ETV Bharat / city

ಆ್ಯಂಬುಲೆನ್ಸ್​​​​​​​ಗಳ ಕೊರತೆ...ಓಲಾ, ಊಬರ್ ಬಳಕೆಗೆ ಮುಂದಾದ ರಾಜ್ಯ ಸರ್ಕಾರ - State government decided to use Uber

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿಯೇ ಹೊರತು ಕಡಿಮೆಯಾಗುತ್ತಿಲ್ಲ. ಈ ಸಮಯದಲ್ಲಿ ಆ್ಯಂಬುಲೆನ್ಸ್ ಕೊರತೆ ಕೂಡಾ ಉಂಟಾಗಿದೆ. ಆದ್ದರಿಂದ ಸರ್ಕಾರ ಇನ್ನಿತರ ಅಗತ್ಯ ಸೇವೆಗಳಿಗೆ ಓಲಾ ಹಾಗೂ ಊಬರ್ ಟ್ಯಾಕ್ಸಿ ಸೇವೆ ಬಳಸಿಕೊಳ್ಳಲು ನಿರ್ಧರಿಸಿದೆ.

Uber and Ola Service
ಊಬರ್ ಬಳಕೆಗೆ ಮುಂದಾದ ರಾಜ್ಯ ಸರ್ಕಾರ
author img

By

Published : Apr 7, 2020, 11:29 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಲೇ ಇದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲ್ಲಾ ಆಸ್ಪತ್ರೆಗಳಲ್ಲಿ ತುರ್ತುಸೇವೆಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಕೊರೊನಾ ಸೋಂಕಿತರಿಗಿಂತ ಶಂಕಿತರ ಸಂಖ್ಯೆಯೇ ಹೆಚ್ಚಾಗಿರುವ ಕಾರಣ ಆ್ಯಂಬುಲೆನ್ಸ್​​​​​​​​​​​​ಗಳನ್ನು ಇದೇ ಪ್ರಕರಣಕ್ಕೆ ಬಳಸಿಕೊಳ್ಳಲಾಗುತ್ತಿದೆ.

ಈಗ ಬೆಂಗಳೂರು ನಗರದಲ್ಲಿ ಇರುವ 108 ಆ್ಯಂಬುಲೆನ್ಸ್​​​​​​​​​​​​ ವ್ಯವಸ್ಥೆ ಕೇವಲ ಕೊರೊನಾ ವೈರಸ್ ರೋಗಿಗಳಿಗೆ ಬಳಕೆಯಾಗುತ್ತಿದೆ. ಇದರಿಂದ ತುರ್ತು ವೈದ್ಯಕೀಯ ಸೇವೆಗೆ ತೊಂದರೆ ಆಗುತ್ತಿದೆ. ಹೀಗಾಗಿ 108 ಆ್ಯಂಬುಲೆನ್ಸ್​​​​​​​​​​​​ಗಳನ್ನು ಸದ್ಯದ ಮಟ್ಟಿಗೆ ಕೊರೊನಾ ರೋಗಿಗಳಿಗೆ ಮಾತ್ರ ಮೀಸಲಿರಿಸಿ, ಇತರೆ ಅಗತ್ಯ ಸೇವೆಗಳಿಗೆ ಓಲಾ ಮತ್ತು ಊಬರ್ ಸೇವೆ ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಸರ್ಕಾರ 100 ಓಲಾ ಹಾಗೂ 100 ಊಬರ್ ವ್ಯವಸ್ಥೆ ಮಾಡಿದೆ. ಈ ವಾಹನಗಳನ್ನು ಆರೋಗ್ಯ ಸಚಿವ ಶ್ರೀರಾಮುಲು ಸಾಂಕೇತಿಕವಾಗಿ ಉದ್ಘಾಟಿಸಲಿದ್ದಾರೆ.‌ ಈ ಮೂಲಕ ಜನರಿಗೆ ಸೇವೆ ನೀಡಲು ಸರ್ಕಾರ ಹೊಸ ಪ್ಲ್ಯಾನ್ ಮಾಡಿದಂತಾಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.