತಿರುವು ಯೋಜನೆಯ ಎಲ್ಲಾ ಕಾಮಗಾರಿಗಳಿಗೆ ನೀಡಿರುವ ಮಧ್ಯಂತರ ತಡೆಯಾಜ್ಞೆಯನ್ನು ಮುಂದಿನ ಆದೇಶದವರೆಗೂ ವಿಸ್ತರಿಸಿತು.

ಹಿಂದಿನ ವಿಚಾರಣೆ ವೇಳೆ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯ(ನೀರಿ) ತಜ್ಞರ ಅಭಿಪ್ರಾಯ ಪಡೆಯಲು ಕಾವೇರಿ ನೀರಾವರಿ ನಿಗಮ ಮತ್ತು ರಾಜ್ಯ ಸರ್ಕಾರ ಸಿದ್ಧವಿದೆಯೇ ಎಂಬುದರ ಕುರಿತು ವಿವರಣೆ ನೀಡುವಂತೆ ಸೂಚಿಸಿತ್ತು.

ಅರ್ಜಿದಾರರ ಕೋರಿಕೆ : ಸರ್ಕಾರ ದೂರದೃಷ್ಟಿ ಇಲ್ಲದೆ, ಯಾವುದೇ ವೈಜ್ಞಾನಿಕ ಅಧ್ಯಯನ ನಡೆಸದೆ ಬೈರಮಂಗಲ ಜಲಾಶಯದ ಬಳಿ ವೃಷಭಾವತಿ ನದಿ ಪಾತ್ರವನ್ನು ಬದಲಿಸಲು ಯೋಜನೆ ರೂಪಿಸಿದೆ. ಅದರ ಜಾರಿಗೆ 2018ರ ನವೆಂಬರ್‌ 23ರಲ್ಲಿ ₹110 ಕೋಟಿ ಬಿಡುಗಡೆ ಮಾಡಿದೆ.

ಈ ಯೋಜನೆಯಿಂದ ಕೆರೆ ವ್ಯಾಪ್ತಿ ಕುಗ್ಗಲಿದೆ. ವೃಷಭಾವತಿ ನದಿ ಪಾತ್ರ ಬದಲಿಸುವುದು ಮುಂದಿನ ದಿನಗಳಲ್ಲಿ ಪರಿಣಾಮ ಬೀರಲಿದೆ. ಕೆರೆ ನಂಬಿಕೊಂಡಿರುವ ನೀರಾವರಿ ಪ್ರದೇಶದ ರೈತರು ತೊಂದರೆಗೆ ಸಿಲುಕಲಿದ್ದಾರೆ. ಹೀಗಾಗಿ ಯೋಜನೆ ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.