ETV Bharat / city

ಮಾ.13ಕ್ಕೆ ರಾಜ್ಯಕ್ಕೆ ಬಿಜೆಪಿ ರಾಜ್ಯ ಉಸ್ತುವಾರಿ ಭೇಟಿ: ಜಾರಕಿಹೊಳಿ ಜೊತೆ ಚರ್ಚೆ ಅರುಣ್ ಸಿಂಗ್ ಚರ್ಚೆ?

ಮಾರ್ಚ್ 13ರ ಶನಿವಾರ ಕಲಬುರಗಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಮಾರ್ಚ್ 14ರ ಭಾನುವಾರ ಬಿಜೆಪಿ ವಿಶೇಷ ಸಭೆ ನಡೆಯಲಿದೆ.

arun singh
ಅರುಣ್ ಸಿಂಗ್
author img

By

Published : Mar 4, 2021, 1:59 AM IST

ಬೆಂಗಳೂರು: ಮಾರ್ಚ್ 13ರಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸುತ್ತಿದ್ದು, ಎರಡು ದಿನಗಳ ಕಾಲ ನಡೆಯಲಿರುವ ರಾಜ್ಯ ಕಾರ್ಯಕಾರಿಣಿ ಹಾಗೂ ವಿಶೇಷ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಇಂದಿನಿಂದ ರಾಜ್ಯ ಬಜೆಟ್ ಅಧಿವೇಶನ ಆರಂಭಗೊಳ್ಳುತ್ತಿದ್ದು, ಬಜೆಟ್ ಅಧಿವೇಶನದ ನಡುವೆಯೇ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಮಾರ್ಚ್ 13ರ ಶನಿವಾರ ಕಲಬುರಗಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಮಾರ್ಚ್ 14ರ ಭಾನುವಾರ ಬಿಜೆಪಿ ವಿಶೇಷ ಸಭೆ ನಡೆಯಲಿದೆ. ಎರಡೂ ದಿನದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.

ಇದನ್ನೂ ಓದಿ: ಚಿಕ್ಕ ಚುನಾವಣೆಯ ದೊಡ್ಡ ಸಂದೇಶ: ದೆಹಲಿ ಸ್ಥಳೀಯ ಚುನಾವಣೆ ಹೇಳೋದೇನು..?

ಅರುಣ್ ಸಿಂಗ್ ರಾಜ್ಯ ಭೇಟಿ ವೇಳೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಮೇಶ್ ಜಾರಕಿಹೊಳಿ ಜೊತೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಸಿ.ಡಿ ಬಹಿರಂಗಗೊಂಡ ಬೆನ್ನಲ್ಲೇ ದೆಹಲಿಗೆ ತೆರಳಲು ಸಿದ್ದರಾಗಿದ್ದ ಜಾರಕಿಹೊಳಿಗೆ ಅನುಮತಿ ನಿರಾಕರಿಸಿದ್ದ ಅರುಣ್ ಸಿಂಗ್ ಸದ್ಯಕ್ಕೆ ದೆಹಲಿಗೆ ಬರಬೇಡಿ ಎಂದು ಸೂಚಿಸಿದ್ದರು. ಹೀಗಾಗಿ ಅರುಣ್ ಸಿಂಗ್ ರಾಜ್ಯಕ್ಕೆ ಬಂದ ವೇಳೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.