ETV Bharat / city

ಮದರಸಾಗಳಲ್ಲಿ ರಾಜ್ಯ ಶಿಕ್ಷಣ ಪದ್ಧತಿ ಜಾರಿಗೆ ಕ್ರಮ: ಸಚಿವ ನಾಗೇಶ್​

ಮದರಸಾಗಳಲ್ಲೂ ರಾಜ್ಯದ ಶಿಕ್ಷಣ ಪದ್ಧತಿಯನ್ನು ಅಳವಡಿಸಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಆ ಮಕ್ಕಳು ಕೂಡ ಎಲ್ಲರಂತೆ ಶಿಕ್ಷಣವನ್ನು ಪಡೆಯಬೇಕು ಎಂಬುದು ಸರ್ಕಾರದ ಆಶಯ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್​ ಹೇಳಿದ್ದಾರೆ.

nagesh
ಸಚಿವ ನಾಗೇಶ್
author img

By

Published : Mar 19, 2022, 7:58 PM IST

Updated : Mar 19, 2022, 8:47 PM IST

ಕಾರವಾರ: ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ಇರುವ ಶಿಕ್ಷಣ ಪದ್ಧತಿಯನ್ನು ಮದರಸಾಗಳಲ್ಲಿಯೂ ಜಾರಿಗೆ ತರಲಾಗುವುದು. ಅಲ್ಲಿನ ಮಕ್ಕಳು ಕೂಡ ಎಲ್ಲರಂತೆ ಶಿಕ್ಷಣ ಪಡೆಯಬೇಕು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್​ ಹೇಳಿದರು.

ಗೋಕರ್ಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮದರಸಾಗಳಲ್ಲೂ ಇಂದಿನ ಶಿಕ್ಷಣದ ಪದ್ಧತಿಯನ್ನು ತರುವ ಕೆಲಸ ಮಾಡುತ್ತೇವೆ. ಅಲ್ಪಸಂಖ್ಯಾತರ ಮಕ್ಕಳೂ ಶಿಕ್ಷಣದಿಂದ ದೂರವುಳಿಯಬಾರದು. ಅವರೂ ಕೂಡ ನಮ್ಮೆಲ್ಲ ಮಕ್ಕಳ ರೀತಿ ಶಿಕ್ಷಣವನ್ನು ಕಲಿಯಬೇಕು. ಅವರೂ ಮುಂದೆ ಹೋಗಬೇಕೆಂಬ ಕಾರಣಕ್ಕಾಗಿ ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ಮದರಸಾಗಳಲ್ಲಿ ರಾಜ್ಯ ಶಿಕ್ಷಣ ಪದ್ಧತಿ ಜಾರಿಗೆ ಕ್ರಮ: ಸಚಿವ ನಾಗೇಶ್​

ಈವರೆಗೆ ರಾಜ್ಯದ ಮದರಸಾಗಳ ಬಗ್ಗೆ ಯಾವ ಯೋಚನೆಯೂ ಇಲ್ಲ. ಎನ್‌ಇಪಿ ತರುವ ಸಮಯದಲ್ಲಿ ಖಾಸಗಿ ಶಾಲೆಗಳಿಗೆ ಇವುಗಳನ್ನು ಆರಿಸಿಕೊಳ್ಳಲು ಬಿಡುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.

20 ಸಾವಿರ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ: ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಗೊಂದಲದ ಅವಶ್ಯಕತೆಯಿಲ್ಲ. ರಾಜ್ಯದಲ್ಲಿ ಆರಂಭಿಕ ಹಂತವಾಗಿ 20 ಸಾವಿರ ಶಾಲೆಗಳಲ್ಲಿ ಮಾತ್ರ ಪ್ರಾರಂಭಿಸಲಾಗುವುದು. ಉಳಿದ ಶಾಲೆಗಳಲ್ಲಿ ಈಗ ಇದ್ದಂತೆ ಶಿಕ್ಷಣ ನಡೆಯುತ್ತದೆ. ರಾಜ್ಯದ ಶಿಕ್ಷಣ ಪದ್ಧತಿಯಲ್ಲಿ ಇದರಿಂದ ತುಂಬಾ ವ್ಯತ್ಯಾಸ ಆಗದು ಎಂದು ತಿಳಿಸಿದರು.

