ETV Bharat / city

ಕಾಂಗ್ರೆಸ್ ನಾಯಕರ ದಿಲ್ಲಿ ಭೇಟಿ ಬೆನ್ನಲ್ಲೇ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ರಣದೀಪ್ ಸುರ್ಜೆವಾಲಾ - ಇಂದು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ರಣದೀಪ್ ಸುರ್ಜೆವಾಲಾ

ಮುಂಬರುವ ದಿನಗಳಲ್ಲಿ ಎದುರಾಗುವ ಚುನಾವಣೆಗಳು ಹಾಗೂ ಪಕ್ಷ ಸಂಘಟನೆ, ಕೆಪಿಸಿಸಿ ವಿವಿಧ ಸಮಿತಿಗಳಿಗೆ ಅಧ್ಯಕ್ಷರು, ಪದಾಧಿಕಾರಿಗಳ ನೇಮಕ ಹಾಗೂ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿಗಳ ಬದಲಾವಣೆ ಸೇರಿದಂತೆ ಹಲವು ವಿಚಾರಗಳ ಕುರಿತು ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಚರ್ಚಿಸುವ ಸಲುವಾಗಿ ಇಂದು ರಾಜ್ಯಕ್ಕೆ ರಣದೀಪ್ ಸುರ್ಜೆವಾಲಾ ಆಗಮಿಸುತ್ತಿದ್ದಾರೆ.

Randeep Surjewal
ರಣದೀಪ್ ಸುರ್ಜೆವಾಲಾ
author img

By

Published : Jul 22, 2021, 8:51 AM IST

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರು ದಿಲ್ಲಿಗೆ ತೆರಳಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ವಾಪಸಾಗುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಇಂದು ನಗರಕ್ಕೆ ಭೇಟಿ ನೀಡಲಿದ್ದಾರೆ.

Randeep Surjewal
ಇಂದು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ರಣದೀಪ್ ಸುರ್ಜೆವಾಲಾ

ಮುಂಬರುವ ದಿನಗಳಲ್ಲಿ ಎದುರಾಗುವ ಚುನಾವಣೆಗಳು ಹಾಗೂ ಪಕ್ಷ ಸಂಘಟನೆ, ಕೆಪಿಸಿಸಿ ವಿವಿಧ ಸಮಿತಿಗಳಿಗೆ ಅಧ್ಯಕ್ಷರು, ಪದಾಧಿಕಾರಿಗಳ ನೇಮಕ ಹಾಗೂ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿಗಳ ಬದಲಾವಣೆ ಸೇರಿದಂತೆ ಹಲವು ವಿಚಾರಗಳ ಕುರಿತು ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಚರ್ಚಿಸುವ ಸಲುವಾಗಿ ರಾಜ್ಯಕ್ಕೆ ಮೂರು ದಿನದ ಪ್ರವಾಸ ನಿಮಿತ್ತ ಆಗಮಿಸುತ್ತಿದ್ದಾರೆ. ರಾಷ್ಟ್ರೀಯ ನಾಯಕರ ಸೂಚನೆ ಮೇರೆಗೆ ಇಂದು ಸಂಜೆ ಬೆಂಗಳೂರಿಗೆ ಆಗಮಿಸುವ ಸುರ್ಜೆವಾಲಾ, ನಾಳೆಯಿಂದ ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಸರಣಿ ಸಭೆ ನಡೆಸಲಿದ್ದಾರೆ.

ಲಿಂಗಾಯತ ಸಮುದಾಯ ಸೆಳೆಯುವ ಯತ್ನ?
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾವಣೆ ಸಂಬಂಧ ರಾಜ್ಯದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಆಗಮಿಸುತ್ತಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ, ಮುಂಬರುವ ದಿನಗಳಲ್ಲಿ ಲಿಂಗಾಯತ ಸಮುದಾಯದವರನ್ನು ಕಾಂಗ್ರೆಸ್​ನತ್ತ ಸೆಳೆಯಲು ಯಾವ ರೀತಿ ಕಾರ್ಯತಂತ್ರ ಹೆಣೆಯಬಹುದು ಎಂಬ ಕುರಿತು ಸಹ ಚರ್ಚೆ ನಡೆಸಲಿದ್ದಾರೆ ಎಂಬ ಮಾಹಿತಿ ಇದೆ. ಹಿಂದೆ ಕಾಂಗ್ರೆಸ್ ಪಕ್ಷದಿಂದ ವೀರೇಂದ್ರ ಪಾಟೀಲ್​ಗೆ ಅನ್ಯಾಯವಾಗಿದೆಯೆಂದು ಕಾಂಗ್ರೆಸ್ ಪಕ್ಷದಿಂದ ದೂರವಾಗಿದ್ದ ಲಿಂಗಾಯತ ಸಮುದಾಯ, ಕಳೆದ ಮೂರು ದಶಕಗಳಿಂದ ಯಡಿಯೂರಪ್ಪ ನೇತೃತ್ವದ ಬಿಜೆಪಿಗೆ ಬೆಂಬಲವಾಗಿ ನಿಂತಿದೆ. ಈ ಮತದಾರ ಸಮುದಾಯವನ್ನು ಇದೀಗ ಸೆಳೆಯಲು ಕಾಂಗ್ರೆಸ್​ಗೆ ಒಂದು ಸದಾವಕಾಶ ದೊರಕಿದ್ದು, ಅದನ್ನು ಯಾವ ರೀತಿ ಸದ್ಬಳಕೆ ಮಾಡಿಕೊಳ್ಳಬಹುದು ಎಂಬ ಕುರಿತು ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಸುರ್ಜೆವಾಲಾ ಚರ್ಚಿಸಲಿದ್ದಾರೆ.