ಈ ಹಿಂದೆಯೇ ನಾವು ನಲಿ- ಕಲಿ ಪದ್ಧತಿಯನ್ನ ಜಾರಿಗೆ ತಂದಿದ್ದೇವೆ. ಆದರೆ, ಪಠ್ಯದಲ್ಲಿ ಸ್ವಲ್ಪ ವ್ಯತ್ಯಾಸ ಆಗುತ್ತದೆ. ಹೊಸ ವಿಚಾರಗಳು ಬರುತ್ತವೆ. ಸಂಖ್ಯಾ ಮತ್ತು ಸಾಕ್ಷರತೆಗೆ ತುಂಬಾ ಒತ್ತನ್ನು ನೀಡುತ್ತಿದ್ದೇವೆ. 48 ಸಾವಿರ ಶಾಲೆಗಳು ನಮ್ಮಲ್ಲಿದ್ದರೂ ಮಕ್ಕಳ ಸಂಖ್ಯೆ ತುಂಬಾ ಕಡಿಮೆ ಇದೆ. ಹೀಗಾಗಿ ಎಲ್ಲೆಲ್ಲಿ ಮಕ್ಕಳಿದ್ದಾರೆಯೋ ಅಲ್ಲಿ ಮೊದಲು ಪ್ರಾರಂಭಿಸುತ್ತಿದ್ದೇವೆ. ನಂತರ ಎಲ್ಲಾ ಶಾಲೆಗಳಿಗೆ ಜಾರಿ ಮಾಡುತ್ತೇವೆ ಎಂದು ಸಚಿವರು ಹೇಳಿದರು.

ನೈತಿಕ ಶಿಕ್ಷಣಕ್ಕಾಗಿ ಭಗವದ್ಗೀತೆ: ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಈಗಿನ ಶಿಕ್ಷಣದಲ್ಲಿ ನೈತಿಕ ಶಿಕ್ಷಣದ ಕೊರತೆ ಇದೆ ಎಂಬುದು ಎಲ್ಲ ಪೋಷಕರ ಅಭಿಪ್ರಾಯವಾಗಿದೆ. ಮನುಷ್ಯನನ್ನು ಉತ್ತಮ ಮಾನವನನ್ನಾಗಿ ರೂಪಿಸುವ ನೈತಿಕ ಶಿಕ್ಷಣದ ಅವಶ್ಯಕತೆ ಇದೆ ಎಂಬುದು ಎಲ್ಲರಿಗೂ ಅರಿವಾಗಿದೆ. ನಾವೆಲ್ಲ ಕಲಿಯುವಾಗ ಮೌಲ್ಯಶಿಕ್ಷಣ ಇತ್ತು. ನಂತರ ಅದನ್ನು ಯಾವ ಕಾರಣಕ್ಕೆ ತೆಗೆದಿದ್ದಾರೋ ಗೊತ್ತಿಲ್ಲ. ಅದನ್ನು ಭಗವದ್ಗೀತೆಯ ರೂಪದಲ್ಲಿ ಮತ್ತೆ ಪಠ್ಯದಲ್ಲಿ ಅಳವಡಿಸಲಾಗುವುದು ಎಂದು ಸಚಿವರು ಘೋಷಿಸಿದರು.

ಮುಖ್ಯಮಂತ್ರಿಗಳ ಸಲಹೆಯ ಮೇರೆಗೆ ನೈತಿಕ ಶಿಕ್ಷಣದ ಒಂದು ತರಗತಿ ಮಾಡುತ್ತೇವೆ. ನೈತಿಕ ಶಿಕ್ಷಣದಲ್ಲಿ ಏನೇನಿರಬೇಕೆಂಬುದನ್ನು ಶಿಕ್ಷಣ ತಜ್ಞರು ನಿರ್ಧಾರ ಮಾಡಲಿದ್ದಾರೆ. ಪ್ರಪಂಚದಾದ್ಯಂತ ಭಗವದ್ಗೀತೆಯನ್ನು ಒಪ್ಪಿಕೊಂಡಿದ್ದಾರೆ ಎಂದರು.

ಓದಿ: ಮಹಿಳಾ ವಿವಿ ಸಾಮಾನ್ಯ ವಿವಿಯಾಗಿ ಪರವರ್ತನೆಗೆ ಸರ್ಕಾರದ ನಿರ್ಧಾರಕ್ಕೆ ವಿದ್ಯಾರ್ಥಿನಿಯರ ತೀವ್ರ ವಿರೋಧ

Last Updated : Mar 19, 2022, 8:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.