ಮೂರು ದಿನಗಳ ಪ್ರವಾಸ
ಇಂದು ಸಂಜೆ ಬೆಂಗಳೂರಿಗೆ ಆಗಮಿಸುವ ರಣದೀಪ್ ಸುರ್ಜೆವಾಲಾ, ನಾಳೆಯಿಂದ ಮೂರು ದಿನ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ನಾಳೆ ಮಂಗಳೂರಿನಲ್ಲಿ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಯ ಎಲ್ಲ ಮುಖಂಡರ ಜೊತೆ ಸಭೆ ನಡೆಸುತ್ತಾರೆ. 24ರಂದು ತುಮಕೂರಿನಲ್ಲಿ ದಾವಣಗೆರೆ, ಚಿಕ್ಕಮಗಳೂರು, ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಮುಖರ ಸಭೆ ನಡೆಸಲಿರುವ ಸುರ್ಜೇವಾಲಾ, ಹಾಲಿ ಮತ್ತು ಮಾಜಿ ಶಾಸಕರು, ಮಂತ್ರಿಗಳು, 2018ರ ಪರಾಜಿತ ಅಭ್ಯರ್ಥಿಗಳು, ಕಾಂಗ್ರೆಸ್ ನ ವಿವಿಧ ಶಾಖೆಯ ಪದಾಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.

ಲಿಂಗಾಯತ ಮತಗಳು, ಸದ್ಯದ ರಾಜ್ಯ ರಾಜಕೀಯ ಪರಿಸ್ಥಿತಿಯ ಬಗ್ಗೆ ಚರ್ಚೆ, ಫೋನ್​ ಕದ್ದಾಲಿಕೆ ವಿಚಾರದ ಬಗ್ಗೆ, ಬೆಲೆ ಏರಿಕೆ ವಿಚಾರ ಸೇರಿದಂತೆ 2023ರ ಸಾರ್ವತ್ರಿಕ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸುವ ನಿಟ್ಟಿನಲ್ಲಿ ಈ ಸಂದರ್ಭ ಚರ್ಚೆ ನಡೆಸಲಿದ್ದಾರೆ.

ಒಟ್ಟಾರೆ ಮೂರು ದಿನದ ರಾಜ್ಯ ಪ್ರವಾಸದಲ್ಲಿ ಸಂಪೂರ್ಣ ಸಕ್ರಿಯವಾಗಿ ಕಾರ್ಯಕರ್ತರು ಹಾಗೂ ಮುಖಂಡರ ಜತೆ ಚರ್ಚಿಸುವ ಅವರು, ರಾಜ್ಯದ ಜನರ ನಾಡಿಮಿಡಿತವನ್ನು ಅರಿಯಲಿದ್ದು, ಅಂತಿಮವಾಗಿ ರಾಜ್ಯ ನಾಯಕರ ಜೊತೆ ಚರ್ಚಿಸಿ ಒಂದಿಷ್ಟು ಸಲಹೆ - ಸೂಚನೆಗಳನ್ನು ನೀಡಿ ದಿಲ್ಲಿಗೆ ತೆರಳಲಿದ್ದಾರೆ.

ತೆರಳುವ ಮುನ್ನ ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಮುಕ್ತಾಯದವರೆಗೂ ಮುಂದಿನ ಸಿಎಂ ಅಥವಾ ನಾಯಕತ್ವದ ವಿಚಾರ ಕಾಂಗ್ರೆಸ್​ನಲ್ಲಿ ಪ್ರಸ್ತಾಪ ಮಾಡದಂತೆ ಖಡಕ್ ಸೂಚನೆ ನೀಡಲಿದ್ದಾರೆ. ಒಂದೊಮ್ಮೆ ಯಾವುದೇ ನಾಯಕರು ಇಲ್ಲವೇ, ಅವರ ಬೆಂಬಲಿಗ ಮುಖಂಡರು ಅಥವಾ ಶಾಸಕರು ಇಂತಹ ಹೇಳಿಕೆ ನೀಡಿದರೆ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಪಕ್ಷದ ಶಿಸ್ತು ಸಮಿತಿಗೆ ಸೂಚನೆ ನೀಡಿ ತೆರಳಲಿದ್ದಾರೆ ಎಂಬ ಮಾಹಿತಿ ಇದೆ.

ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವದ ವಿಚಾರವನ್ನು ಪ್ರಸ್ತಾಪಿಸಿರುವುದನ್ನು ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ಹೇಳಿಕೆಗಳು ಮರುಕಳಿಸದಂತೆ ಎಚ್ಚರವಹಿಸುವಂತೆ ಸೂಚಿಸಿದೆ. ಹೈಕಮಾಂಡ್ ನೀಡಿರುವ ಸೂಚನೆಯನ್ನು ರಾಜ್ಯ ಕಾಂಗ್ರೆಸ್ ನಾಯಕರಿಗೆ ರವಾನಿಸುವ ಸಲುವಾಗಿಯೂ ಸುರ್ಜೆವಾಲಾ ಆಗಮಿಸುತ್ತಿದ್ದಾರೆ. ಸುರ್ಜೆವಾಲಾ ರಾಜ್ಯ ಪ್ರವಾಸ ಸಂದರ್ಭ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸೇರಿದಂತೆ ಇತರ ನಾಯಕರು ಉಪಸ್ಥಿತರಿರುತ್ತಾರೆ.

ಇದನ್ನೂ ಓದಿ: ಸಿಎಂ ನಾಯಕತ್ವ ಬದಲಾವಣೆ ವಿಚಾರ.. ಕೇಂದ್ರದ ವಿರುದ್ಧ ಕನ್ನಡ ಪರ ಹೋರಾಟಗಾರರ ಗುಡುಗು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.